ಕ್ರೀಡಾ ಕೋಟಾದಲ್ಲಿ ತೆರಿಗೆ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಹಾಕಿ

By Suvarna News  |  First Published Jan 8, 2021, 1:31 PM IST

ನೀವು ಕ್ರೀಡಾಪಟುಗಳಾಗಿದ್ದು, ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತರೇ? ಹೌದು ಎಂದಾದರೆ ತಡವೇಕೆ, ಅರ್ಜು ಗುಜರಾಯಿಸಿ. ಕ್ರೀಡಾ ಕೋಟಾದಡಿ ಚೆನ್ನೈನ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.


ಆದಾಯ ತೆರಿಗೆ ಇಲಾಖೆಯು ಪ್ರಮುಖ ಇಲಾಖೆಯಾಗಿದ್ದು, ಈ  ಇಲಾಖೆಯಲ್ಲಿ ಕೆಲಸ ಮಾಡವುದು ಕೂಡ ಹೆಮ್ಮೆಯ ವಿಷಯವೇ ಸರಿ. ವಿಷಯ ಏನೆಂದರೆ,  ಚೆನ್ನೈನ ಆದಾಯ ತೆರಿಗೆ ಮುಖ್ಯ ಆಯುಕ್ತರ ಕಚೇರಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಸ್ಫೋರ್ಟ್ ಕೋಟಾದಡಿ ಎಂಟಿಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್),  ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಹಾಗೂ ತೆರಿಗೆ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ವಿಶ್ವವಿದ್ಯಾಲಯದಲ್ಲಿ ಓದುತ್ತಲೇ ಪಾರ್ಟ್ ಟೈಮ್ ಜಾಬ್ ಕೂಡ ಮಾಡಬಹುದು!

Tap to resize

Latest Videos

undefined

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಎಲ್ಲ ಅಂತರ್ ವಿವಿಯ ಟೂರ್ನಮೆಂಟ್‌ಗಳು, ನ್ಯಾಷನಲ್ ಸ್ಕೂಲ್ ಗೇಮ್ಸ್, ರಾಷ್ಟ್ರೀಯ ದೈಹಿಕ ಸಾಮರ್ಥ್ಯ ಸ್ಪರ್ಧೆಗಳನ್ನ ಪ್ರತಿನಿಧಿಸಿದ್ದ ಅರ್ಹ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಇದೇ ಜನವರಿ ೧೭ರ ಒಳಗೆ tnincometax.gov.in ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಯಾವ ಹುದ್ದೆಗಳು?
ಎಂಟಿಎಸ್ 10, ಇನ್‌ಕಮ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ 12, ತೆರಿಗೆ ಸಹಾಯಕ 16 ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ tnincometax.gov.in ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಇನ್ನು ಎಂಟಿಎಸ್ ಹುದ್ದೆಗೆ ಭರ್ತಿಯಾಗುವವರಿಗೆ 5200+20200+ಗ್ರೇಡ್ ಪೇ 1800 (ಪಿಬಿ-1) ಸಂಬಳ ದೊರೆಯಲಿದೆ. ಅದೇ ರೀತಿ, ಇನ್‌ಕಮ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ಗಳಿಗೆ 9300 ರಿಂದ  24,400+ಗ್ರೇಡ್ ಪೇ 4600 (ಪಿಬಿ-2) ವೇತನವಿದೆ. ಟ್ಯಾಕ್ಸ್ ಅಸಿಸ್ಟೆಂಟ್‌ಗಳಿಗೆ 5,200ರಿಂದ 20200+ಗ್ರೇಡ್ ಪೇ 2400 (ಪಿಬಿ-ಎಲ್)   ವೇತನ ಶ್ರೇಣಿ ಇರಲಿದೆ.

ಶೈಕ್ಷಣಿಕ ಅರ್ಹತೆ?
ಎಂಟಿಎಸ್ಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ೧೦ನೇ ತರಗತಿ ಪಾಸಾಗಿರಬೇಕು. ಅದೇ ರೀತಿ,
ಇನ್‌ ಕಮ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಹುದ್ದೆಗೆ ಅಪ್ಲೈ ಮಾಡೋರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಪಡೆದುಕೊಂಡಿರಬೇಕು. ತೆರಿಗೆ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಪಾಸಾಗರಿಬೇಕು. ವಯೋಮೀತಿ  ೧೮ ರಿಂದ ೨೫ ವರ್ಷಗಳು.

ಪರೀಕ್ಷೆ ಟೈಮಲ್ಲಿ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಹೇಗೆ?

ಕ್ರೀಡಾ ಅರ್ಹತೆ?
2020, 2019, 2018 ಮತ್ತು 2017 ರ ಕ್ಯಾಲೆಂಡರ್ ವರ್ಷಗಳಲ್ಲಿ ಮಾನ್ಯತೆ ಪಡೆದ ಪಂದ್ಯಾವಳಿಗಳು / ಈವೆಂಟ್‌ಗಳಲ್ಲಿ ಭಾಗವಹಿಸುವಿಕೆಯ ಆಧಾರದ ಮೇಲೆ ಪ್ರಾವೀಣ್ಯತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ. ಪಂದ್ಯಾವಳಿಗಳು / ಈವೆಂಟ್‌ಗಳನ್ನು ಪ್ರಾಮುಖ್ಯತೆಯ ಕ್ರಮದಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ. 2020, 2019,2018 ಮತ್ತು 2017 ರ ಕ್ಯಾಲೆಂಡರ್‌ನಲ್ಲಿನ ಮೂರು ಪ್ರದರ್ಶನಗಳಲ್ಲಿ ಅತ್ಯುತ್ತಮವಾದವುಗಳನ್ನು ಮೌಲ್ಯಮಾಪನಕ್ಕಾಗಿ ಪರಿಗಣಿಸಲಾಗುತ್ತದೆ. ಅಪ್ಲಿಕೇಶನ್‌ನಲ್ಲಿ ಇವುಗಳನ್ನು ಸರಿಯಾಗಿ ಭರ್ತಿ ಮಾಡಬೇಕು. ಹೆಚ್ಚಿನ ವಿವರಗಳಿಗಾಗಿ, ವಿವರವಾದ ಅಧಿಸೂಚನೆಯನ್ನು ಪರಿಶೀಲಿಸಿ.

ನೇಮಕಾತಿ ಪ್ರಕ್ರಿಯೆ ಹೀಗಿರುತ್ತೆ?
ಮೊದಲ ಹಂತದಲ್ಲಿ, ಅರ್ಹ ಅಭ್ಯರ್ಥಿಗಳನ್ನು ಅವರ ಪ್ರಸ್ತುತ ಫಾರ್ಮ್ ಮತ್ತು ಕ್ರೀಡೆ ಮತ್ತು ಆಟಗಳಲ್ಲಿನ ಸಾಧನೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿದ ಹುದ್ದೆಯ ಆಯ್ಕೆಯ ಪ್ರಕಾರ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಶಾರ್ಟ್ ಲಿಸ್ಟ್ ಆಗಿರುವ ಅಭ್ಯರ್ಥಿಗಳು ಚೆನ್ನೈನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ (ತಮ್ಮ ಸ್ವಂತ ವೆಚ್ಚದಲ್ಲಿ). ಯಾವುದೇ ಅಭ್ಯರ್ಥಿಗೆ ಹಾಜರಾಗಲು / ಭಾಗವಹಿಸಲು ಸಾಧ್ಯವಾಗದಿದ್ದರೆ, ಯಾವುದೇ ಕಾರಣಕ್ಕಾಗಿ ಅಥವಾ ಪರೀಕ್ಷೆಯಲ್ಲಿ ಭಾಗವಹಿಸಿದವರು ಸೂಕ್ತವಾಗಿ ಕಂಡುಬಂದಿಲ್ಲವಾದರೆ, ಅವನು / ಅವಳು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

ಆನ್‌ಲೈನ್‌ನಲ್ಲಿ ಅಪ್ಲಿಕೇಷನ್ ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಕಾಲೇಜ್ ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್

click me!