BMRCL Recruitment 2022: ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Jan 23, 2022, 3:58 PM IST

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್​​​ಲೈನ್  ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. 


ಬೆಂಗಳೂರು(ಜ.23): ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (Bengaluru Metro Rail Corporation Limited- BMRCL)​ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಹಾಯಕ ಮ್ಯಾನೇಜರ್‌, ಸೀನಿಯರ್ ಟ್ರಾನ್ಸ್​​​ಪೋರ್ಟ್​​ ಪ್ಲ್ಯಾನರ್  ಸೇರಿ ಒಟ್ಟು 11 ಹುದ್ದೆಗಳು ಖಾಲಿ ಇವೆ. ಜನವರಿ 21ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಮತ್ತು ಆಫ್‌ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಫೆಬ್ರವರಿ 21 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ  ಅಧಿಕೃತ ವೆಬ್​ಸೈಟ್​ https://english.bmrc.co.in/ ಗೆ ಭೇಟಿ ನೀಡಬಹುದು.

ಒಟ್ಟು 11 ಹುದ್ದೆಗಳ ಮಾಹಿತಿ
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-4
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)-1
ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)-6

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹುದ್ದೆಗನುಸಾರವಾಗಿ ಓದಿರಬೇಕು
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ, ಬಿ.ಟೆಕ್ ಮಾಡಿರಬೇಕು.
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- ಸಿವಿಲ್ ಎಂಜಿನಿಯರಿಂಗ್, ಟ್ರಾನ್ಸ್​ಪೋರ್ಟ್​ ಪ್ಲ್ಯಾನಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)- ಎಂಬಿಎ, ಎಕನಾಮಿಕ್ಸ್​/ಕಾಮರ್ಸ್​​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

INDIAN ARMY RECRUITMENT 2022: ಕಾನೂನು ಪದವೀಧರರಾಗಿದ್ದರೆ ಭಾರತೀಯ ಸೇನೆಯಲ್ಲಿ ಸುವರ್ಣಾವಕಾಶ

ಅನುಭವ:
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​- ಕನಿಷ್ಠ 18 ವರ್ಷ ಅನುಭವ ಹೊಂದಿರಬೇಕು.
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- 8ರಿಂದ 10 ವರ್ಷ ಅನುಭವ ಹೊಂದಿರಬೇಕು.
ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)-ಕನಿಷ್ಠ 5 ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ:
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​- 55 ರಿಂದ 63 ವರ್ಷ
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)-ಬಿಎಂಆರ್​ಸಿಎಲ್​ ನೇಮಕಾತಿ ಪ್ರಕಾರ ವಯೋಮಿತಿ ಇರಲಿದೆ
ಅಸಿಸ್ಟೆಂಟ್ ಮ್ಯಾನೇಜರ್ - 35 ವರ್ಷ

ಮಾಸಿಕ ವೇತನ:
ಚೀಫ್​ ಎಂಜಿನಿಯರ್ಸ್​/ಅಡ್ವೈಸರ್ಸ್​-  1,40,000 ರಿಂದ 1,80,000 ರೂ
ಸೀನಿಯರ್ ಟ್ರಾನ್ಸ್​​ಪೋರ್ಟ್​ ಪ್ಲ್ಯಾನರ್(ಕನ್ಸಲ್ಟೆಂಟ್)- ಮಾಸಿಕ 1,00,000 ರೂ
ಅಸಿಸ್ಟೆಂಟ್ ಮ್ಯಾನೇಜರ್(ಪ್ರಾಪರ್ಟಿ ಡೆವಲಪ್​ಮೆಂಟ್)- ಮಾಸಿಕ  50,000 ರೂ.

ಆಯ್ಕೆ ಪ್ರಕ್ರಿಯೆ: ನಮ್ಮ ಮೆಟ್ರೋ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್​ಲೈನ್​ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್​
ಕೆ.ಹೆಚ್​. ರಸ್ತೆ , ಶಾಂತಿನಗರ
ಬೆಂಗಳೂರು-560027

ವೀಕೆಂಡ್‌ನಲ್ಲಿ ಬಿಎಂಟಿಸಿ, ನಮ್ಮ ಮೆಟ್ರೋ ಸಂಚಾರ ಯಥಾಸ್ಥಿತಿ: ಕರ್ನಾಟಕದಲ್ಲಿ ವೀಕೆಂಡ್​ ಕರ್ಫ್ಯೂ (Weekend Curfew) ಹಿಂಪಡೆದಿದ್ದರಿಂದ ನಮ್ಮ ಮೆಟ್ರೋ (Namma metro) ಹಾಗೂ ಬಿಎಂಟಿಸಿ  ಬಸ್ (BMTC Bus) ಸಂಚಾರ  ಜ.22 ರಿಂದ ಯಥಾಸ್ಥಿತಿ ಸಂಚರಿಸುತ್ತಿವೆ. ಹೌದು, ಪ್ರತಿ 5 ನಿಮಿಷಕ್ಕೆ ಒಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೂ ನಮ್ಮ ಮೆಟ್ರೋ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ರಾತ್ರಿ 9 ಗಂಟೆಗೆ ಟರ್ಮಿನಲ್ ಸ್ಟೇಷನ್​ನಿಂದ‌ ಕೊನೆಯ ರೈಲು ಹೊರಡಲಿದೆ. ವೀಕೆಂಡ್ ಕರ್ಫ್ಯೂ ವೇಳೆ 30 ನಿಮಿಷಗಳಿಗೆ ಒಂದು ರೈಲು (Train) ಕಾರ್ಯಾಚರಣೆಯಾಗುತ್ತಿತ್ತು. ಸದ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ಹಿನ್ನಲೆ ಮೊದಲಿನಂತೆ ಮೆಟ್ರೋ ಸಂಚಾರ ಇರಲಿದೆ.

click me!