BMTC Recruitment 2024: ಬಿಎಂಟಿಸಿಯಲ್ಲಿ ಖಾಲಿ ಇರುವ 2500 ಕಂಡಕ್ಟರ್‌ ಹುದ್ದೆಗೆ ಅರ್ಜಿ ಆಹ್ವಾನ

By Suvarna NewsFirst Published Apr 6, 2024, 11:00 AM IST
Highlights

 ಬಿಎಂಟಿಸಿ ಖಾಲಿ ಇರುವ‌ 2500 ನಿರ್ವಾಹಕ ಹುದ್ದೆಗಳು ಹಾಗೂ ಜಿಟಿಟಿಸಿಯಲ್ಲಿ ಖಾಲಿ ಇರುವ 76 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಬೆಂಗಳೂರು (ಏ.6): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಖಾಲಿ ಇರುವ‌ 2500 ನಿರ್ವಾಹಕ ಹುದ್ದೆಗಳು ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಖಾಲಿ ಇರುವ 76 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ ಲಿಂಕನ್ನು ಏ.19ರಂದು ಬಿಡುಗಡೆ‌ ಮಾಡಲಾಗುವುದು. ಅರ್ಜಿ ಸಲ್ಲಿಸಲು ಮೇ 18 ಕೊನೆ ದಿನ. ಅರ್ಹರು ಈ ಅವಧಿಯಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿವರಗಳಿಗೆ ಕೆಇಎ ವೆಬ್‌ಸೈಟ್‌ https://kea.kar.nic.in ವೀಕ್ಷಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ಮಹಾವಿದ್ಯಾಲಯದಲ್ಲಿ ಉದ್ಯೋಗಾವಕಾಶ

ನೇಮಕಾತಿ ಸಂಸ್ಥೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆ ಹೆಸರು : ನಿರ್ವಾಹಕ (ಕಂಡಕ್ಟರ್ )
ಹುದ್ದೆಗಳ ಸಂಖ್ಯೆ : 2500.

ಅರ್ಹತೆಗಳು:
ಯಾವುದೇ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್ ಅಥವಾ ಐಸಿಎಸ್‌ಇ / ಸಿಬಿಎಸ್‌ಇ ಹನ್ನೆರಡನೇ ತರಗತಿ ಪಾಸ್. ಅಥವಾ 3 ವರ್ಷಗಳ ಡಿಪ್ಲೊಮ ಪಾಸ್‌ ಆಗಿರಬೇಕು. ಮುಕ್ತ ಶಾಲೆ ಅಥವಾ ಮುಕ್ತ ವಿವಿಯಿಂದ ಪಿಯುಸಿ/ 12ನೇ ತರಗತಿಯನ್ನು ಅಥವಾ ಜೆಒಸಿ / ಜೆಎಲ್‌ಸಿ ಕೋರ್ಸ್‌ ಮಾಡಿರುವವರು ಅರ್ಜಿ ಹಾಕಲು ಅರ್ಹರಲ್ಲ.

ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್‌ ಅನ್ನು ಹೊಂದಿರತಕ್ಕದ್ದು.
ಪುರುಷರ ಎತ್ತರ 160 CM, ಮಹಿಳೆಯರ ಎತ್ತರ 150 CM ಇರಬೇಕು.

ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ವರ್ಷ ಕಾಲ ವೃತ್ತಿ ತರಬೇತಿಯಾಗಿ ನಿಯೋಜಿಸಲಾಗುವುದು. ಈ ತರಬೇತಿ ಅವಧಿಯಲ್ಲಿ ಮಾಸಿಕ ಸಮಗ್ರ ತರಬೇತಿ ಭತ್ಯೆಯಾಗಿ ರೂ.9,100 ನೀಡಲಾಗುತ್ತದೆ. ಆಯ್ಕೆಯಾದವರಿಗೆ ರೂ.18660-25300 ವೇತನ ಶ್ರೇಣಿ ಇರಲಿದೆ.

ಕರ್ನಾಟಕ ಲೆಕ್ಕ ಪರಿಶೋಧನೆ, ಲೆಕ್ಕ ಪತ್ರ ಇಲಾಖೆಯಲ್ಲಿ ನೇಮಕಾತಿ, 1 ಲಕ್ಷದವರೆಗೆ ವೇತನ

ವಯೋಮಿತಿ: 
ಅರ್ಜಿ ಸಲ್ಲಿಸಲು ಇಚ್ಚಿಸುವವರ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. 
ಸಾಮಾನ್ಯ ವರ್ಗ - 35 ವರ್ಷಗಳು.
2A / 2B / 3A / 3B ಅಭ್ಯರ್ಥಿಗಳಿಗೆ 38 ವರ್ಷಗಳು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳು.
ಮಾಜಿ ಸೈನಿಕ / ಇಲಾಖಾ ಅಭ್ಯರ್ಥಿಗಳಿಗೆ 45 ವರ್ಷಗಳು.

ಅಪ್ಲಿಕೇಶನ್‌ ಶುಲ್ಕ ವಿವರ ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳಿಗೆ ಅರ್ಜಿ ಶುಲ್ಕ ರೂ.750.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500.

click me!