ರಾಜ್ಯದ ನೌಕರರಿಗೆ ಬಿಗ್ ಶಾಕ್ ಕೊಟ್ಟ ಯಡಿಯೂರಪ್ಪನವರ ಸರ್ಕಾರ

By Suvarna News  |  First Published Jan 4, 2021, 8:55 PM IST

ಸರ್ಕಾರದಿಂದ ಸಹಾಯಾನುದಾನ / ಅನುದಾನ ಪಡೆಯುವ ಅಥವಾ ಪಡೆಯದಿರುವ ಎಲ್ಲಾ ಕರ್ನಾಟಕ ಸರ್ಕಾರದ ಎಲ್ಲಾ ಉದ್ಯಮಗಳ ಸಂಸ್ಥೆಗಳ ನೌಕರರಿ ರಾಜ್ಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.


ಬೆಂಗಳೂರು, (ಜ.04): 2021ನೇ ಸಾಲಿನಲ್ಲಿ  ಸರ್ಕಾರಿ‌ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದು ಪಡಿಸಲಾಗಿದೆ. 

ಪ್ರಸ್ತುತ ಕೋವಿಡ್-19 ಹಿನ್ನೆಲೆ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ ಸರ್ಕಾರಿ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

Tap to resize

Latest Videos

ಗಂಗೂಲಿ ಚಿಕಿತ್ಸೆಗೆ ದೇವಿಶೆಟ್ಟಿಗೆ ಆಹ್ವಾನ, ವಿದ್ಯಾರ್ಥಿನಿಯರಿಗೆ ಪೋತ್ಸಾಹಧನ; ಜ.4ರ ಟಾಪ್ 10 ಸುದ್ದಿ!

ಜೊತೆಗೆ, ಈ ವರ್ಷ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು ಮತ್ತು ಅಧಿಕಾರಿಗಳು ನಿವೃತ್ತಿ ಹೊಂದುವ ತಿಂಗಳಿನಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಸರ್ಕಾರದ ಈ ಆದೇಶವು ಸರ್ಕಾರದಿಂದ ಸಹಾಯಾನುದಾನ / ಅನುದಾನ ಪಡೆಯುವ ಅಥವಾ ಪಡೆಯದಿರುವ ಎಲ್ಲಾ ಕರ್ನಾಟಕ ಸರ್ಕಾರದ ಎಲ್ಲಾ ಉದ್ಯಮಗಳ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

click me!