KNNL Recruitment 2022: ಕರ್ನಾಟಕ ನೀರಾವರಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Feb 20, 2022, 8:47 PM IST

ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​ ಖಾಲಿ  ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 3, 2022 ಕೊನೆಯ ದಿನವಾಗಿದೆ. 


ಬೆಂಗಳೂರು (ಫೆ.20): ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​ ಖಾಲಿ (Karnataka Neeravari Nigam Limited -KNNL) ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ.   ಇಲಾಖೆಯಲ್ಲಿ ವಿವಿಧ ಮ್ಯಾನೇಜರ್ ಹುದ್ದೆಗಳು, ಅಸಿಸ್ಟೆಂಟ್, ಡೇಟಾ ಎಂಟ್ರಿ ಆಪರೇಟರ್, ರಿಸೆಪ್ಶನಿಸ್ಟ್​ ಹೀಗೆ ವಿವಿಧ ಹುದ್ದೆಗಳು ಖಾಲಿ ಇದ್ದು  ಅಭ್ಯರ್ಥಿಗಳು ಆಫ್​ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 3, 2022 ಕೊನೆಯ ದಿನವಾಗಿದೆ. ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ  ಇಲಾಖೆಯ ಅಧಿಕೃತ ವೆಬ್‌ತಾಣ knnlindia.com ಗೆ ಭೇಟಿ ನೀಡಬಹುದು.

ಹುದ್ದೆಗಳ ಮಾಹಿತಿ:
ಉಪ ಪ್ರಧಾನ ವ್ಯವಸ್ಥಾಪಕರು (Deputy General Manager) - ಹಣಕಾಸು ವಿಭಾಗ
ಸಹಾಯಕ ಪ್ರಧಾನ ವ್ಯವಸ್ಥಾಪಕರು (Assistant General Manager) - ಹಣಕಾಸು ವಿಭಾಗ
ವ್ಯವಸ್ಥಾಪಕರು (Managers ) - ಹಣಕಾಸು ವಿಭಾಗ 
ಸಹಾಯಕ ವ್ಯವಸ್ಥಾಪಕರು (Assistant Manager) - ಹಣಕಾಸು ವಿಭಾಗ
ಸಹಾಯಕ ಆಡಳಿತ ಅಧಿಕಾರಿ (Assistant Administrative )
ಲೆಕ್ಕ ಸಹಾಯಕರು (Accounting Assistants)
ಹಿರಿಯ ಸಹಾಯಕರು (Senior Assistant ) - ಕಾನೂನು ವಿಭಾಗ    
ಡಾಟಾ ಎಂಟ್ರಿ ಆಪರೇಟರ್ (data entry operatorr)
ರಿಸೆಪ್ಷನಿಸ್ಟ್‌ (receptionist)

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​  ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳು ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹಣಕಾಸು ವಿಷಯದಲ್ಲಿ ಎಂಬಿಎ, ಎಲ್ ಎಲ್ ಬಿ, ಪದವಿ, ಅಕೌಂಟಿಂಗ್ , ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ  ಪಡೆದಿರಬೇಕು.

IGM RECRUITMENT 2022: 10ನೇ ತರಗತಿಯಾದವರಿಗೆ ಬಂಗಾರದಂತಹ ಉದ್ಯೋಗವಕಾಶ!

ವಯೋಮಿತಿ:  ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​  ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳು ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ನಿಗದಿಯಾಗಿದೆ.

ಆಯ್ಕೆ ಪ್ರಕ್ರಿಯೆ:  ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​  ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳು ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ವಿವರ:  ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್​  ನಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗಳು ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಶೈಕ್ಷಣಿಕ ದಾಖಲೆಗಳು
ಕೆಲಸದ ಅನುಭವದ ದಾಖಲೆಗಳು
ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
ಇತರೆ ದಾಖಲೆಗಳು

ESIC Recruitment 2022: ಭೋಧಕರ ಹುದ್ದೆಗೆ ಅರ್ಜಿ ಆಹ್ವಾನ, ಮಾರ್ಚ್ 2 ರಂದು ನೇರ ಸಂದರ್ಶನ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾದ ವಿಳಾಸ:
ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್
ರಿಜಿಸ್ಟರರ್ಡ್​ ಆಫೀಸ್
4ನೇ ಮಹಡಿ
ಕಾಫಿ ಬೋರ್ಡ್ ಬಿಲ್ಡಿಂಗ್
ನಂ.1, ಡಾ.ಬಿ.ಆರ್​.ಅಂಬೇಡ್ಕರ್ ವೀಧಿ
ಬೆಂಗಳೂರು-560001
Karnataka Neeravari Nigam Limited,
Registered Office
04th Floor,
Coffee Board Building,
No.1, Dr. B.R. Ambedkar Veedhi,
Bengaluru – 560001

ಸದ್ಯದಲ್ಲೇ ಉದ್ಯೋಗದ ಬಗ್ಗೆ ಸ್ವಯಂ ಚಾಲಿತವಾಗಿ ತಿಳಿಸುವ ಕೃತಕ ಬುದ್ದಿಮತ್ತೆ ಆಧಾರಿತ ತಂತ್ರಜ್ಞಾನ: ಅಶ್ವತ್ಥನಾರಾಯಣ

click me!