BSF‌ ಕಾನ್ಸ್‌ಟೇಬಲ್ ಹುದ್ದೆಗಳಿಗೆ 10ನೇ ತರಗತಿ ಪಾಸಾದವರಿಗೆ ಅವಕಾಶ

By Suvarna News  |  First Published Mar 20, 2021, 10:29 AM IST

ಬಿಎಸ್‌ಎಫ್‌ನಲ್ಲಿ ಜನರಲ್ ಡ್ಯೂಟಿ ಕಾನ್ಸ್‌ಟೇಬಲ್ ಹುದ್ದೆ ಸೇರಿ ಹಲವು ಭದ್ರತಾ ಪಡೆಗಳಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶವಿದ್ದು, ಮಾರ್ಚ್ 25ರ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಹಾಗಾಗಿ, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧರಾಗುವುದು ಒಳ್ಳೆಯದು.


ಸಿಬ್ಬಂದಿ ನೇಮಕಾತಿ ಆಯೋಗವು ಶೀಘ್ರದಲ್ಲೇ ಇತರ ಪಡೆಗಳನ್ನು ಒಳಗೊಂಡಂತೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಲ್ಲಿ ಎಸ್‌ಎಸ್‌ಸಿ ಕಾನ್‌ಸ್ಟೆಬಲ್ (ಜನರಲ್ ಡ್ಯೂಟಿ) ಹುದ್ದೆಗೆ ಭರ್ತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ.

ವರದಿಗಳ ಪ್ರಕಾರ, ಅಧಿಕೃತ ಅಧಿಸೂಚನೆಯನ್ನು ಮಾರ್ಚ್ 25, 2021 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆಸಕ್ತ ಆಕಾಂಕ್ಷಿಗಳು, ಆನ್‌ಲೈನ್ ಅರ್ಜಿ ಸಲ್ಲಿಸಲು ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್‌ಅನ್ನು ಗಮನಿಸಬೇಕು.  

Tap to resize

Latest Videos

undefined

ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಎಸ್‌ಸಿ ನೇಮಕಾತಿ ಅಧಿಸೂಚನೆಯಂತೆ ಬಿಎಸ್‌ಎಫ್‌ನಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳು (ಜೆನರಲ್ ಡ್ಯೂಟಿ), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(ಸಿಆರ್‌ಪಿಎಫ್), ಸಶಸ್ತ್ರ ಸೀಮಾ ದಳ್ (ಎಸ್‌ಎಸ್‌ಬಿ), ಇಂಡೋ ಟೆಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ), ಸೆಕ್ರೆಟ್ರಿಯಟ್ ಸೆಕ್ಯೂರಿಟಿ ಫೋರ್ಸ್(ಎಸ್‌ಎಸ್‌ಎಫ್) ಹಾಗೂ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್ಮನ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುವುದು.

ಈ ಸಂಬಂಧ ಅಧಿಸೂಚನೆಯನ್ನ ಮಾರ್ಚ್ 25 ರಿಂದ ಪ್ರಾರಂಭಿಸಲಾಗುವುದು ಮತ್ತು ಆನ್‌ಲೈನ್ ನೋಂದಣಿಗೆ ಕೊನೆಯ ದಿನಾಂಕ ಮೇ 10 ಆಗಿರುತ್ತದೆ.

ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ssc.nic.inಗೆ ಭೇಟಿ ನೀಡಬಹುದು.

ಖಾಲಿ ಇರುವ ಕಾನ್‌ಸ್ಟೆಬಲ್ (ಜಿಡಿ),  ರೈಫಲ್ ಮನ್ (ಜಿಡಿ) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಹಾಗಾಗಿ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಯಾಕೆಂದರೆ, ಆನ್‌ಲೈನ್ ಅರ್ಜಿ ನೋಂದಣಿಗೆ ತೀರಾ ಹೆಚ್ಚೆನಿಸುವಷ್ಟೂ ಕಾಲಾವಕಾಶ ಇಲ್ಲ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಎಂಜಿನಿಯರಿಂಗ್ ಪದವೀಧರರಿಗೆ ಸೇನೆಯಲ್ಲಿ ಅವಕಾಶ, ಆಸಕ್ತಿ ಇದ್ದೋರು ಅಪ್ಲೈ ಮಾಡಿ

ಎಸ್‌ಎಸ್‌ಸಿ ಕಾನ್‌ಸ್ಟೇಬಲ್ (ಜಿಡಿ) ನೇಮಕಾತಿ ಹಲವು ಅರ್ಹತಾ ಮಾನದಂಡಗಳಿವೆ. ಶೈಕ್ಷಣಿಕ ಅರ್ಹತೆಯನ್ನು ಗಮನಿಸುವುದಾದರೆ, ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10 ನೇ ಉತ್ತೀರ್ಣರಾಗಿರಬೇಕು.

ಹಾಗೆಯೇ  ಎಸ್‌ಎಸ್‌ಸಿ ಕಾನ್‌ಸ್ಟೇಬಲ್ (ಜಿಡಿ) ಹುದ್ದೆಗೆ ಅರ್ಜಿ  ಸಲ್ಲಿಸಲು ಅರ್ಹರಾಗಿರುವ ಅಭ್ಯರ್ಥಿಗಳ ಕನಿಷ್ಠ ವಯಸ್ಸಿನ ಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 23 ವರ್ಷ ಆಗಿರುತ್ತದೆ.

ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೇಬಲ್ ಆಯ್ಕೆ ಮಾನದಂಡ ಕೂಡ ವಿಭಿನ್ನವಾಗಿದೆ. ಯಾಕೆಂದರೆ, ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಹಾಜರಾಗಬೇಕು. ಈ ಪರೀಕ್ಷೆಯು ಆಗಸ್ಟ್ 2 ರಿಂದ ಆಗಸ್ಟ್ 25, 2021 ರವರೆಗೆ ನಡೆಯಲಿದೆ ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು.

ಜಿಡಿ ಕಾನ್‌ಸ್ಟೇಬಲ್ ಹುದ್ದೆಯ ವೇತನ ಶ್ರೇಣಿ: ಪರೀಕ್ಷೆ ಬರೆದು ಅರ್ಹತೆ ಪಡೆಯುವ ಆಕಾಂಕ್ಷಿಗಳಿಗೆ 21,700- 69, 100 / - ರೂಪಾಯಿ ಸಂಬಳ ಸಿಗುತ್ತದೆ

ಎಂಜಿನಿಯರಿಂಗ್ ಓದಲು ಮ್ಯಾಥ್ಸ್, ಫಿಜಿಕ್ಸ್ ಕಡ್ಡಾಯವಲ್ಲ!

ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಎಸ್‌ಎಸ್‌ಸಿ ಜಿಡಿ ಕಾನ್‌ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ sssc.nic.inಗೆ ಭೇಟಿ ನೀಡಬೇಕು. ಬಳಿಕ ಮಾರ್ಚ್ 25 ರಿಂದ 2021ರ ಮೇ 10 ರೊಳಗೆ ಅರ್ಜಿಯನ್ನು ಭರ್ತಿ ಮಾಡಬೇಕು. ಹಾಗಾಗಿ ನಿಯಮಿತವಾಗಿ ವೆಬ್‌ಸೈಟ್ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು.

ಅರ್ಜಿ ಶುಲ್ಕ:  ಸಾಮಾನ್ಯ ವರ್ಷದ ಪುರುಷ ಅಭ್ಯರ್ಥಿಗಳಿಗೆ ರೂ., ಮಹಿಳೆ ಮತ್ತು ಎಸ್‌ಸಿ, ಎಸ್‌ಟಿ ಹಾಗೂ ಮಾಜಿ ಸೈನಿಕ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ ಎಂಬುದನ್ನು ಗಮನಿಸಬೇಕು.

click me!