ಕರ್ನಾಟಕ ಹಾಲು ಒಕ್ಕೂಟದಲ್ಲಿ ನೇಮಕಾತಿ: ಅರ್ಜಿ ಹಾಕಿ

By Suvarna News  |  First Published Dec 10, 2019, 5:15 PM IST

ಗುಮುಲ್ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿನಂತೆ ನೀಡಲಾಗಿದೆ.


ಬೆಂಗಳೂರು, (ಡಿ.10): ಕಲಬುರಗಿ, ಬೀದರ್‌, ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಖಾಲಿ ಇರುವ ಅಗತ್ಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. 

ಒಟ್ಟು 37 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ಜನವರಿ 5, 2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ 

ವಯೋಮಿತಿ:  ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದ್ದು,  ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಗರಿಷ್ಠ  38 ವರ್ಷ, ಪ್ರವರ್ಗ-1, ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಹುದ್ದೆಗಳ ವಿವರ: 
ಮಾರುಕಟ್ಟೆ ಅಧೀಕ್ಷರು (ಪ್ರೊಟೆಕ್ಷನ್‌): ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಿಎ/ ಬಿಕಾಂ/ ಬಿಎಸ್ಸಿ ಪದವಿಯೊಂದಿಗೆ ಡಿಪ್ಲೊಮಾ (ಫೈರ್‌ ಮತ್ತು ಸೇಫ್ಟಿ ಕೋರ್ಸ್‌) ಮಾಡಿರಬೇಕು.

ವಿಸ್ತರಣಾಧಿಕಾರಿ ದರ್ಜೆ-3: ಈ ಹುದ್ದೆಗೆ ಬಿಎ/ ಬಿಕಾಂ/ ಬಿಎಸ್ಸಿ / ಬಿಬಿಎಂ/ ಬಿಬಿಎ ಪದವಿ ತೇರ್ಗಡೆಹೊಂದಿರಬೇಕು.

ಕಿರಿಯ ತಾಂತ್ರಿಕರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಸರಕಾರದಿಂದ ಅಂಗೀಕೃತಗೊಂಡ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಎಂಆರ್‌ಎಸಿ/ ಎಲೆಕ್ಟ್ರಿಕಲ್‌/ ಫಿಟ್ಟರ್‌ ಐಟಿಐ ಕೋರ್ಸ್‌ನಲ್ಲಿ ಉತ್ತೀರ್ಣರಾಗಿ ಅಪ್ರೆಂಟಿಸ್‌ ಸರ್ಟಿಫಿಕೇಟ್‌ ಹೊಂದಿರಬೇಕು.

ಮಾರುಕಟ್ಟೆ ಅಧಿಕಾರಿ ಮತ್ತು ಮಾರುಕಟ್ಟೆ ಅಧೀಕ್ಷಕರು: ಬಿಎ/ ಬಿಕಾಂ/ ಬಿಎಸ್ಸಿ/ ಬಿಬಿಎಂ ಪದವಿಯೊಂದಿಗೆ ಎಂಬಿಎ (ಮಾರ್ಕೆಟಿಂಗ್‌) ಪೂರ್ಣಗೊಳಿಸಿರಬೇಕು. ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಒಂದು ವರ್ಷದ ಕಾರ್ಯಾನುಭವ ಹೊಂದಿರಬೇಕು.

ಖರೀದಿ/ ಉಗ್ರಾಣ ಅಧಿಕಾರಿ: ಅಂಗೀಕೃತ ವಿವಿಯಿಂದ ಬಿಕಾಂ/ಬಿಬಿಎಂನೊಂದಿಗೆ ಒಂದು ವರ್ಷದ ಪಿಜಿಡಿಎಂಎಂ ಅಥವಾ ಎಂಬಿಎ (ಮೆಟೀರಿಯಲ್‌ ಮ್ಯಾನೇಜ್‌ಮೆಂಟ್‌) ವಿದ್ಯಾರ್ಹತೆ ಪಡೆದಿರಬೇಕು.

ಹಿರಿಯ ಕೆಮಿಸ್ಟ್‌: ಮೈಕ್ರೋಬಯೋಲಜಿ ಅಥವಾ ಕೆಮಿಸ್ಟ್ರಿಯಲ್ಲಿಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೆಮಿಸ್ಟ್‌ ದರ್ಜೆ-1 ರ ಹುದ್ದೆಗೂ ಇದೇ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಕಚೇರಿಯ ಅಧಿಕೃತ ವೆಬ್‌ಸೈಟ್‌ ಗಾಗಿ ಇಲ್ಲಿ ಕ್ಲಿಕ್ ಮಾಡಿ

click me!