ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

By Suvarna News  |  First Published Dec 10, 2019, 3:16 PM IST

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ 2814 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ ಮತ್ತು ಇತರೆ ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ಡಿ.10): ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಖಾಲಿ ಇರುವ ಚಾಲಕ, ಚಾಲಕ ಕಮ್ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಚಾಲಕ 55 ಹುದ್ದೆ ಹಾಗೂ 259 ಚಾಲಕ ಕಮ್ ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 8-01-2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಹುದ್ದೆಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗ, ಶಿರಸಿ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತಿದೆ.

 ಅರ್ಹತೆಗಳು :
1.ಚಾಲಕ ಹುದ್ದೆ:  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC (10 ನೇ ತರಗತಿ) ಉತ್ತೀರ್ಣರಾಗಿರಬೇಕು. ಹಾಗೂ ಚಾಲ್ತಿ ಇರುವ ಭಾರೀ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ  ಜತೆಗೆ ಕರ್ನಾಟಕ PSV ಬ್ಯಾಡ್ಜ್‌  ಹೊಂದಿರಬೇಕು.

2.ಚಾಲಕ ಕಮ್ ನಿರ್ವಾಹಕ:  ಅಭ್ಯರ್ಥಿಗಳು SSLC  ಅಥವಾ ತತ್ಸಮಾನ ತೇರ್ಗಡೆಯಾಗಿರಬೇಕು. ಮತ್ತು ಹೆವಿ ವೆಹಿಕಲ್ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು. * PSV ಬ್ಯಾಡ್ಜ್‌ ಮತ್ತು ಪಾಸೆಂಜರ್ ವೆಹಿಕಲ್ ಲೈಸನ್ಸ್‌ ಹೊಂದಿರಬೇಕು.

ಈ ಬಗ್ಗೆ ಇನ್ನಷ್ಟು ಮಾಹಿತಿ ಸಂಸ್ಥೆಯ ವೆಬ್‌ಸೈಟ್‌ ವಿಳಾಸ www.nwkrtc.in ಗೆ ಭೇಟಿ ನೀಡಿ.

click me!