ಕ್ರೀಡಾಪಟುಗಳಿಗೆ ರೇಲ್ವೆಯಲ್ಲಿ ಉದ್ಯೋಗ, 92,300 ರೂ.ವರೆಗೂ ಮಾಸಿಕ ವೇತನ

By Suvarna News  |  First Published Aug 19, 2021, 5:58 PM IST

ಭಾರತೀಯ ರೇಲ್ವೆಯು ಕ್ರೀಡಾಕೋಟದಡಿ ಸಿ ಗ್ರೂಪ್‌ನ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಈಗಾಗಲೇ ಈ ಸಂಬಂಧ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್ 3 ಕೊನೆಯ ದಿನವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಭಾರತೀಯ ರೈಲ್ವೇ ಇಲಾಖೆಯು, ಬಹುದೊಡ್ಡ ‌ನೇಮಕಾತಿ‌ ಪ್ರಕ್ರಿಯೆಗೆ ಮುಂದಾಗಿದೆ. ರೈಲ್ವೆಯಲ್ಲಿ  ಉದ್ಯೋಗ ಪಡೆಯಲು ಕಾಯುತ್ತಿರುವ ಕ್ರೀಡಾ ಪಟುಗಳಿಗೆ ಇದೊಂದು ಸುವರ್ಣ ಅವಕಾಶ. ಯಾಕಂದ್ರೆ ರೇಲ್ವೆ ಇಲಾಖೆಯು, ಖಾಲಿ ಇರುವ 21 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ರೇಲ್ವೆ ಇಲಾಖೆಯು ಕ್ರೀಡಾ ಕೋಟಾದಡಿ ಸಿ ಗ್ರೂಪ್ನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.  ಈಗಾಗಲೇ ದೇಶವನ್ನು ಪ್ರತಿನಿಧಿಸಿದವರಿಗಂತೂ ಈ ನೇಮಕಾತಿ ‌ಉತ್ತಮ‌ ಜೀವನ ರೂಪಿಸಿ ಕೊಳ್ಳಲು ವೇದಿಕೆಯಾಗಿದೆ.

ಎಸ್‌ಬಿಐನಲ್ಲಿ 69 ಅಧಿಕಾರಿಗಳ ಹುದ್ದೆಗೆ ನೇಮಕಾತಿ

Tap to resize

Latest Videos

undefined

ಆಸಕ್ತ ಅಭ್ಯರ್ಥಿಗಳು ಪಶ್ಚಿಮ ರೇಲ್ವೆಯ ಅಧಿಕೃತ ವೆಬ್‌ಸೈಟ್ rrc-wr.com ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಆಗಸ್ಟ್ 4 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 3 ಕೊನೆಯ ದಿನವಾಗಿದೆ. ಆರ್‌ಆರ್‌ಸಿ ವೆಸ್ಟರ್ನ್ ರೈಲ್ವೇ ಮೂಲಕ ನಡೆಯುವ ಈ ನೇಮಕಾತಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ಇರುವುದಿಲ್ಲ. 

ಆಸಕ್ತ ಅಭ್ಯರ್ಥಿಗಳು 12 ನೇ ತರಗತಿ ಪರೀಕ್ಷೆ ಅಥವಾ ಅದರ ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. 18 ವರ್ಷದಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮೀಸಲಾತಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಸಡಿಲಿಕೆಗಳನ್ನು ನೀಡಲಾಗುವುದಿಲ್ಲ.


ಕ್ರೀಡಾ ಕೋಟಾದಲ್ಲಿ ಹುದ್ದೆ ಸೇರಲು ಬಯಸುವ ಅಭ್ಯರ್ಥಿಗಳು, ವರ್ಲ್ಡ್ ಕಪ್ (ಜೂನಿಯರ್/ ಯೂತ್/ ಸೀನಿಯರ್ ವಿಭಾಗ)/ ವರ್ಲ್ಡ್ ಚಾಂಪಿಯನ್‌ಶಿಪ್‌ಗಳು (ಜೂನಿಯರ್/ ಸೀನಿಯರ್ ವಿಭಾಗ)/ ಏಷ್ಯನ್ ಗೇಮ್ಸ್ (ಹಿರಿಯ ವಿಭಾಗ)/ ಕಾಮನ್ವೆಲ್ತ್ ಗೇಮ್ಸ್ (ಹಿರಿಯ ವಿಭಾಗ)/ ಯೂತ್ ಒಲಿಂಪಿಕ್ಸ್/ ಚಾಂಪಿಯನ್ಸ್ ಟ್ರೋಫಿ (ಹಾಕಿ) ಯಲ್ಲಿ 2/3 ಹಂತದಲ್ಲಿ ಭಾರತವನ್ನು ಪ್ರತಿನಿಧಿಸಿರಲೇಬೇಕು. ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು.

ಏರ್‌ಫೋರ್ಸ್‌ನಲ್ಲಿ ಗ್ರೂಪ್ ‘ಸಿ’ ನಾಗರಿಕ 282 ಹುದ್ದೆಗಳಿಗೆ ನೇಮಕಾತಿ

ಇನ್ನು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌/ಸೌತ್ ಏಷಿಯನ್ ಗೇಮ್ಸ್/ ವರ್ಲ್ಡ್ ರೇಲ್ವೆಸ್ ಗೇಮ್ಸ್ ನಲ್ಲಿ ಹಿರಿಯ/ಯುವ/ಕಿರಿಯ ಯಾವುದೇ ವಿಭಾಗದಲ್ಲಿ ಭಾಗವಹಿಸಿ ಕನಿಷ್ಠ ಮೂರನೇ ಸ್ಥಾನವನ್ನು ಪಡೆದಿರಬೇಕು.

ಟ್ರಯಲ್ಸ್, ಕ್ರೀಡಾ ಸಾಧನೆಗಳ ಮೌಲ್ಯಮಾಪನ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಆರ್‌ಆರ್‌ಸಿ ಹೇಳಿದೆ.

ಇನ್ನು ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗರಿಷ್ಟ 92,300 ರೂ.ವರೆಗೂ ವೇತನ ಸಿಗಲಿದೆ. ನಾಲ್ಕು ಹಂತಗಳಲ್ಲಿ ವೇತನ ವಿಂಗಡನೆ ಮಾಡಲಾಗುತ್ತದೆ. 4fನೇ ಹಂತದಲ್ಲಿ ರೂ 25,500 ರಿಂದ 81,100 ರೂ.ವರೆಗೆ ಸಿಗಲಿದೆ.  ಲೆವೆಲ್  5 ನಲ್ಲಿ  29,200 ರಿಂದ 92,300 ರೂವರೆಗೆ,  ಲೆವೆಲ್ 2ನಲ್ಲಿ ರೂ 19,900-63,200 ರೂ.ವರೆಗೆ ಹಾಗೂ ೩ನೇ ಹಂತದಲ್ಲಿ ರೂ.21,700-69,100 ರೂ.ವರೆಗೆ ವೇತನ ನಿಗದಿಪಡಿಸಲಾಗಿದೆ.

BELನಲ್ಲಿ ಎಂಜಿನಿಯರ್ ಪದವೀಧರ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು 12ನೇ ತರಗತಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ರೇಲ್ವೆ ನೇಮಕಾತಿಯಲ್ಲಿ ಪಾಲ್ಗೊಂಡು ಹುದ್ದೆ ಗಿಟ್ಟಿಸಿಕೊಳ್ಳಬಹುದಾಗಿದೆ. ಸೆಪ್ಟೆಂಬರ್ 3 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಕಾಲಾವಕಾಶ ಕೂಡ ಕಡಿಮೆಯಿದೆ..ಸೋ..ಮತ್ಯಾಕೆ ತಡ ಕೂಡಲೇ ಪಶ್ಚಿಮ ರೇಲ್ವೆಯ ಆರ್‌ಆರ್‌ಸಿಯ ಅಧಿಕೃತ ವೆಬ್‌ಸೈಟ್ rrc-wr.com ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 3 ಕೊನೆಯ ದಿನವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

click me!