ಸೇನೆಯ ನಾನ್ ಡಿಪಾರ್ಟಮೆಂಟಲ್ ಆಫೀಸರ್‌ ನೇಮಕಾತಿ, ತಿಂಗಳಿಗೆ 1,77,500 ರೂ.ವರೆಗೆ ಸಂಬಳ

By Suvarna NewsFirst Published Jul 24, 2021, 12:58 PM IST
Highlights

ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ತನ್ನ ಇಲಾಖೇತರ ಆಫೀಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಗಸ್ಟ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಸಖತ್ ಸಂಬಳವೂ ಇದೆ. ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. 

ಭಾರತೀಯ ಸೇನೆಯು,  ಪ್ರಾದೇಶಿಕ ಸೇನಾ ವ್ಯಾಪ್ತಿಯಲ್ಲಿ ಇಲಾಖೇತರ ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈಗಾಗಲೇ ಜುಲೈ 20ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಆನ್ಲೈನ್ ಮೂಲಕ www.jointerritorialarmy.gov.in. ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಗಸ್ಟ್ ೧೯ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ.

ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎದುರಿಸಲು ಅರ್ಹತೆ ಪಡೆದಿರಬೇಕು. ಅರ್ಹತೆ ಮತ್ತು ಸ್ಕ್ರೀನಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಲೆಫ್ಟಿನೆಂಟ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  ನೇಮಕಗೊಂಡ ಅಭ್ಯರ್ಥಿಗಳಿಗೆ 56,100 ರಿಂದ 1,77,500 ರೂ.ವರೆಗೆ ವೇತನ ಸಿಗಲಿದೆ. 

ITI ಪಾಸಾದವರಿಗೆ ಅವಕಾಶ: NPCILನಲ್ಲಿ 173 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ಅಭ್ಯರ್ಥಿಗಳು ಪ್ರಾದೇಶಿಕ ಸೈನ್ಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇ-ಮೇಲ್ ಐಡಿ, ಮೊಬೈಲ್ ನಂಬರ್ ಮತ್ತಿತ್ತರ ದಾಖಲೆಗಳ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಸ್ಕ್ಯಾನ್ ಮಾಡಿರುವ ಎಲ್ಲ ದಾಖಲೆ ಹಾಗೂ ಶುಲ್ಕದ ರಸೀದಿಯನ್ನು ಅಪ್ಲೋಡ್ ಮಾಡಬೇಕು. 

ಈ ಹುದ್ದೆಗಳಿಗೆ ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ 18 ರಿಂದ 42 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.  ಅಭ್ಯರ್ಥಿಯು ದೈಹಿಕವಾಗಿ ಮತ್ತು ವೈದ್ಯಕೀಯವಾಗಿ ಎಲ್ಲ ರೀತಿಯಲ್ಲೂ ಫಿಟ್ ಆಗಿರಬೇಕು.

ಸೇನೆಯ ಈ ಹುದ್ದೆಗಳಿಗೆ ಲಿಖಿತ ರೂಪದಲ್ಲಿ ಎರಡು ಭಾಗಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಟೆರಿಟೊರಿಯಲ್ ಆರ್ಮಿ ಕಮಿಷನ್ ಬೋರ್ಡ್ ಸೆಪ್ಟೆಂಬರ್ 26ಕ್ಕೆ ಪರೀಕ್ಷೆ ನಡೆಸಲಿದೆ. ಜೈಪುರ, ಪುಣೆ, ಬೆಂಗಳೂರು, ಹೈದರಾಬಾದ್, ಕೋಲ್ಕತಾ, ಡಾರ್ಜಿಲಿಂಗ್, ಗುವಾಹಟಿ, ದಿಮಾಪುರ, ಚಂಡೀಗಢ, ಜಲಂಧರ್, ಶಿಮ್ಲಾ, ದೆಹಲಿ, ಅಂಬಾಲಾ, ಹಿಸಾರ್, ಲಕ್ನೋ, ಅಲಹಾಬಾದ್, ಆಗ್ರಾ, ಭುವನೇಶ್ವರ, ಡೆಹ್ರಾಡೂನ್, ಉಡ್ರಾಗಂಪೂರ್ ನಲ್ಲಿ ಪರೀಕ್ಷೆ ನಡೆಯಲಿದೆ. 

7035 ಹುದ್ದೆಗಳಿಗೆ ಎಸ್ಎಸ್‌ಸಿ ಸಿಜಿಎಲ್ ನೇಮಕಾತಿ: ಆಗಸ್ಟ್ 13ರಿಂದ 24ರವರೆಗೆ ಪರೀಕ್ಷೆ

ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ 2 ಗಂಟೆ ಕಾಲಾವಕಾಶ ಸಿಗುತ್ತದೆ. MCQ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಭ್ಯರ್ಥಿಗಳು OMR ಹಾಳೆಯಲ್ಲಿ ಉತ್ತರವನ್ನು ಭರ್ತಿ ಮಾಡಬೇಕಾಗುತ್ತದೆ. ಪ್ರತಿ ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠ 40% ಅಂಕಗಳು ಹಾಗೂ ಒಟ್ಟಾರೆ ಸರಾಸರಿ 50% ಅಂಕ ಗಳಿಸಿದವರು ಈ ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹತೆ ಪಡೆಯುತ್ತಾರೆ. 

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು 200 ರೂ. ಶುಲ್ಕ ಪಾವತಿಸಿ ರಸೀದಿಯ ಪ್ರತಿ ಸಲ್ಲಿಸಬೇಕು. ಬಳಿಕ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮತ್ತೊಂದು ಪರೀಕ್ಷೆಗಾಗಿ ಸೇವಾ ಆಯ್ಕೆ ಸಮಿತಿಗೆ (ಎಸ್ ಎಸ್ ಬಿ) ಹಾಗೂ ಅಂತಿಮ ಆಯ್ಕೆಗಾಗಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತದೆ. 

ಆಯ್ಕೆಯಾದ ನಂತರ ಅಭ್ಯರ್ಥಿಗಳು ಆಯೋಗದ ಮೊದಲ ವರ್ಷದಲ್ಲಿ ಒಂದು ತಿಂಗಳ ಮೂಲ ತರಬೇತಿ ಮತ್ತು ಮೊದಲ ವರ್ಷ ಸೇರಿದಂತೆ ಪ್ರತಿ ವರ್ಷ ಎರಡು ತಿಂಗಳ ವಾರ್ಷಿಕ ತರಬೇತಿ ಶಿಬಿರಕ್ಕೆ ಒಳಗಾಗುತ್ತಾರೆ. ಚೆನ್ನೈನ ಒಟಿಎದಲ್ಲಿ ಮೊದಲ ಎರಡು ವರ್ಷಗಳಲ್ಲಿ ಮೂರು ತಿಂಗಳ ಪೋಸ್ಟ್ ಕಮಿಷನಿಂಗ್ ತರಬೇತಿಯೂ ಇರುತ್ತದೆ.

ಸಂಶೋಧನಾ ಸಹಾಯಕರು, ವಿಜ್ಞಾನಿಗಳ ನೇಮಕಾತಿ: 1,77,500 ರೂ.ವೇತನ!

'ಯುವ ನಾಗರಿಕರು, ಮಿಲಿಟರಿ ಪರಿಸರದಲ್ಲಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುವ ಪರಿಕಲ್ಪನೆಯ ಆಧಾರದ ಮೇಲೆ ಸಮವಸ್ತ್ರ ಧರಿಸಿ ರಾಷ್ಟ್ರವನ್ನು ಪ್ರಾದೇಶಿಕ ಸೇನಾಧಿಕಾರಿಗಳಾಗಿ (ಇಲಾಖೇತರ) ಸೇವೆ ಸಲ್ಲಿಸುವ ಅವಕಾಶಕ್ಕಾಗಿ ಕಾಯುತ್ತಿರುವ ಯುವ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವು ರಾಷ್ಟ್ರ ಕ್ಕಾಗಿ ಎರಡು ರೀತಿಯಲ್ಲಿ ಸೇವೆ ಸಲ್ಲಿಸಬಹುದು. ನಾಗರಿಕರಾಗಿ ಮತ್ತು ಸೈನಿಕರಾಗಿ. ಇಂತಹ ಯಾವುದೇ ಅನುಭವಗಳನ್ನು ಪಡೆಯಲು ಬೇರೆ ಯಾವುದೇ ಆಯ್ಕೆ ನಿಮಗೆ ಅವಕಾಶ ನೀಡುವುದಿಲ್ಲ,'ಎಂದು ಪ್ರಾದೇಶಿಕ ಸೈನ್ಯ ಹೇಳಿದೆ.

click me!