ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಡಿ , ಜವಾನ ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್ 31ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಬೆಂಗಳೂರು(ಫೆ.21): ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ (Karnataka Stamp Registration Department) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಡಿ (ಜವಾನ)1 ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 31ರೊಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ https://igr.karnataka.gov.in/english ಗೆ ಭೇಟಿ ನೀಡಬಹುದು.
ಶೈಕ್ಷಣಿಕ ವಿದ್ಯಾರ್ಹತೆ (Education): ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು.
undefined
ವಯೋಮಿತಿ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
IRCON Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಅವಕಾಶ
ಆಯ್ಕೆ ವಿಧಾನ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ದಾಖಲೆಗಳನ್ನು ಪರಿಶೀಲನೆ ಮಾಡಿ, 10 ನೇ ತರಗತಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ. ಅದರಲ್ಲಿ 29 ರಿಂದ 40 ವರ್ಷದವರೆಗೆ ವಯೋಮಿತಿವುಳ್ಳ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
ವೇತನ ವಿವರ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹17,000 ರಿಂದ ₹28,950 ವೇತನ ದೊರೆಯಲಿದೆ.
ಅರ್ಜಿ ಶುಲ್ಕ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.
ESIC Recruitment 2022: ಭೋಧಕರ ಹುದ್ದೆಗೆ ಅರ್ಜಿ ಆಹ್ವಾನ, ಮಾರ್ಚ್ 2 ರಂದು ನೇರ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಬಳಿಕ ಜನ್ಮ ದಿನಾಂಕ ದೃಢೀಕರಿಸಿರುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರ, ಜಾತಿ ದೃಢೀಕರಿಸುವ ಪ್ರಮಾಣ ಪತ್ರ, ಕನ್ನಡ ಮಾಧ್ಯಮದ ಅಭ್ಯರ್ಥಿ ಆಗಿದ್ದಲ್ಲಿ ಕನ್ನಡ ಮಾಧ್ಯಮ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳು ಇದ್ದರೆ ಎಲ್ಲವನ್ನು ಜೆರಾಕ್ಸ್ ಮಾಡಿ. ಅರ್ಜಿಯೊಂದಿಗೆ ಕಚೇರಿಯ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಕರ್ನಾಟಕ ಮುದ್ರಾಂಕ ನೋಂದಣಿ ಇಲಾಖೆಯಲ್ಲಿ ಖಾಲಿ ಇರುವ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಯನ್ನು ಮಾರ್ಚ್ 31ರೊಳಗೆ ಕಳುಹಿಸಿ ಕೊಡಬೇಕು.
ನೋಂದಣಿ ಮಹಾಪರಿ ವೀಕ್ಷಕರು
ಹಾಗೂ ಮುದ್ರಾಂಕಗಳ ಆಯುಕ್ತರ ಕಛೇರಿ,
ಕಂದಾಯ ಭವನ,
8ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು
Government Of Karnataka
Department of Stamps and Registration
Kandaya Bhavan,
8th Floor,
Kempegowda Rd,
Bengaluru, Karnataka 560009
EIL Recruitment 2022: ಇಂಜಿನಿಯರಿಂಗ್ ಪದವೀಧರರಿಗೆ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗವಕಾಶ