BBMP Recruitment 2022: ಕಾನೂನಿನ ಅರಿವಿದ್ದರೆ ಬಿಬಿಎಂಪಿಯಲ್ಲಿ ಉದ್ಯೋಗವಕಾಶ

By Suvarna News  |  First Published Feb 18, 2022, 9:23 PM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥರ   ಹುದ್ದೆಗಾಗಿ ಅರ್ಜಿ ಆಹ್ವಾನಿಸಿದ್ದು, ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. 


ಬೆಂಗಳೂರು(ಫೆ.18): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (Bruhat Bengaluru Mahanagara Palike) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ  ಕಾನೂನು ಕೋಶದ ಮುಖ್ಯಸ್ಥ (head of the legal cell ) ಹುದ್ದೆಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಫ್ ಲೈನ್ (Offline) ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು  https://bbmp.gov.in/home ಅಥವಾ  https://site.bbmp.gov.in/Recruitment.html  ಗೆ ಭೇಟಿ ನೀಡಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (BBMP) ಖಾಲಿ ಇರುವ ಕಾನೂನು (Law) ಕೋಶದ ಮುಖ್ಯಸ್ಥರ   ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸೇವಾ ವಿಷಯಗಳಲ್ಲಿ, ಕಾರ್ಮಿಕರ ಕಾನೂನು, ಭೂ ಕಾನೂನು ಹೀಗೆ ಕಾನೂನು ವಿಚಾರದಲ್ಲಿ  ಉತ್ತಮ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

Tap to resize

Latest Videos

undefined

ಕೆಲಸದ ಅನುಭವ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥರ   ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು,  ಕರ್ನಾಟಕದಲ್ಲಿ (Karnataka) ಕನಿಷ್ಠ 10 ವರ್ಷಗಳ ವಕೀಲ ವೃತ್ತಿಯ ಅನುಭವ ಹೊಂದಿಬೇಕು. ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರು (Retired District and Sessions Judge) ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

MYSURU MUSLIM FAMILY DONATES LANDS: ಸರಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿ ದಾನ ಮಾಡಿದ ಎಚ್.ಡಿ ಕೋಟೆ ಮುಸ್ಲಿಂ ಕುಟುಂಬ

ಹುದ್ದೆಯ ಅವಧಿ, ಸೌಲಭ್ಯಗಳು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥರ  ಹುದ್ದೆಯ  ಅವಧಿ ಆರಂಭದಲ್ಲಿ 01 ವರ್ಷದವರೆಗಿರುತ್ತದೆ. ಕೆಲಸದ ರೀತಿಯನ್ನು ಆಧರಿಸಿ 01 ರಿಂದ 03 ವರ್ಷಗಳವರೆಗೆ ವೃತ್ತಿಯಲ್ಲಿ ಮುಂದುವರೆಸಲಾಗುವುದು.

ಕಾನೂನು ಕೋಶದ ಮುಖ್ಯಸ್ಥರ  ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ  ಬಿಬಿಎಂಪಿ ಉದ್ಯೋಗಿಗಳಿರುವಂತೆ ರಜೆ ಮತ್ತು ವೈದ್ಯಕೀಯ ಸೌಲಭ್ಯಗಳಿರಲಿದೆ. ಕೆಸಿಎಸ್‌ಆರ್‌ ನಿಯಮಗಳ ಪ್ರಕಾರ ವೇತನ ದೊರೆಯಲಿದೆ. 

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ: ಬೃಹತ್ ಬೆಂಗಳೂರು (Bengaluru) ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥರ   ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 65 ವರ್ಷ ವಯೋಮಿತಿ ಮೀರಿರಬಾರದು. ಈ ಹುದ್ದೆಗೆ ಅರ್ಜಿ ಸಲ್ಲಿಸಿದವರನ್ನು ಸಂದರ್ಶನದ ಮೂಲಕ ಆಯ್ಕೆ  ಮಾಡಲಾಗುವುದು.

TUMAKURU ANGANAWADI RECRUITMENT 2022: ತುಮಕೂರು ಜಿಲ್ಲೆಯಾದ್ಯಂತ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವ ವಿಧಾನ ಮತ್ತು ವಿಳಾಸ:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಕಾನೂನು ಕೋಶದ ಮುಖ್ಯಸ್ಥರ   ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಜೊತೆಗೆ ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿರುವ ಅರ್ಜಿಗಳನ್ನು  ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಬೇಕು. ಅರ್ಜಿಯ ಲಕೋಟೆ ಮೇಲೆ 'ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗಾಗಿ ಅರ್ಜಿ' ಎಂದು  ಸ್ಪಷ್ಟವಾಗಿ ನಮೂದಿಸಿರಬೇಕು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ  ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಮುಖ್ಯ ಆಯುಕ್ತರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
 ಎನ್‌.ಆರ್‌, ಚೌಕ, ಬೆಂಗಳೂರು-560002.

Karnataka State Law University exams: 2 ಮತ್ತು 3ನೇ ಸೆಮಿಸ್ಟರ್ ಪರೀಕ್ಷೆ ಶೀಘ್ರವೇ ನಡೆಸಲು ಕರ್ನಾಟಕ ಹೈಕೋರ್ಟ್ ಸೂಚನೆ

click me!