ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ಹುದ್ದೆಗಳಿಗೆ ಯಾವಾಗ ಪರೀಕ್ಷೆ..? ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಬೆಂಗಳೂರು,[ಡಿ.04]: ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಗ್ರೂಪ್‌ಗಳ ಹುದ್ದೆಗಳಿಗೆ ಲಿಖಿತ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.
06-12-2018ರ ಅಧಿಸೂಚನೆಯಲ್ಲಿ ಸೂಚಿಸಿರುವ ವಿವಿಧ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ತಾಂತ್ರಿಕ ಹುದ್ದೆಗಳಿಗೆ ಆಯೋಗವು ನಡೆಸಲಿರುವ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
undefined
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗ್ರೂಪ್ ಎ ಮತ್ತು ಬಿ ತಾಂತ್ರಿಕ ಹುದ್ದೆಗಳಿಗೆ ದಿನಾಂಕ ಇದೇ ಡಿಸೆಂಬರ್ 16 ಮತ್ತು 17ರಂದು ಪರೀಕ್ಷೆ ನಡೆಯಲಿವೆ.
ರಾಜ್ಯ ಕಾರ್ಮಿಕ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ, ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ, ವಿವಿಧ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ, ಸಾಮಾನ್ಯ ಪತ್ರಿಕೆ, ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆ ನಡೆಸಲಾಗುತ್ತದೆ.
ಆದ್ರೆ, ಇದನ್ನು ಅಂತಿಮವೆಂದು ತಿಳಿದುಕೊಳ್ಳಬೇಡಿ. ಯಾಕಂದ್ರೆ ಈ ಹಿಂದೆ ನಾನಾ ಕಾರಣಗಳಿಂದ ಪರೀಕ್ಷೆಗಳು ಮುಂದೂಡಿದ್ದು ಸಾಕಷ್ಟು ಉದಾಹರಣೆಗಳು ಉಂಟು.
ಈ ಹಿನ್ನೆಲೆಯಲ್ಲಿ ವೇಳಾಪಟ್ಟಿತಂತೆ ಇದೇ ದಿನಾಂಕಗಳಂದು ಪರೀಕ್ಷೆ ನಡೆಸಲಾಗುತ್ತದೆಯೇ ಅಥವಾ ಬದಲಾಯಿಸಲಾಗುತ್ತದೆಯೋ ಎಂಬುದನ್ನು ತಿಳಿಯಲು ಅಭ್ಯರ್ಥಿಗಳು ಆಗಾಗ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ ಚೆಕ್ ಮಾಡಬೇಕೊಳ್ಳವುದು ಸೂಕ್ತ.
ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ಚೆಕ್ ಮಾಡ್ಕೊಳ್ಳಿ...