ಭಾರತೀಯ ವಾಯು ಪಡೆಯು ತನ್ನ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಅರ್ಜಿ ಸಲ್ಲಿಸಲು ಮೇ 2 ಎರಡು ಕೊನೆಯ ದಿನವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 1515 ಹುದ್ದೆಗಳಿಗೆ ವಾಯು ಪಡೆಯು ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ.
ಭಾರತೀಯ ವಾಯುಪಡೆ, ಖಾಲಿಯಿರುವ ಸಿ-ಗ್ರೂಪ್ ಸಿವಿಲಿಯನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಭಾರತೀಯ ಏರ್‌ಫೋರ್ಸ್‌ನ ಅಧಿಕೃತ ವೆಬ್‌ಸೈಟ್ indianairforce.nic.in ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆ ಮೂಲಕ ಐಎಎಫ್ ಸಂಸ್ಥೆಯಲ್ಲಿ ಖಾಲಿಯಿರುವ ಸ್ಟೆನೋ, ಕುಕ್, ಹೌಸ್ ಕೀಪಿಂಗ್ ಸ್ಟಾಫ್, ಎಂಟಿಎಸ್, ಎಲ್‌ಡಿಸಿ, ಸಿಎಸ್ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, ಲಾಂಡ್ರಿಮ್ಯಾನ್, ಆಯಾ, ಹಿಂದಿ ಟೈಪಿಸ್ಟ್ ಸೇರಿ ಒಟ್ಟು 1,515 ಗ್ರೂಪ್ ಸಿ ನಾಗರಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಯೋಗ ಪದವಿ ಇದ್ದರೆ ಕೈತುಂಬಾ ದುಡಿಮೆ ಗ್ಯಾರಂಟಿ!
ಏಪ್ರಿಲ್ ೩ರಂದು ಐಎಎಫ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಮೇ ೨ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯಾಗಿ ಅಭ್ಯರ್ಥಿಗಳು indianairforce.nic.in ವೆಬ್‌ಸೈಟ್‌ಗೆ ಭೇಟಿ ಕೊಡಬುಹದು.
ಪಶ್ಚಿಮ ಏರ್ ಕಮಾಂಡ್ ಯೂನಿಟ್‌ನಲ್ಲಿ 362 ಹುದ್ದೆಗಳು, ದಕ್ಷಿಣ ಏರ್ ಕಮಾಂಡ್ ಯೂನಿಟ್: 28 ಹುದ್ದೆಗಳು, ಪೂರ್ವ ಏರ್ ಕಮಾಂಡ್ ಯೂನಿಟ್: 132 ಹುದ್ದೆಗಳು, ಕೇಂದ್ರೀಯ ಏರ್ ಕಮಾಂಡ್ ಯೂನಿಟ್: 116 ಹುದ್ದೆಗಳು, ಮೇಂಟೆನನ್ಸ್ ಏರ್ ಕಮಾಂಡ್ ಯೂನಿಟ್: 479 ಹುದ್ದೆಗಳು, ಟ್ರೈನಿಂಗ್ ಕಮಾಂಡ್ ಯೂನಿಟ್ - 407 ಹುದ್ದೆಗಳಿಗೆ ಭಾರತೀಯ ವಾಯು ಪಡೆಯಲು ಖಾಲಿ ಇರುವ ಸಿ ಗ್ರೂಪ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಸೀನಿಯರ್ ಕಂಪ್ಯೂಟರ್ ಆಪರೇಟರ್: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿವಿಯಿಂದ ಗಣಿತ ಅಥವಾ ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿರಬೇಕು. ಇಧರ ಜೊತೆಗೆ ಎಲೆಕ್ಟ್ರಾನಿಕ್ ಡಾಟಾ ಪ್ರೊಸೆಸಿಂಗ್‌ನಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು.ಸ್ಟೆನೋ ಗ್ರೇಡ್-2: ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು 12ನೇ ತರಗತಿ ಪಾಸ್ ಆಗಿರಬೇಕು.
ಇಸ್ರೋದಲ್ಲಿ ಕೆಲಸ ಮಾಡಬೇಕಾ? ಇಲ್ಲಿದೆ ಅವಕಾಶ, ಅರ್ಜಿ ಸಲ್ಲಿಸಲು ಏ.21 ಕೊನೆಯ ದಿನ
ಲೋಯರ್ ಡಿವಿಷನ್ ಕ್ಲರ್ಕ್, ಟೈಪಿಸ್ಟ್: ಈ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅ ಭ್ಯರ್ಥಿಗಳು ೧೨ನೇ ತರಗತಿ ಪಾಸ್, ಜೊತೆಗೆ ಇಂಗ್ಲೀಷ್ ಟೈಪಿಂಗ್ ನಿಮಿಷಕ್ಕೆ 35 ಪದ ಹಾಗೂ ಹಿಂದಿಯಲ್ಲಿ 30 ಪದ ಟೈಪ್ ಸ್ಪೀಡ್ ಇರಬೇಕು.
ಕುಕ್: ಮಾನ್ಯತೆ ಪಡೆದ ಬೋರ್ಡ್‌ನಿಂದ ಮೆಟ್ರಿಕ್ಯುಲೇಷನ್ ಆಗಿರಬೇಕು. ಜೊತೆಗೆ ಕ್ಯಾಟರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ಪೇಂಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ೧೦ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಪೇಂಟರ್ ವಿಭಾಗದಲ್ಲಿ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು. ಈ ರೀತಿಯಾಗಿ ಸಿ ಗ್ರೂಪ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: ಈ ಎಲ್ಲ ಹುದ್ದೆಗಳಿಗೆ ಲಿಖಿತ ಟೆಸ್ಟ್ ಮೂಲಕ ಅರ್ಹ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುವುದು. ಸಾಮಾನ್ಯ ಜ್ಞಾನ, ಸಂಖ್ಯಾತ್ಮಕ ಆಪ್ಟಿಟ್ಯೂಡ್, ಜನರಲ್ ಇಂಗ್ಲೀಷ್, ಸಾಮಾನ್ಯ ಜಾಗೃತಿ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ಟೆಸ್ಟ್ ನಡೆಸಲಾಗುವುದು. ಪ್ರಶ್ನೆಪತ್ರಿಕೆಯು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಇರುತ್ತದೆ. ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಕೌಶಲ್ಯ/ದೈಹಿಕ/ಪ್ರಾಕ್ಟಿಕಲ್ ಟೆಸ್ಟ್‌ಗೆ ಕರೆಯಲಾಗುವುದು.
ಬಿಎಚ್‌ಇಎಲ್‌ನಲ್ಲಿ 40 ಟ್ರೈನಿ ಹುದ್ದೆಗಳಿಗೆ ನೇಮಕಾತಿ, ಬಿಕಾಂ ಪದವೀಧರರಿಗೆ ಅವಕಾಶ
ಆಸಕ್ತ ಅಭ್ಯರ್ಥಿಗಳು ನಿಗದಿತ ಪ್ರಕ್ರಿಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಇಂಗ್ಲಿಷ್ / ಹಿಂದಿಯಲ್ಲಿ ಟೈಪ್ ಮಾಡಲಾದ ಅರ್ಜಿಯನ್ನು ಸಂಬಂಧಿತ ದಾಖಲೆಗಳೊಂದಿಗೆ 30 ದಿನಗಳ ಒಳಗೆ ಅಂದ್ರೆ ಮೇ ೨ರೊಳಗೆ ವಾಯುಪಡೆಯ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಬೇಕು. ಲಕೋಟೆ ಮೇಲೆ ಯಾವ ಹುದ್ದೆ ಅರ್ಜಿ ಸಲ್ಲಿಸುತ್ತಿದ್ದೀರಿ ಎಂಬ ಬಗ್ಗೆ ದೊಡ್ಡದಾಗಿ ನಮೂದಿಸಿರಬೇಕು. ಆನ್ಲೈನ್ಮೂಲಕವೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಐಎಎಫ್‌ನ ಅಧಿಕೃತ ವೆಬ್‌ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.