Karnataka Teacher Recruitment 2022: 15 ಸಾವಿರ ಹುದ್ದೆಗೆ ಅರ್ಜಿ ಸಲ್ಲಿಸಲು ಒಂದೇ ದಿನ ಬಾಕಿ

By Suvarna News  |  First Published Apr 25, 2022, 12:55 PM IST

ರಾಜ್ಯ ಸರ್ಕಾರಿ ಶಾಲೆಗಳಲ್ಲಿನ 6ರಿಂದ 8ನೇ ತರಗತಿಗಳಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಏಪ್ರಿಲ್ 26 ಕೊನೆಯ ದಿನವಾಗಿದೆ.


ಬೆಂಗಳೂರು (ಏ.25): ರಾಜ್ಯ ಸರ್ಕಾರಿ ಶಾಲೆಗಳಲ್ಲಿನ (Government Schools) 6ರಿಂದ 8ನೇ ತರಗತಿಗಳಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ (Teacher Recruitment)  ಅವಧಿಯನ್ನು ವಿಸ್ತರಣೆ ಮಾಡಲಾಗಿದ್ದು, ಏಪ್ರಿಲ್ 26 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಮಾ.23ರಿಂದ ಏ.22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.  ಅದರಂತೆ ಕೆಲವು ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್‌ www.schooleducation.kar.nic.in ನಲ್ಲಿ ಕೇವಲ ರಿಜಿಸ್ಟ್ರೇಷನ್‌ ಮಾತ್ರ ಮಾಡಿಕೊಂಡಿದ್ದು, ಅರ್ಜಿಯಲ್ಲಿ ವಿವರಗಳನ್ನು ಭರ್ತಿ ಮಾಡಿರುವುದಿಲ್ಲ. ಅಂತಹ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ, ಅರ್ಜಿ ತುಂಬಲು ಮತ್ತು ಅರ್ಜಿ ಶುಲ್ಕ ಪಾವತಿಸಲು ದಿನಾಂಕ 26-04-2022 ರವರೆಗೆ ಕಾಲಾವಕಾಶ ನೀಡಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ https://www.schooleducation.kar.nic.in ಮಾತ್ರ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದವರಿಗೆ ಪ್ರತಿ ಹುದ್ದೆಗೆ 1250 ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 625 ರು. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(KARTET) ಅರ್ಹತಾ ಅಂಕ ಗಳಿಸಿರುವ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇ 21 ಮತ್ತು 22ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ನಡೆಯಲಿದೆ ಎಂದು ಈಗಾಗಲೇ ಶಿಕ್ಷಣ ಇಲಾಖೆ (Department of Education) ಅಧಿಸೂಚನೆಯಲ್ಲಿ ಪ್ರಕಟಿಸಿದೆ.

Latest Videos

undefined

ICAR RECRUITMENT 2022 ಕೃಷಿ ವಿಜ್ಞಾನ ಕೇಂದ್ರದಲ್ಲಿ IT ವೃತ್ತಿಪರ ಹುದ್ದೆಗೆ ನೇಮಕಾತಿ

15 ಸಾವಿರ ಹುದ್ದೆಗಳಲ್ಲಿ 6,500 ಗಣಿತ ಶಿಕ್ಷಕರು, 5000 ಸಮಾಜ ವಿಜ್ಞಾನ ವಿಷಯ ಶಿಕ್ಷಕರು, 2000 ಜೀವ ವಿಜ್ಞಾನ ವಿಷಯ ಶಿಕ್ಷಕರು ಹಾಗೂ 1500 ಆಂಗ್ಲ ಭಾಷಾ ವಿಷಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ಜ್ಞಾನ, ವಿಷಯ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಎಂಬ ಮೂರು ಪ್ರಶ್ನೆ ಪತ್ರಿಕೆಗಳಿದ್ದು, 1 ಮತ್ತು 2ನೇ ಪತ್ರಿಕೆಗೆ ತಲಾ 150 ಅಂಕ ಹಾಗೂ 3ನೇ ಪತ್ರಿಕೆಗೆ 100 ಅಂಕ ಸೇರಿದಂತೆ ಒಟ್ಟಾರೆ 400 ಅಂಕಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು.

ಪತ್ರಿಕೆ-1ರಲ್ಲಿ ಕನಿಷ್ಠ ಅಂಕಗಳನ್ನು ಗಳಿಸಬೇಕೆಂಬ ಮಾನದಂಡ ವಿಧಿಸಿಲ್ಲ. ಆದರೆ, ಮೆರಿಟ್‌ಗೆ ಪರಿಗಣಿಸಲಾಗುತ್ತದೆ. 2ನೇ ಪತ್ರಿಕೆಯಲ್ಲಿ ಕನಿಷ್ಠ ಶೇ.45, 3ನೇ ಪತ್ರಿಕೆಯಲ್ಲಿ ಶೇ.50ರಷ್ಟು ಅಂಕಗಳಿಸುವುದು ಕಡ್ಡಾಯ. ಈ ಎರಡೂ ಪತ್ರಿಕೆಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕನಿಷ್ಠ ಅರ್ಹತಾ ಅಂಕಗಳನ್ನು ಶೇ.5ರಷ್ಟುಇಳಿಸಲಾಗಿದೆ. ತೃತೀಯ ಲಿಂಗಿಗಳಿಗೆ ಪ್ರತಿ ಪ್ರವರ್ಗದಲ್ಲಿ ಶೇ.1 ಹುದ್ದೆಗಳ ಮೀಸಲಾತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಮೆರಿಟ್‌ ಪಟ್ಟಿ ಸಿದ್ಧಪಡಿಸುವಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Exam) ಪಡೆದ ಅಂಕಗಳಲ್ಲಿ ಶೇ.0.50, ಟಿಇಟಿ ಶೇ.0.20, ಪದವಿ ಅಂಕ ಶೇ.0.20 ಶಿಕ್ಷಕರ ಶಿಕ್ಷಣದ ಕೋರ್ಸ್‌ನಲ್ಲಿ ಪಡೆದ ಶೇ.0.10 ಅಂಕಗಳನ್ನು ಪರಿಗಣಿಸಲಾಗುತ್ತದೆ.

BANK OF INDIA RECRUITMENT 2022 ವಿವಿಧ 696 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ 

ಪ್ರಾಧ್ಯಾಪಕರ ನೇಮಕಾತಿ ಹಗರಣ: ಪಿಎಸ್‌ಐ ಹುದ್ದೆಗಳ ನೇಮಕಾತಿ ಹಗರಣದ ಬೆನ್ನಲ್ಲೇ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)) ಕಳೆದ ಮಾರ್ಚ್‌ ಲ್ಲಿ ನಡೆಸಿದ ರಾಜ್ಯ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಾತಿಯಲ್ಲೂ ಭಾರೀ ಅಕ್ರಮ ನಡೆದಿರುವ ವಾಸನೆ ಹರಡಿದ್ದು, ಇದೀಗ ಪ್ರಕರಣ ದಾಖಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಲೇ (KEA)) ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಭೂಗೋಳಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದಡಿ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ವಾಟ್ಸಾಪ್‌ನಲ್ಲಿ ಹಲವರಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್‌ ಮಾಡಿದ ಆರೋಪದಡಿ ಅತಿಥಿ ಉಪನ್ಯಾಸಕಿ, ಮೈಸೂರು ಮೂಲದ ಸೌಮ್ಯಾ(32) ಎಂಬ ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಶ್ನೆ ಪತ್ರಿಕೆ ನೀಡಿದವರು ಯಾರು? ಎಷ್ಟುಮಂದಿಗೆ ಪ್ರಶ್ನೆ ಪತ್ರಿಕೆ ಫಾವರ್ಡ್‌ ಮಾಡಲಾಗಿದೆ? ಈ ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್‌ ಪಿನ್‌ ಯಾರು ಎಂಬುದು ಸೇರಿದಂತೆ ಪಶ್ನೆ ಪತ್ರಿಕೆ ಸೋರಿಕೆಯ ಮೂಲ ಪತ್ತೆಗೆ ಪೊಲೀಸರು ಕೈ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!