ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬರೋಬ್ಬರಿ 623 ಅಂಕಗಳನ್ನು (ಶೇ.99.63) ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿದವನಿಗೆ ಓದು ಬರಹವೇ ಬರೊಲ್ಲ. ಇದರಿಂದ ಆಶ್ಚರ್ಯಗೊಂಡ ನ್ಯಾಯಾಧೀಶರೇ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ಕೊಪ್ಪಳ (ಮೇ 21): ರಾಜ್ಯದ ಕಲ್ಯಾಣ ಕರ್ನಾಟಕ ಜಿಲ್ಲೆ ಕೊಪ್ಪಳ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಬಾಗಲಕೋಟೆ ಯುವಕನಿಗೆ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಯಾವುದೇ ಭಾಷೆಯನ್ನು ಓದಲು, ಬರೆಯಲು ಬರುವುದಿಲ್ಲ. ಆದರೂ, ಆತ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಳಿಸಿದ್ದು ಮಾತ್ರ ಬರೋಬ್ಬರಿ 623 ಅಂಕಗಳು. ಈ ಬಗ್ಗೆ ಪರಿಶೀಲಿಸಿದ ನ್ಯಾಯಾಧೀಶರು ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿ, ಆತನ ಮೇಲೆ ಕೇಸ್ ದಾಖಲಿಸಿ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ.
ಹೌದು, ಕೊಪ್ಪಳದಲ್ಲಿ ಓದು ಬರಹ ಬರದದಿದ್ದರೂ ಎಸ್ಸೆಸ್ಸೆಲ್ಸಿಯಲ್ಲಿ 625 ಅಂಕಗಳಿಗೆ ಬರೋಬ್ಬರಿ 623 ಅಂಕಗಳನ್ನು ಪಡೆದು, ಜಿಲ್ಲಾ ನ್ಯಾಯಾಲಯದಲ್ಲಿ ನೌಕರಿಯನ್ನೂ ಪಡೆದುಕೊಂಡಿದ್ದನು. ನೌಕರಿ ಪಡೆದ ಯುವಕನನ್ನು ಕೊಪ್ಪಳದ ಪ್ರಭು ಲಕ್ಷ್ಮೀಕಾಂತ ಲೋಕರೆ ಎಂದು ಗುರುತಿಸಲಾಗಿದೆ. ಈತನಿಗೆ ವಾಸ್ತವದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯನ್ನು ಓದಲು ಹಾಗೂ ಬರೆಯಲು ಬುರುವುದೇ ಇಲ್ಲ.
undefined
ಆದರೂ ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕಗಳನ್ನು ಪಡೆದು ಜೆಎಂಎಫ್ ಸಿ ಕೋರ್ಟ್ ನಲ್ಲಿ ಸ್ಕ್ಯಾವೆಂಜರ್ ಆಗಿ ನೌಕರಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾನೆ. ಮುಂದುವರೆದು ಈಗ ಸರ್ಕಾರದ ಮತ್ತೊಂದು ನೇಮಕಾತಿಯಲ್ಲಿ ಅರ್ಹತೆ ಪಡೆದು ಯಾದಗಿರಿ ಜಿಲ್ಲೆಯ ಕೋರ್ಟ್‌ನಲ್ಲಿ ಜವಾನ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾನೆ. ಇದೆಲ್ಲವೂ ಹೇಗೆ ಸಾಧ್ಯ ಎಂದು ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು; ಎಂಎಲ್‌ಸಿ ಅಭ್ಯರ್ಥಿ ಭೋಜೇಗೌಡ ಆರೋಪ
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾಗೂ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿರುವ ಅನುಮಾನ ಕಂಡುಬಂದ ಬೆನ್ನಲ್ಲಿಯೇ ಕೊಪ್ಪಳ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಈ ನೌಕರನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಲಾಗಿದೆ.
ಇನ್ನು ಕೊಪ್ಪಳದಲ್ಲಿ ನೌಕರಿ ಮಾಡುತ್ತಿರುವ ಪ್ರಭು ಬಾಗಲಕೋಟೆ ಜಿಲ್ಲೆಯೊಂದರ ಕೇಂದ್ರದಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಅದರಲ್ಲಿ 623 ಅಂಕ ಪಡೆದಿದ್ದನು. ಇದರ ಆಧಾರದಲ್ಲಿ ಕೊಪ್ಪಳ ನ್ಯಾಯಾಲಯದಲ್ಲಿ ಸ್ಕ್ಯಾವೆಂಜರ್ಸ್ ಹುದ್ದೆಯನ್ನೂ ಗಳಿಸಿದ್ದನು, ಇದಾದ ಕೆಲವೇ ದಿನಗಳಲ್ಲಿ ಪುನಃ ಜವಾನ ಹುದ್ದೆ ಗಳಿಸಿದ್ದನು. ಹುದ್ದೆ ಮೇಲೆ ಸರ್ಕಾರಿ ಹುದ್ದೆ ಪಡೆಯುತ್ತಿದ್ದ ಪ್ರಭುವನ್ನು ನ್ಯಾಯಾಧೀಶರು ಪರಿಶೀಲನೆ ಮಾಡಿದಾಗ ಆತನಿಗೆ ಮಾತೃ ಭಾಷೆ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಯಾವುದೇ ಭಾಷೆಯನ್ನು ಓದಲು ಬರೆಯಲು ಬರುವುದಿಲ್ಲ ಎಂಬುದು ಖಾತರಿಯಾಗಿದೆ. ಆಗ, ಈತನ ವಿರುದ್ಧ ಕೇಸ್ ದಾಖಲಿಸಲು ಸೂಚಿಸಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ..!
ಜೊತೆಗೆ, ಪ್ರಭುನಂತರ ಯುವಕರು ರಾಜ್ಯದಲ್ಲಿ ಕಷ್ಟಪಟ್ಟು ಓದಿ ಹೆಚ್ಚು ಅಂಕಗಳನ್ನು ಗಳಿಸಿವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾನೆ. ಈತನನ್ನು ಸುಮ್ಮನೆ ಬಿಡಬಾರದು. ಇಂತಹ ಅದೆಷ್ಟೋ ಪ್ರಕರಣಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಾಹ್ಯವಾಗಿ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟ ಕೇಂದ್ರ ಹಾಗೂ ಅಲ್ಲಿ ಪರೀಕ್ಷೆ ಕಟ್ಟಿ ಪಾಸಾಗಿ ನೌಕರಿ ಗಿಟ್ಟಿಸಿಕೊಂಡವರ ಮೇಲೆಯೂ ತನಿಖೆ ನಡೆಸುವಂತೆ ನ್ಯಾಯಾಧೀಶರು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ, ಈತನೊಂದಿಗೆ ಲಾಭಕ್ಕಾಗಿ ಶಾಮೀಲಾದವರ ವಿರುದ್ಧ ತನಿಖೆ ನಡೆಸಬೇಕೇಂದು ನ್ಯಾಯಾಧೀಶರು ಕೋರಿದ್ದಾರೆ.