ಬ್ರಿಟನ್‌ನಿಂದ ಬಂದ 199 ಮಂದಿ ಇನ್ನೂ ನಾಪತ್ತೆ: ಸಚಿವ ಸುಧಾಕರ್‌

By Kannadaprabha News  |  First Published Jan 1, 2021, 1:49 PM IST

ಇವರಲ್ಲಿ 80 ವಿದೇಶಿಗರು; ಇವರ ಪತ್ತೆಗೆ ಯತ್ನ ನಡೆದಿದೆ | ಬ್ರಿಟನ್‌ ವೈರಸ್‌ ಪತ್ತೆ ಆದರೆ ಮನೆ/ಅಪಾರ್ಟ್‌ಮೆಂಟ್‌ ಸೀಲ್‌


ಬೆಂಗಳೂರು(ಜ.01): ಬ್ರಿಟನ್‌ನ ರೂಪಾಂತರಿ ಕೊರೋನಾ ವೈರಸ್‌ ವೇಗವಾಗಿ ಹಬ್ಬುವುದರಿಂದ ಈ ವೈರಾಣು ಪತ್ತೆಯಾದವರ ಮನೆ ಅಥವಾ ಅಪಾರ್ಟ್‌ಮೆಂಟ್‌ ಸೀಲ್‌ ಡೌನ್‌ ಮಾಡಬೇಕಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ.

ವಿದೇಶದಿಂದ ಬಂದಿರುವ 199 ಜನರನ್ನು ಪತ್ತೆ ಹಚ್ಚುವ ಕೆಲಸವನ್ನು ಗೃಹ ಇಲಾಖೆ ಮಾಡುತ್ತಿದೆ. ಇದರಲ್ಲಿ 80 ಮಂದಿ ನಮ್ಮ ದೇಶದವರಲ್ಲ. ಅವರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಸುಧಾಕರ್‌ ತಿಳಿಸಿದ್ದಾರೆ.

Tap to resize

Latest Videos

undefined

ಹೊಸ ವರ್ಷದ ಆರಂಭದಲ್ಲಿ ಗುಡ್‌ ನ್ಯೂಸ್, ನಾಳೆಯಿಂದ ವ್ಯಾಕ್ಸಿನ್ ಡ್ರೈ ರನ್..!

ಯುನೈಟೆಡ್‌ ಕಿಂಗ್‌ಡಮ್‌ ನಿಂದ ಬಂದಿರುವ ಒಟ್ಟು 30 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಇವರ ನಾಲ್ಕು ಜನ ಸಂಪರ್ಕಿತರಿಗೆ ಪಾಸಿಟಿವ್‌ ಬಂದಿದೆ. ಈ 34 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೀವ್ರತರದ ಸಮಸ್ಯೆಗಳು ಇವರಲ್ಲಿ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ರೂಪಾಂತರಗೊಂಡ ಕೊರೋನಾ ವಿದೇಶದಲ್ಲಿ ವೇಗವಾಗಿ ಹಬ್ಬುತ್ತಿದೆ. ಆದ್ದರಿಂದ ಕೊರೋನಾದ ಬಗ್ಗೆ ಎಚ್ಚರ ವಹಿಸಬೇಕು. ಕೊರೋನಾ ನಮ್ಮನ್ನು ಬಿಟ್ಟು ಹೋಗಿಲ್ಲ. ಲಸಿಕೆ ಹಾಕುವವರೆಗೂ ನಾವು ಜಾಗೃತರಾಗಿರಬೇಕು ಎಂದು ಅವರು ಹೇಳಿದರು.

ಫಾಸ್ಟ್‌ಟ್ಯಾಗ್‌ ಕಡ್ಡಾಯ ಜ.1ರಿಂದಲ್ಲ ಫೆ.15ರಿಂದ: ಗಡುವು ವಿಸ್ತರಿಸಿದ ಸರ್ಕಾರ

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ರಾತ್ರಿ ಕಫä್ರ್ಯ ಬಗ್ಗೆ ಸಲಹೆ ನೀಡಿತ್ತು. ಆದರೆ, ವಿರೋಧ ಪಕ್ಷವು ಸೇರಿದಂತೆ ಹಲವರು ರಾತ್ರಿ ಕಫä್ರ್ಯನಿಂದ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಮುಖ್ಯಮಂತ್ರಿಗಳು ಕಫä್ರ್ಯವನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಆದ್ದರಿಂದ ಈಗ ರಾತ್ರಿ ಕಫä್ರ್ಯ ಬಗ್ಗೆಗಿನ ಚರ್ಚೆ ಅಪ್ರಸ್ತುತ. ತಾವು ಮತ್ತು ಸಚಿವ ಆರ್‌. ಅಶೋಕ್‌ ಈ ಬಗ್ಗೆ ಪ್ರಸ್ತಾಪಿಸಿದ್ದೇವೆ. ನಮ್ಮ ಮಧ್ಯೆ ಯಾವುದೇ ಗೊಂದಲವಿಲ್ಲ ಎಂದು ಸುಧಾಕರ್‌ ಹೇಳಿದ್ದಾರೆ.

click me!