Land Surveyor Recruitment 2022: 3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಡಿಸಿದ ಇಲಾಖೆ

By Suvarna News  |  First Published Jan 1, 2022, 12:50 PM IST
  • ಭೂಮಾಪಕರ  ಹುದ್ದೆಗಳಿಗೆ ಮತ್ತೆ ಅಧಿಸೂಚನೆ ಪ್ರಕಟ
  • 3 ಸಾವಿರ ಭೂಮಾಪಕರ ಹುದ್ದೆಗಳ ಭರ್ತಿಗೆ ನೇಮಕಾತಿ 
  • ಜನವರಿ 21ರವರೆಗೆ  ಅರ್ಜಿ ಸಲ್ಲಿಸಲು ಅವಕಾಶ
     

ಬೆಂಗಳೂರು, (ಜ.01): ರಾಜ್ಯದಲ್ಲಿ ಭೂಮಾಪಕರ  (Land surveyor)  ಹುದ್ದೆಗಳ ನೇಮಕಾತಿಗೆ (Recruitment) ಮತ್ತೆ ಅರ್ಜಿ ಆಹ್ವಾನಿಸಿದೆ. ಈ ಹಿಂದೆ 2021 ಡಿಸೆಂಬರ್ 31ರಂದು ಅರ್ಜಿ ಸಲ್ಲಿಸಲು ಕಡೆಯ ದಿನ ಎಂದು ತಿಳಿಸಲಾಗಿತ್ತು. ಆದರೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ (Survey Settlement and Land Records)ತನ್ನ ಆದೇಶವನ್ನು ಹಿಂದಕ್ಕೆ ಪಡೆದಿತ್ತು. ಹೊಸದಾಗಿ ಪರವಾನಗಿ ಭೂ ಮಾಪಕರನ್ನು ಆಯ್ಕೆ ಮಾಡಿಕೊಳ್ಳುವ ಸಂಬಂಧ ಹೊರಡಿಸಿರುವ ಅಧಿಸೂಚನೆಯನ್ನು ವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹಿಂಪಡೆಯಲಾಗಿದೆ ಎಂದು ಇಲಾಖೆಯ ಆಯುಕ್ತರು ಪತ್ರದ ಅಧಿಸೂಚನೆ ಹೊರಡಿಸಿದ್ದರು. ಈಗ ಮತ್ತೆ ಇಲಾಖೆಯಿಂದ ನೇಮಕಾತಿ ಆದೇಶ ಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದಂತೆ ಒಟ್ಟು 3 ಸಾವಿರ  ಲ್ಯಾಂಡ್‌ ಸರ್ವೇಯರ್‌ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಜನವರಿ 21ರವರೆಗೆ  ಅರ್ಜಿ ಸಲ್ಲಿಸಬಹುದು. 

ಶೈಕ್ಷಣಿಕ ವಿದ್ಯಾರ್ಹತೆ (Education): ಕನಿಷ್ಠ ಪದವಿಪೂರ್ವ ಶಿಕ್ಷಣ (ಪಿಯುಸಿ) ಅಥವಾ ಕೇಂದ್ರ ಪ್ರೌಢಶಿಕ್ಷಣ ಮಂಡಳಿ ನಡೆಸುವ 12ನೇ ತರಗತಿ ಸಿಬಿಎಸ್‍ಸಿ ಅಥವಾ ಐಸಿಎಸ್‍ಇ ಇವುಗಳಲ್ಲಿ ವಿಜ್ಞಾನ ವಿಷಯ ಪಡೆದು ಗಣಿತ ವಿಷಯದಲ್ಲಿ ಶೇ.60 ಕ್ಕಿಂತ ಕಡಿಮೆ ಇಲ್ಲದೆಂತೆ ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ನೋಂದಾಣಿಯಾಗಿರುವ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ (ಸಿವಿಲ್)/ಅಥವಾ ಬಿ.ಟೆಕ್ (ಸಿವಿಲ್)/ಸಿವಿಲ್ ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರುವವರೂ ಸಹ ಅರ್ಜಿ ಸಲ್ಲಿಸಬಹುದು. 

Tap to resize

Latest Videos

undefined

ವಯೋಮಿತಿ ಮತ್ತು ಅರ್ಜಿ ಶುಲ್ಕ ಹಾಗೂ ವೇತನ: ಕನಿಷ್ಟ 18 ವರ್ಷ, ಗರಿಷ್ಟ 65 ವರ್ಷ ಮೀರಿರಬಾರದು. ಹಾಗೂ ಅರ್ಜಿ ಶುಲ್ಕ 1000 ರೂ.ನಿಗದಿಪಡಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 30,000ದಿಂದ 40,000 ರೂ ವೇತನ ನಿಗದಿಯಾಗಿದೆ.

ಪರೀಕ್ಷೆ: ಪರೀಕ್ಷೆಯ ಖಚಿತ ದಿನಾಂಕವನ್ನು (Exam Date) ವೆಬ್‍ಸೈಟ್ ವಿಳಾಸ rdservices.karnataka.gov.in ರಲ್ಲಿ ಮತ್ತು ದಿನಪತ್ರಿಕೆಗಳಲ್ಲಿ 15 ದಿನ ಮುಂಚಿತವಾಗಿ ತಿಳಿಸಲಾಗುತ್ತದೆ. ನಿಗದಿಪಡಿಸಲಾದ ಅರ್ಜಿಗಳನ್ನು ಮೇಲ್ಕಂಡ ಇಲಾಖಾ ವೆಬ್‍ಸೈಟಿನಲ್ಲಿಯೇ ಪ್ರಕಟಿಸಲಾಗಿದ್ದು, ಆನ್‍ಲೈನ್ ಮುಖಾಂತರ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿಯು ಆನ್‍ಲೈನ್‍ನಲ್ಲಿ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿರುತ್ತದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲ. 2022 ಜನವರಿ 21 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿರುತ್ತದೆ.

ಭೂಮಾಪನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ದಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ 2022 ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಭೂಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ತಿಳಿಸಿದೆ . ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಗತ್ಯ ಮಾಹಿತಿಗಳನ್ನು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ https://landrecords.karnataka.gov.in/service201/ ಅಥವಾ rd service karnataka gov in ಗೆ ಭೇಟಿ ನೀಡಿ ತಿಳಿಯಬಹುದು.

ಅನುಭವ: ರಾಜ್ಯ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್‍ನಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕೇಂದ್ರ ಅಥವಾ ರಾಜ್ಯ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಟ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಿರುತ್ತಾರೆ.

ಜಿಲ್ಲಾವಾರು ಹುದ್ದೆಗಳು: ಉಡುಪಿ 131,  ಉತ್ತರಕನ್ನಡ 101,  ಕೊಡಗು 100, ಕೊಪ್ಪಳ 66, ಕೋಲಾರ    137, ಗದಗ    46, ಕಲಬುರಗಿ 12, ಚಿಕ್ಕಬಳ್ಳಾಪುರ 39, ಚಿಕ್ಕಮಗಳೂರು 112, ಚಿತ್ರದುರ್ಗ 93,  ಚಾಮರಾಜನಗರ 50,  ತುಮಕೂರು 334,  ದಕ್ಷಿಣ ಕನ್ನಡ 66,  ದಾವಣಗೆರ    183, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು 65,  ವಿಜಯಪುರ 76,  ಬೆಳಗಾವಿ 112,  ಬಳ್ಳಾರಿ 27,  ವಿಜಯನಗರ 29,  ಬಾಗಲಕೋಟೆ 60,  ಬೀದರ್ 13,  ಮಂಡ್ಯ 195,  ಮೈಸೂರು 136, ಯಾದಗಿರಿ 45, ರಾಮನಗರ 155,  ರಾಯಚೂರು 54,  ಶಿವಮೊಗ್ಗ 127,  ಹಾವೇರಿ    299, ಹಾಸನ 136 ಸೇರಿ ಒಟ್ಟು 3000 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯಲಿದೆ.

click me!