ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯಾಗಿರುವ ಇಸ್ರೋ ಆಡಳಿತಾತ್ಮಕ ವಿಭಾಗದಲ್ಲಿ ಖಾಲಿ ಇರುವ ಹಲುವು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಏಪ್ರಿಲ್ 1ರಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಏ.21 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಇಸ್ರೋದಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಬಹುದು.
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಡಳಿತಾಧಿಕಾರಿ, ಅಕೌಂಟ್ ಆಫೀಸರ್ ಮತ್ತು ಪರ್ಚೇಸ್ ಆಂಡ್ ಸ್ಟೋರ್ ಆಫೀಸರ್ (ಗ್ರೂಪ್ ‘ಎ’ ಗೆಜೆಟೆಡ್ ಹುದ್ದೆಗಳು) ಮತ್ತು ಆಟೋನೊಮಸ್ ಬಾಡಿ (ಸೆಮಿ- ಕಂಡಕ್ಟರ್ ಲ್ಯಾಬೋರೇಟರಿ, ಚಂಡೀಗಢ- ಗ್ರೂಪ್ ‘ಎ’ ಗೆಜೆಟೆಡ್ ಅಲ್ಲದ ಹುದ್ದೆಗಳು) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 21, 2021 ರೊಳಗೆ ಆನ್‌ಲೈನ್ ಮೋಡ್ ಮೂಲಕ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.
3,479 ಶಿಕ್ಷಕ ಹುದ್ದೆಗೆ ನೇಮಕಾತಿ ಶುರು, ಕೂಡಲೇ ಅರ್ಜಿ ಹಾಕಿ
ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏಪ್ರಿಲ್ 1ರಿಂದಲೇ ಆರಂಭವಾಗಿದೆ. ಏಪ್ರಿಲ್ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಏ.23ರರೊಳಗೇ ಶುಲ್ಕವನ್ನು ಪಾವತಿಸಬೇಕು.
ಆಡ್ಮಿಷನ್ ಆಫೀಸರ್ - 6 ಹುದ್ದೆಗಳು, ಆಕೌಂಟ್ಸ್ ಆಫೀಸರ್ - ೬ ಹುದ್ದೆಗಳು, ಪರ್ಚೇಸ್ ಆಂಡ್ ಸ್ಟೋರ್ಸ್ ಆಫೀಸರ್ - 12 ಹುದ್ದೆಗಳಿಗೆ ಇಸ್ರೋ ನೇಮಕ ಮಾಡಿಕೊಳ್ಳುತ್ತಿದೆ. ಈ ನೇಮಕದ ಬಗ್ಗೆ ಇಸ್ರೋ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಆಡ್ಮಿಷನ್ ಆಫೀಸರ್ : ಎಂಬಿಎ ಜೊತೆಗೆ 1 ವರ್ಷದ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ ಅನುಭವ ಇರಬೇಕು ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ೩ ವರ್ಷದ ಅನುಭವ(1 ವರ್ಷ ಸೂಪರ್‌ವೈಸರಿ ಸಾಮರ್ಥ್ಯ) ಅಥವಾ ಪದವಿ ಜೊತೆಗೆ ೫ ವರ್ಷದ ಕೆಲಸದ ಅನುಭವ (2 ವರ್ಷ ಸೂಪರ್‌ವೈಸರಿ ಸಾಮರ್ಥ್ಯ) ಇರಬೇಕು.
ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ!
ಆಕೌಂಟ್ಸ್ ಆಫೀಸರ್ : ಎಸಿಎ/ಎಫ್‌ಸಿಎ ಅಥವಾ ಎಸಿಡಬ್ಲ್ಯೂಎ/ಎಫ್‌ಐಸಿಡಬ್ಲ್ಯೂಎ ಅಥವಾ ಎಂಬಿಎ ಜೊತೆಗೆ ಸೂಪರ್‌ವೈಸರಿ ಸಾಮರ್ಥ್ಯದಲ್ಲಿ 1 ವರ್ಷದ ಅನುಭವ ಹೊಂದಿರಬೇಕು. ಅಥವಾ ಎಂ.ಕಾಮ್ ಜೊತೆಗೆ 3 ವರ್ಷದ ಅನುಭವ (1 ವರ್ಷದ ಸೂಪರ್‌ವೈಸರಿ ಸಾಮರ್ಥ್ಯ) ಅಥವಾ ಬಿ.ಕಾಮ್/ಬಿಬಿಎ/ಬಿಬಿಎಂ ಜೊತೆಗೆ 5 ವರ್ಷದ ಅನುಭವ (2 ವರ್ಷ ಸೂಪರ್‌ವೈಸರಿ ಸಾಮರ್ಥ್ಯ) ಹೊಂದಿರಬೇಕು.
ಪರ್ಚೇಸ್ ಆಂಡ್ ಸ್ಟೋರ್ಸ್ ಆಫೀಸರ್ : ಮಾರ್ಕೆಟಿಂಗ್‌ಅಥವಾ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್ನಲ್ಲಿ ಎಂಬಿಎ ಜೊತೆಗೆ 1 ವರ್ಷ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿದ ಅನುಭವ ಇರಬೇಕು. ಅಥವಾ ಪದವಿ ಜೊತೆಗೆ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ( ಅಥವಾ ಪರ್ಚೆಸ್ ಆಂಡ್ ಸ್ಟೋರ್ಸ್‌ಗೆ ಸಂಬಂಧಿಸಿದ ಯಾವುದಾದರೂ ವಿಷಯದಲ್ಲಿ ಡಿಪ್ಲೋಮಾ) ಜೊತೆಗೆ 3 ವರ್ಷದ ಅನುಭವ (ಸಂಬಂಧಿತ ಕ್ಷೇತ್ರದಲ್ಲಿ ಸೂಪರ್‌ವೈಸರಿಯಾಗಿ 1 ವರ್ಷದ ಕೆಲಸ ಮಾಡಿದ ಅನುಭವ) ಹೊಂದಿರಬೇಕು. ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ೩ ವರ್ಷದ ಅನುಭವ ( ಸಂಬಂಧಿತ ಕ್ಷೇತ್ರದಲ್ಲಿ ಸೂಪರ್‌ವೈಸರಿಯಾಗಿ ೧ ವರ್ಷ ಕೆಲಸ) ಅಥವಾ ಪದವಿ ಜೊತೆಗೆ 5 ವರ್ಷದ ಅನುಭವ( ಸಂಬಂಧಿತ ಕ್ಷೇತ್ರದಲ್ಲಿ ಸೂಪರ್‌ವೈಸರಿಯಾಗಿ 1 ವರ್ಷದ ಕೆಲಸ) ಹೊಂದಿರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸರುವ ಅಭ್ಯರ್ಥಿಗಳ ವಯೋಮಿತಿ 35 ವರ್ಷಗಳನ್ನುಮೀರಿರಬಾರದು. ಆದರೆ ಸರ್ಕಾರದ ನಿಯಮಗಳ ಅನ್ವಯ ಕಾಯ್ದಿರಿಸಿದ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಬಿಎಚ್‌ಇಎಲ್‌ನಲ್ಲಿ 40 ಟ್ರೈನಿ ಹುದ್ದೆಗಳಿಗೆ ನೇಮಕಾತಿ, ಬಿಕಾಂ ಪದವೀಧರರಿಗೆ ಅವಕಾಶ
ಇಸ್ರೋ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಹೇಗೆ?: ಅಭ್ಯರ್ಥಿಗಳು ಏಪ್ರಿಲ್ 1 ರಿಂದ ಏಪ್ರಿಲ್ 21 ರೊಳಗೆ ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ನೋಂದಣಿ, ಅರ್ಜಿದಾರರು ಆನ್‌ಲೈನ್ ರಿಜಿಸ್ಟ್ರೇಷನ್ ನಂಬರ್ ಅನ್ನು ಮುಂದಿನ ರೆಫರೆನ್ಸ್‌ಗಾಗಿ ಸೇವ್ ಮಾಡಿಟ್ಟುಕೊಳ್ಳಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜು ಶುಲ್ಕವಾಗಿ 250 ರೂಪಾಯಿ ಪಾವತಿಸಬೇಕಾಗುತ್ತದೆ.