ಪಿಎಸ್ಐ ಸೇರಿ ಸರಕಾರದ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಪ್ರಕಟ

By Gowthami K  |  First Published May 25, 2024, 9:42 AM IST

ಪಿಎಸ್ಐ ಹುದ್ದೆಗಳಿಗೆ ಸೇರಿದಂತೆ,  ವಿವಿಧ ಇಲಾಖೆ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಭಾವ್ಯ ಪರೀಕ್ಷೆ ದಿನಾಂಕವನ್ನು ಸರಕಾರ  ಪ್ರಕಟಿಸಿದೆ.


ಬೆಂಗಳೂರು (ಮೇ.25): ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ ಸ್ಪೆಕ್ಟರ್ (ಪಿಎಸ್ಐ) ಹುದ್ದೆಗಳಿಗೆ ಸೇರಿದಂತೆ,  ವಿವಿಧ ಇಲಾಖೆ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಭಾವ್ಯ ಪರೀಕ್ಷೆ ದಿನಾಂಕವನ್ನು ಸರಕಾರ  ಪ್ರಕಟಿಸಿದೆ.  ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.

ಪೋಲಿಸ್ ಇಲಾಖೆಯ 402 ಪಿ ಎಸ್ ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

Latest Videos

ಕರ್ನಾಟಕ ಸರ್ಕಾರದ ಹೊರ ಗುತ್ತಿಗೆ ನೌಕರಿಗೂ ಮೀಸಲಾತಿ ಅನ್ವಯ; ಮಹಿಳೆಯರಿಗೆ ಬಂಪರ್ ಆಫರ್

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಾಯಕ ಲೆಕ್ಕಿಗ, ಸಹಾಯಕ ಸಂಚಾರ ನಿರೀಕ್ಷಕ, ಕ.ರಾ.ಸಾ.ಪೇದೆ, ಕುಶಲಕರ್ಮಿ, ತಾಂತ್ರಿಕ ಸಹಾಯಕ 36 ಹುದ್ದೆಗಳಿಗೆ ಜುಲೈ 12 ರಿಂದ 14ರವರೆಗೆ ಪರೀಕ್ಷೆ ನಿಗದಿಯಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಸಹಾಯಕ ಎಂಜಿನಿಯರ್-ಸಿವಿಲ್, ಪ್ರಥಮ ದರ್ಜೆ ಲೆಕ್ಕ ಸಹಾಯಕರು-ಗ್ರೂಪ್ ಸಿ) 64 ಹುದ್ದೆಗಳಿಗೆ ಆಗಸ್ಟ್ 11ರಂದು ಪರೀಕ್ಷೆ ನಿಗದಿಯಾಗಿದೆ.

ಡಿಫೆನ್ಸ್ ಮೆಟಲರ್ಜಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ನೇಮಕಾತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ನಿರ್ವಾಹಕ- ದರ್ಜೆ-3 ಮೇಲ್ವಿಚಾರಕೇತರ) 2500 ಹುದ್ದೆಗಳಿಗೆ ಸೆಪ್ಟೆಂಬರ್ 1ರಂದು ಪರೀಕ್ಷಾ ವೇಳಾಪಟ್ಟಿ ನಿಗದಿಯಾಗಿದೆ.

ಕಂದಾಯ ಇಲಾಖೆಯ (ಗ್ರಾಮ ಆಡಳಿತ ಅಧಿಕಾರಿ) 1,000 ಹುದ್ದೆಗಳಿಗೆ ಅಕ್ಟೋಬರ್ 27ರಂದು ಪರೀಕ್ಷೆ ನಿಗದಿಯಾಗಿದೆ.

click me!