KEA Exam Paper Leak ರಿಜಿಸ್ಟ್ರಾರ್ ರನ್ನು ಕೆವಿವಿಯಿಂದ ಕೈಬಿಡಲು ಎಬಿವಿಪಿ ಆಗ್ರಹ

By Suvarna News  |  First Published Apr 28, 2022, 11:42 AM IST

ಕರ್ನಾಟಕ ವಿಶ್ವವಿದ್ಯಾಲಯ  ಮೌಲ್ಯಮಾಪನ ಕುಲಸಚಿವರನ್ನು ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯ   ಪ್ರಶ್ನೆ ಪತ್ರಿಕೆಯ ಸೋರಿಕೆಯ  ವಿಚಾರಕ್ಕೆ ಸಂಬಂಧಿಸಿ   ಸಿಐಡಿ ಆಧಿಕಾರಿಗಳು ಬಂಧಿಸಿದ್ದಾರೆ. 


ಧಾರವಾಡ (ಎ.28): ಕರ್ನಾಟಕ ವಿಶ್ವವಿದ್ಯಾಲಯ (Karnataka University) ಮೌಲ್ಯಮಾಪನ ಕುಲಸಚಿವರನ್ನು ಸಹಾಯಕ ಪ್ರಾಧ್ಯಾಪಕ ಪರೀಕ್ಷೆಯ (assistant professor exams) ಪ್ರಶ್ನೆ ಪತ್ರಿಕೆಯ ಸೋರಿಕೆಯ (KEA Exam Paper Leak ) ವಿಚಾರಕ್ಕೆ ಸಂಬಂಧಿಸಿ   ಸಿಐಡಿ ಆಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಹೆಸರು ಕೇಳಿ ಬಂದ ಹಿನ್ನಲೆ ಪ್ರೊ. ಹೆಚ್‌. ನಾಗರಾಜ್ (Registrar H Nagaraj) ಅವರನ್ನು ಕವಿವಿಯಿಂದ ಕೈಬಿಡಲು ಆಗ್ರಹಿಸಿ   ಎ.ಬಿ.ವಿ.ಪಿ (ABVP) ಕಾರ್ಯಕರ್ತರು ಕುಲಪತಿಗಳಾದ ಕೆ ಬಿ ಗುಡಸಿ ಅವರಿಗೆ ಮನವಿ ಸಲ್ಲಿಸಿದರು. 

ಪ್ರಕರಣ ಸಂಬಂಧ ಭಾನುವಾರ ಬಂಧಿಸಲಾದ ಪ್ರಮುಖ ಆರೋಪಿ ಸೌಮ್ಯಾ ಆರ್ (Sowmya R) ಜೊತೆ ಸಂಪರ್ಕದಲ್ಲಿದ್ದ ಕವಿವಿ ರಿಜಿಸ್ಟ್ರಾರ್ ಎಚ್ ನಾಗರಾಜ್(59) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪರೀಕ್ಷೆಗೆ ಭೌಗೋಳಿಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ನಾಗರಾಜ ಅವರನ್ನು ಠಾಣೆಗೆ ಕರೆತಂದು ನಾಲ್ಕು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಕೆಲವು ನಿರ್ಣಾಯಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಹೇಳಿಕೆಯ ಆಧಾರದ ಮೇಲೆ ಮುಂದಿನ ತನಿಖೆ ನಡೆಯಲಿದೆ ಎಂದು ತಿಳಿದುಬಂದಿದೆ.

Tap to resize

Latest Videos

ರಾಜ್ಯ ಸರ್ಕಾರ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನೇಮಕಾತಿಗೆ ನಡೆಸಿದ ಪರೀಕ್ಷೆಯಲ್ಲಿ ಕೇಳಿ ಬಂದಿರುವ ಅಕ್ರಮದ ಹಿನ್ನಲೆಯಲ್ಲಿ ಸರಕಾರ ಸೂಕ್ತ ತನಿಖೆಗೆ ಸರಕಾರಕ್ಕೆ ಆಗ್ರಹಿಸಿತ್ತು. ಈ ಕುರಿತಾಗಿ ಉನ್ನತ ಶಿಕ್ಷಣ ಸಚಿವರು ಮುಂದಿನ ಕ್ರಮಕ್ಕೆ ಕೆಇಎಗೆ ( Karnataka Examinations Authority) ಆದೇಶಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ KEA  CID ಗೆ ದೂರು ಕೂಡ ಕೊಟ್ಟಿತ್ತು. ದೂರಿನ ಅನ್ವಯ ಸಿಐಡಿಯು ತನಿಖೆಯ ಪ್ರಾರಂಭಿಸಿತು. ತನಿಖೆಯ ಪ್ರಾರಂಭದಲ್ಲಿ ಮೈಸೂರಿನ ಸೌಮ್ಯ ಅವರನ್ನು ಬಂಧಿಸಿ ಅವರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ಕವಿವಿಯ ಪರೀಕ್ಷಾಂಗ ಕುಲಸಚಿವರನ್ನು ವಿಚಾರಣೆಗೆ ಒಳಪಡಿಸಿದ್ದರು.

Big Impact: ಮಳೆಯಿಂದ ಕೊಚ್ಚಿಹೋಗಿದ್ದ ಶಾಲೆಗೆ ಮುಕ್ತಿ, ಸಂಭ್ರಮಿಸಿದ ಚಿಕ್ಕಮಗಳೂರು ಜನ

 ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕಿಯಾಗಿರುವ (guest lecturer of Mysuru University) ಸೌಮ್ಯಾ ಆರ್(30) ಅವರು ಭೌಗೋಳಿಕ ವಿಭಾಗದಲ್ಲಿ (Geography department) ಕರ್ತವ್ಯ ನಿರ್ವಹಿಸುತ್ತಿದ್ದರು.  ಸೌಮ್ಯ 18 ಪ್ರಶ್ನಾವಳಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಇತರರಿಗೆ ಕಳುಹಿಸಿರುವುದು ಈಗಾಗಲೇ ದೃಢಪಟ್ಟಿದೆ.  1,200 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಮಾರ್ಚ್ 2021 ರಲ್ಲಿ ಪರೀಕ್ಷೆ ನಡೆದಿತ್ತು.

ಕವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ. ನಾಗರಾಜ್ ಅವರನ್ನು ಬಂಧಿಸಿರುವ ಬಗ್ಗೆ ಸುದ್ದಿ ಜಗಜ್ಜಾಹಿರವಾಗಿದೆ.  ಕವಿವಿಯ ಗೌರವ ಮತ್ತು ಹಿತದೃಷ್ಟಿಯಲ್ಲಿ ಕವಿವಿಯ ಅಧಿಕಾರಿಗಳು ಸತ್ಯಾಸತ್ಯತೆ ಅರಿತುಕೊಂಡು ತಕ್ಷಣವೇ ಕುಲಸಚಿವರನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತದೆ. ಎಬಿವಿಪಿ ಜಿಲ್ಲಾ ಸಂಚಾಲಕ ಅರುಣ ನೆತೃತ್ವದಲ್ಲಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ‌. ಜಿಲ್ಲಾ ಸಂಚಾಲಕ ಅರುಣ ಅಮರಗೋಳ, ಪ್ರತಿಕ ಮಾಳಿ, ಗಂಗಾಧರ ಹಂಜಗಿ, ಶಂಶಾಂಕ ಮಟ್ಟಿ, ಬಸವರಾಜ, ದರ್ಶನ ಇತರರಿದ್ದರು.

PSI Recruitment Scam: ನಾಪತ್ತೆಯಾಗಿರುವ ದಿವ್ಯಾ ಶ್ರೀ ಕಾಶ್ಮೀರದಲ್ಲಿ?

ಪ್ರತಿ ಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ  ಡೀಲ್‌..!: ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಗೆ (Professor Recruitment) ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Examination) ನಡೆದಿದೆ ಎನ್ನಲಾಗುತ್ತಿರುವ ಪ್ರತಿ ಹುದ್ದೆ ಡೀಲ್‌ನ ಮೊತ್ತ ಎಷ್ಟು ಗೊತ್ತಾ? ಒಂದೊಂದು ಹುದ್ದೆಗೆ ಕನಿಷ್ಠ 40 ರಿಂದ 50 ಲಕ್ಷ ರು. ಇನ್ನು ಕೆಲವೊಂದು ಪ್ರಮುಖ ವಿಭಾಗದ ಹುದ್ದೆಗಳಿಗೆ ಗರಿಷ್ಠ 80 ಲಕ್ಷ ರು. ವರೆಗೆ ಮಧ್ಯವರ್ತಿಗಳ ಮೂಲಕ ವ್ಯಾಪಾರ ಕುದುರಿಸಲಾಗಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ(Department of Higher Education) ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಅಕ್ರಮ, ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮಕ್ಕಿಂತ ದೊಡ್ಡದು. ಸಮರ್ಪಕ ತನಿಖೆ(Investigation)  ನಡೆದರೆ ಅಕ್ರಮದ ವಿಶ್ವರೂಪ ಬಹಿರಂಗಕ್ಕೆ ಬರಲಿದೆ. ಸರ್ಕಾರ ಪಿಎಸ್‌ಐ ಪರೀಕ್ಷಾ(PSI Recruitment Scam) ಅಕ್ರಮದಂತೆ ಈ ಪ್ರಕರಣವನ್ನು ತಕ್ಷಣ ಸಿಐಡಿ(CID) ಅಥವಾ ಇನ್ಯಾವುದೇ ಉನ್ನತ ತನಿಖೆಗೆ ವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲೂ ಒತ್ತಾಯ ಕೇಳಿಬರುತ್ತಿದೆ.

click me!