SSLC ಪಾಸಾದ ಹೆಣ್ಣುಮಕ್ಕಳಿಗೆ ಮಿಲಿಟರಿ ಸೇರಲು ಅವಕಾಶ, ಅರ್ಜಿ ಹಾಕಿ

By Suvarna NewsFirst Published Jun 18, 2021, 5:39 PM IST
Highlights

ಭಾರತೀಯ ಸೇನೆಯ ಮಹಿಳಾ ಮಿಲಿಟರಿ ಪೊಲೀಸ್ ಆಯ್ಕೆಗೆ ನೇಮಕಾತಿ ರ್ಯಾಲಿಗಳನ್ನು ಆಯೋಜಿಸುತ್ತಿದೆ. ನಮ್ಮ ರಾಜ್ಯದ ಬೆಳಗಾವಿಯಲ್ಲೂ ಈ ರ್ಯಾಲಿ ನಡೆಯಲಿದೆ. ಆಸಕ್ತ ಎಸ್ಸೆಸ್ಸೆಲ್ಸಿ ಪಾಸಾದ ಮಹಿಳಾ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದಾಗಿದೆ.

ಸೇನೆಯಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶ ಸಿಗುತ್ತೆ. ನಮಗೊಂದು ಚಾನ್ಸ್ ಯಾಕೆ ಸಿಗಬಾರದು ಅಂತ ಕೊರಗುವ ಹೆಣ್ಮಕ್ಕಳಿಗೆ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಜಸ್ಟ್ ಎಸ್ಎಸ್ಎಲ್ಸಿ ಪಾಸ್ ಆಗಿದ್ರೆ ಸಾಕು, ಹೆಣ್ಮಕ್ಕಳು ಕೂಡ ಆರ್ಮಿ ಸೇರಬಹುದು. ಭಾರತೀಯ ಸೇನೆಯು ಸದ್ಯ ೧೦೦ ಹುದ್ದೆಗಳಿಗೆ ಮಹಿಳಾ ಅಭ್ಯರ್ಥಿಗಳಿಂದಷ್ಟೇ ಅರ್ಜಿಗಳನ್ನ ಆಹ್ವಾನಿಸಿದೆ. 

SBIನಲ್ಲಿ ಅಗ್ನಿಶಾಮಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ

ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ..ಈಗಾಗಲೇ ಜೂನ್ ೬ ರಿಂದ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು, ಜುಲೈ ೨೦ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಬರೋಬ್ಬರೀ ೧೦೦ ಹುದ್ದೆಗಳನ್ನ ಆರ್ಮಿಯು ಭರ್ತಿ ಮಾಡಿಕೊಳ್ಳಲು ನಿರ್ಧರಿಸಿದೆ. 

ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ joinindianarmy.nic.inನಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಸೇನೆಯು ಹೊರಡಿಸಿರುವ ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿಕೊಳ್ಳಬೇಕು. 
 

ಅಂದಹಾಗೇ ಅರ್ಜಿ ಸಲ್ಲಿಸಲು ಯಾವುದೋ ದೂರದ ರಾಜ್ಯಕ್ಕೆ ಹೋಗಬೇಕೇನೋ ಅಂತ ಆತಂಕ ಬೇಡ. ಅವರಿರುವ ಸ್ಥಳಗಳಿಗೆ ಸಮೀಪವಾಗುವಂತೆ ನೇಮಕಾತಿ ಡ್ರೈವ್ನಡೆಯಲಿದೆ. ಕರ್ನಾಟಕ ಹೆಣ್ಮಕ್ಕಳು ರಾಜ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಎದುರಿಸಬಹುದಾಗಿದೆ. ದೇಶದ ಆರು ವಿಭಿನ್ನ ಸ್ಥಳಗಳಲ್ಲಿ ನೇಮಕಾತಿ ರ್ಯಾಲಿಗಳನ್ನ ನಡೆಸಲಿದೆ. ಅದರಲ್ಲೂ ಬೆಳಗಾವಿ ಕೂಡ ಪ್ರಮುಖ ಸ್ಥಾನದಲ್ಲಿದೆ. ಭಾರತೀಯ ಸೇನೆಯು ಅಂಬಾಲಾ, ಲಕ್ನೋ, ಜಬಲ್ಪುರ್, ಬೆಳಗಾವಿ, ಪುಣೆ ಮತ್ತು ಶಿಲ್ಲಾಂಗ್‌ನಲ್ಲಿ ನೇಮಕಾತಿ ರ್ಯಾಲಿಗಳನ್ನು ಆಯೋಜಿಸಲಿದೆ. ಅಭ್ಯರ್ಥಿಗಳು ವಾಸವಿರುವ ಜಿಲ್ಲೆಗಳಿಗೆ ಅನುಗುಣವಾಗಿ ರ್ಯಾಲಿ ಸ್ಥಳಗಳನ್ನ ನಿಗದಿಪಡಿಸಲಾಗುತ್ತದೆ. ಇ-ಮೇಲ್ಮೂಲಕ ಪ್ರವೇಶ ಪತ್ರಗಳನ್ನ ಕಳುಹಿಸಲು ಸೇನೆಯು ತೀರ್ಮಾನಿಸಿದೆ. ಪ್ರತಿ ರ್ಯಾಲಿ ಸ್ಥಳಕ್ಕೂ ಪ್ರತ್ಯೇಕ ಮೆರಿಟ್ ಪಟ್ಟಿ ಮತ್ತು ಮೀಸಲು ಪಟ್ಟಿಯನ್ನು ತಯಾರಿಸಲಾಗುತ್ತದೆ.

ಬಿಐಎಸ್‌ನಲ್ಲಿ 28 ಹುದ್ದೆಗಳಿಗೆ ನೇಮಕಾತಿ, ತಿಂಗಳಿಗೆ 87 ಸಾವಿರ ರೂ. ಸಂಬಳ!

ಮಹಿಳಾ ಮಿಲಿಟರಿ ಪೊಲೀಸ್ಪಡೆ ಸೇರಲು ಬಯಸುವ ಅಭ್ಯರ್ಥಿಗಳು 45% ಅಂಕಗಳೊಂದಿಗೆ 10 ನೇ / ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇನ್ನು ಬೋರ್ಡ್ಗಳು ನಡೆಸುವ ಪರೀಕ್ಷೆಯಲ್ಲಿ ವೈಯಕ್ತಿಕ ವಿಷಯಗಳಲ್ಲಿ ಡಿ ಗ್ರೇಡ್ (33% - 40%) ಅಥವಾ ಗ್ರೇಡ್‌ಗೆ ಸಮನಾದ 33% ಹಾಗೂ ಒಟ್ಟಾರೆ ಸಿ-2 ಗ್ರೇಡ್‌ನ ಒಟ್ಟು ಮೊತ್ತ ಅಥವಾ ಒಟ್ಟು 45% ಅಂಕ ಗಳಿಸಿರಬೇಕು. 

ಅಭ್ಯರ್ಥಿಗಳ ವಯಸ್ಸಿನ ಮಿತಿ 17 ರಿಂದ 21 ವರ್ಷದೊಳಗಿರಬೇಕು.ಅಂದ್ರೆ ಅಕ್ಟೋಬರ್ 2000 ರಿಂದ ಏಪ್ರಿಲ್ 2004 ರವರೆಗೆ ಜನಿಸಿದವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಯೂ ಅವಿವಾಹಿತರಾಗಿರಬೇಕು. ಅದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾನ್ಯತೆಯುಳ್ಳ ಅವಿವಾಹಿತೆ ಪ್ರಮಾಣಪತ್ರವನ್ನ ಹೊಂದಿರಬೇಕು.  ಇನ್ನು ಕರ್ತವ್ಯದಲ್ಲಿದ್ದಾಗ ಮೃತಪಟ್ಟ ರಕ್ಷಣಾ ಸಿಬ್ಬಂದಿಯ ವಿಧವಾ ಪತ್ನಿಯರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಗರಿಷ್ಟ ವಯೋಮಿತಿ ೩೦ ವರ್ಷಗಳಾಗಿರಬೇಕು. 

ಅಂದಹಾಗೇ ಮಹಿಳಾ ಮಿಲಿಟರಿ ಪೊಲೀಸ್ನೇಮಕಾತಿ ಡ್ರೈವ್ನಲ್ಲಿ ಈ ಸಲ ಕೆಲವು ಮಾರ್ಪಾಡುಗಳನ್ನ ಮಾಡಲಾಗಿದೆ. ಈಗ ಭಾರತೀಯ ಗೂರ್ಖಾ ಸಮುದಾಯದ ಮಹಿಳೆಯರು ಕೂಡ ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನೇಪಾಳ ಮತ್ತು ಭಾರತದ ಗೂರ್ಖಾ ಸಮುದಾಯದ ಮಹಿಳೆಯರು ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ಗ್ರಾಮೀಣ ಬ್ಯಾಂಕುಗಳಲ್ಲಿ 10,447 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಗುಜರಾಯಿಸಿ

ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಇ) ಮೂಲಕ ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರವೇಶ ಪತ್ರದ ಮೂಲಕ ರ್ಯಾಲಿಯ ಸ್ಥಳ, ದಿನಾಂಕ ಮತ್ತು ಲಿಖಿತ ಪರೀಕ್ಷೆಯ ಸಮಯವನ್ನು ತಿಳಿಸಲಾಗುತ್ತದೆ. ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ joinindianarmy.nic.in ನಲ್ಲಿ ಘೋಷಿಸಲಾಗುತ್ತದೆ. ಅಭ್ಯರ್ಥಿಗೆ ಯಾವುದೇ ಪ್ರತ್ಯೇಕ ಪತ್ರವನ್ನು ಕಳುಹಿಸಲಾಗುವುದಿಲ್ಲ.

click me!