Mekedatu Padayatre: ಈಶ್ವ​ರ​ಪ್ಪ​ನಿಗೆ ಏನೊ ಸ್ವಲ್ಪ ತೊಂದರೆ ಇದೆ: ಡಿಕೆಶಿ

By Kannadaprabha NewsFirst Published Mar 1, 2022, 3:15 AM IST
Highlights

ಸಚಿವ ಕೆ.ಎಸ್‌ .ಈ​ಶ್ವ​ರ​ಪ್ಪ​ನಿಗೆ ಏನೊ ಸ್ವಲ್ಪ ತೊಂದರೆ ಇದೆ. ಅವ​ನನ್ನು ಮೆಂಟಲ್‌ ಆಸ್ಪ​ತ್ರೆಗೆ ಸೇರಿ​ಸಲು ಬೆಡ್‌ ಹುಡು​ಕು​ತ್ತಿ​ದ್ದೇನೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಾಗ್ದಾಳಿ ನಡೆಸಿದರು.

ರಾಮ​ನ​ಗರ (ಮಾ.01): ಸಚಿವ ಕೆ.ಎಸ್‌ .ಈ​ಶ್ವ​ರ​ಪ್ಪ​ನಿಗೆ (KS Eshwarappa) ಏನೊ ಸ್ವಲ್ಪ ತೊಂದರೆ ಇದೆ. ಅವ​ನನ್ನು ಮೆಂಟಲ್‌ ಆಸ್ಪ​ತ್ರೆಗೆ ಸೇರಿ​ಸಲು ಬೆಡ್‌ ಹುಡು​ಕು​ತ್ತಿ​ದ್ದೇನೆ ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿವ​ಕು​ಮಾರ್‌ (DK Shivakumar)  ವಾಗ್ದಾಳಿ ನಡೆ​ಸಿ​ದರು. ಪಾದ​ಯಾತ್ರೆ ಮಧ್ಯೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಬೆಂಗ​ಳೂ​ರಿನ ನಿಮ್ಹಾನ್ಸ್‌ ಆಸ್ಪತ್ರೆ ಚೆನ್ನಾ​ಗಿದೆ. ಅದೂ ಇಲ್ಲ ಅಂದರೆ ಬೇರೆ ಆಸ್ಪ​ತ್ರೆಗೆ ಸೇರಿ​ಸೋಣ. ಈಶ್ವ​ರಪ್ಪ ಹಗು​ರ​ವಾಗಿ ಮಾತ​ನಾ​ಡು​ವು​ದನ್ನು ಬಿಡ​ಬೇಕು ಎಂದ​ರು.

ಪಾದ​ಯಾ​ತ್ರೆಗೆ ಬಿಬಿ​ಎಂಪಿ (BBMP) ಅನು​ಮತಿ ನಿರಾ​ಕ​ರಿ​ಸಿ​ರುವ ಪ್ರಶ್ನೆಗೆ ನಮಗೆ ಅನು​ಮತಿ ನೀಡ​ದಿ​ದ್ದರೂ ಹೋರಾಟ ಮಾಡು​ತ್ತೇವೆ. ನ್ಯಾಷ​ನಲ್‌ ಕಾಲೇಜು ಮೈದಾ​ನ​ದಲ್ಲಿ ಅನು​ಮತಿ ದೊರ​ಕಿದೆ. ಕೋವಿಡ್‌ ನಿಯ​ಮ ಗಮ​ನ​ದ​ಲ್ಲಿ​ಟ್ಟು​ಕೊಂಡು ಹೋರಾಟ ಮಾಡು​ತ್ತಿ​ದ್ದೇವೆ. ಹೋರಾ​ಟ​ಗಾ​ರ​ರಿಗೆ ಯಾರ ಅನು​ಮತಿ ಬೇಕು. ಮುಖ್ಯ​ಮಂತ್ರಿ​ಗ​ಳಿಗೆ ತಿಳಿ​ಸಿ​ದ್ದೇವೆ. ಟ್ರಾಫಿಕ್‌ ಹಾಗೂ ಕೋವಿಡ್‌ ನಿಯಮ ಗಮ​ನ​ದ​ಲ್ಲಿ​ಟ್ಟು​ಕೊಂಡು ಪಾದ​ಯಾತ್ರೆ ಮಾಡು​ವಂತೆ ಹೇಳಿ​ದ್ದಾರೆ. ಪಾದ​ಯಾತ್ರೆ ನಡೆ​ಸು​ತ್ತೇವೆ ಎಂಬ ಕಾರ​ಣ​ಕ್ಕಾ​ಗಿಯೇ ನಿಯ​ಮ​ಗ​ಲನ್ನು ಹಾಕು​ತ್ತಾರೆ.

Latest Videos

Mekedatu Padayatre: ನನ್ನ ಸಾಯಿಸಿದರೂ ಪಾದಯಾತ್ರೆ ನಿಲ್ಲದು: ಡಿಕೆಶಿ

ಸರ್ಕಾರ ನಿಯ​ಮ​ಗ​ಳನ್ನು ಜಾರಿ​ಗೊ​ಳಿ​ಸಿ​ದ್ದರೆ ಸಂಸದ ರಾಘ​ವೇಂದ್ರ ಹಾಗೂ ಸಚಿವ ಈಶ್ವ​ರಪ್ಪ ಅವ​ರ ವಿರುದ್ಧ ಎಫ್‌ ಐಆರ್‌ ದಾಖ​ಲಿಸಿ ಏಕೆ ಬಂಧಿ​ಸ​ಲಿಲ್ಲ. ಭಜ​ರಂಗ​ದ​ಳ​ದ​ವರ ಮೇಲೆ ಏಕೆ ಕೇಸು ಹಾಕಿಲ್ಲ. ಅವ​ರಿಗೆ ಒಂದು ನ್ಯಾಯ, ನಮಗೆ ಒಂದು ನ್ಯಾಯವೇ ಎಂದು ಪ್ರಶ್ನಿ​ಸಿ​ದರು. ಉರಿ ಬಿಸಿ​ನಲ್ಲಿ ವಿಶ್ರಾಂತಿಯನ್ನು ಪಡೆ​ಯದೇ ಪಾದ​ಯಾತ್ರೆ ನಡೆ​ಸು​ತ್ತಿ​ದ್ದೇವೆ. ಐದು ದಿನ ಕಷ್ಟಆಗ​ಬ​ಹುದು ಅಷ್ಟೆ. ಆದರೆ, ನಮ್ಮ ಹೋರಾ​ಟ​ದಿಂದ ಜನರು 50 ವರ್ಷ ಆರಾ​ಮಾಗಿ ಇರ​ಬ​ಹುದು. ಜನರ ಬದು​ಕಿ​ಗಾಗಿ ಹೋರಾಟ ಮಾಡು​ತ್ತಿ​ದ್ದೇವೆ ಎಂದು ಹೇಳಿ​ದ​ರು.

ಪ್ರಧಾನಿ ಮೋದಿ ಅವರು ಎರಡು ಕೋಟಿ ಜನರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಆದ​ರೆ, ಯಾರಿಗೂ ಕೊಡಲಿಲ್ಲ. ಉದ್ಯೋಗ ಇಲ್ಲದಂತೆ ಮಾಡಿರುವುದು ಬಿಜೆಪಿ ಸರ್ಕಾರ. ಉದ್ಯೋಗ ಇಲ್ಲದಕ್ಕೆ ಜನರು ಪಾದಯಾತ್ರೆ ಬಂದು ನಡೆಯುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಬಿಜೆಪಿ ಸರ್ಕಾರ ಎಂದು ಸಚಿವ ಈಶ್ವ​ರಪ್ಪ ಹೇಳಿ​ಕೆಗೆ ಶಿವ​ಕು​ಮಾರ್‌ ತಿರು​ಗೇಟು ನೀಡಿ​ದರು.

ಹರಕುಬಾಯಿ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ: ಹರಕುಬಾಯಿ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಬಗ್ಗೆ ಮಾತ್ರವಲ್ಲದೆ ನಮ್ಮ ತಂದೆಯವರ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರಧ್ವಜಕ್ಕೆ (National Flag) ಅಪಮಾನ ಮಾಡಿರುವ ಆತ ಮೊದಲು ಸಚಿವ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ದೇಶ ಒಡೆಯುವ ಹೇಳಿಕೆ ಸಮರ್ಥಿಸಿಕೊಳ್ಳುತ್ತಿರುವ ಸರ್ಕಾರದ (Government of Karnataka) ಕ್ರಮ ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಸಚಿವ ಈಶ್ವರಪ್ಪ ಅವರನ್ನು ವಜಾಗೊಳಿಸಿ ದೇಶದ್ರೋಹ (Treason) ಪ್ರಕರಣ ದಾಖಲಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದರು. 

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು (Farmers) ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಕೆಳಭಾಗದಲ್ಲಿ ರೈತರ ಧ್ವಜ ಹಾರಿಸಲು ಮುಂದಾದಾಗ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಿಲ್ಲವೇ? ಅದೇ ರೀತಿ ಈಶ್ವರಪ್ಪ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೂ ಅಹೋರಾತ್ರಿ ಧರಣಿ ಮುಂದುವರೆಸುತ್ತೇವೆ ಎಂದರು.

Mekedatu Padayatre: ಜೆಡಿಎಸ್‌ ಕೋಟೆಯಲ್ಲಿ ಕಾಂಗ್ರೆಸ್‌ ಶಕ್ತಿ ಪ್ರದರ್ಶನ: ಬಿಡದಿ ತಲುಪಿದ ಕಾಲ್ನಡಿಗೆ

ನಾನು ಶಾಸನ ಸಭೆಯಲ್ಲಿ ಯಾರಿಗೂ ನೀನು ಎಂದಿಲ್ಲ. ಆದರೆ ಅವರು ನಮ್ಮ ತಂದೆ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪೂರ್ವಿಕರು ಗಾಂಧಿ ತತ್ವ ಅನುಸರಿಸುತ್ತಿದ್ದರು. ನಮ್ಮ ಪಕ್ಷಕ್ಕೆ ಸ್ವಾತಂತ್ರ್ಯ ಹೋರಾಟದ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಎಲ್ಲವನ್ನು ಕೊಟ್ಟಿರುವವರು ನಮ್ಮ ಪಕ್ಷದವರು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಲ್ಲದೆ ವೈಯಕ್ತಿಕ ನಿಂದನೆ ಮಾಡಿದರೆ ಸುಮ್ಮನಿರಬೇಕಾ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!