ತಮಿಳುನಾಡು ಒಪ್ಪದಿದ್ದರೆ ಮೇಕೆದಾಟಿಗೆ ಸಮ್ಮತಿ ಇಲ್ಲ?

By Kannadaprabha News  |  First Published Jul 9, 2021, 8:59 AM IST
  • ತಮಿಳುನಾಡಿನ ಆಕ್ಷೇಪಕ್ಕೆ ಸೊಪ್ಪು ಹಾಕದೆ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಮುಂದು
  •  ಕೇಂದ್ರ ಸರ್ಕಾರವು ತಮಿಳುನಾಡಿಗೆ ಭರವಸೆ ನೀಡಿದೆ ಎಂಬ ಮಾಹಿತಿ 
  • ಒಪ್ಪಿಗೆ ಇಲ್ಲದೆ ವಿವಾದಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಯಾವುದೇ ಅನುಮತಿಯನ್ನು ನೀಡುವುದಿಲ್ಲ ಎಂದು ಭರವಸೆ

ನವದೆಹಲಿ (ಜು.09): ತಮಿಳುನಾಡಿನ ಆಕ್ಷೇಪಕ್ಕೆ ಸೊಪ್ಪು ಹಾಕದೆ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆ ಜಾರಿಗೆ ಮುಂದಾಗಿರುವ ಬೆನ್ನಲ್ಲೇ, ತಮಿಳುನಾಡಿನ ಗಮನಕ್ಕೆ ತಾರದೆ ಹಾಗೂ ಒಪ್ಪಿಗೆ ಇಲ್ಲದೆ ವಿವಾದಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಯಾವುದೇ ಅನುಮತಿಯನ್ನು ನೀಡುವುದಿಲ್ಲ ಎಂದು ಕೇಂದ್ರ ಸರ್ಕಾರವು ತಮಿಳುನಾಡಿಗೆ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಹೆಚ್ಚಿನ ವೇಗ ನೀಡಲು ಮುಂದಾದ ಬೆನ್ನಲ್ಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ರನ್ನು ತಮಿಳುನಾಡು ಜಲಸಂಪನ್ಮೂಲ ಸಚಿವ ಹಾಗೂ ಹಿರಿಯ ಡಿಎಂಕೆ ನಾಯಕ ಎಸ್‌. ದುರೈಮುರುಗನ್‌ ಕಳೆದ ಸೋಮವಾರ ಭೇಟಿ ಮಾಡಿದ್ದರು. ಈ ವೇಳೆ ಅವರು ಕರ್ನಾಟಕ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನೆಯ ವಿರುದ್ಧ ದೂರು ನೀಡಿದರು.

Tap to resize

Latest Videos

undefined

ಮೇಕೆದಾಟು; BSYಗೆ ಸ್ಟಾಲಿನ್ ಉತ್ತರ, ಮತ್ತೆ ತಮಿಳುನಾಡು ಕ್ಯಾತೆ!

ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ದುರೈಮುರುಗನ್‌, ‘ತಮಿಳುನಾಡಿನ ಒಪ್ಪಿಗೆ ಇಲ್ಲದೆ ಹಾಗೂ ಗಮನಕ್ಕೆ ತಾರದೆ ಮೇಕೆದಾಟು ಜಲಾಶಯ ನಿರ್ಮಾಣ ಆಗದು ಎಂದು ಸಚಿವ ಶೆಖಾವತ್‌ ನನಗೆ ಭರವಸೆ ನೀಡಿದರು’ ಎಂದು ಹೇಳಿದರು.

click me!