ಕೆಇಎ ಪರೀಕ್ಷೆ: ಹಿಜಾಬ್ ಧರಿಸಿ ಬರುವವರು 2 ಗಂಟೆ ಮುಂಚೆ ಬರಬೇಕು..!

By Girish Goudar  |  First Published Nov 15, 2023, 10:00 PM IST

ಪರೀಕ್ಷೆಗೆ ಹಾಜರಾಗಲು ನಿಗದಿಪಡಿಸಿರುವ ವಸ್ತ್ರಸಂಹಿತೆಯಡಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದಕ್ಕೆ ನಿಷೇಧ ವಿಧಿಸಿಲ್ಲ. ಆದರೆ, ಅಭ್ಯರ್ಥಿಗಳು ತಪಾಸಣೆಗೆ ಅನುವು ಮಾಡಿಕೊಡಲು ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ 


ಬೆಂಗಳೂರು(ನ.15):  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನ.18 ಮತ್ತು 19ರಂದು ನಡೆಸುವ ವಿವಿಧ ನಿಗಮ, ಮಂಡಳಿಗಳ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವವರು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮುಂಚಿತವಾಗಿ ಬರಬೇಕು ಎಂದು ಸೂಚಿಸಲಾಗಿದೆ.

ಪರೀಕ್ಷೆಗೆ ಹಾಜರಾಗಲು ನಿಗದಿಪಡಿಸಿರುವ ವಸ್ತ್ರಸಂಹಿತೆಯಡಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದಕ್ಕೆ ನಿಷೇಧ ವಿಧಿಸಿಲ್ಲ. ಆದರೆ, ಅಭ್ಯರ್ಥಿಗಳು ತಪಾಸಣೆಗೆ ಅನುವು ಮಾಡಿಕೊಡಲು ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಬರಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Latest Videos

undefined

ಕೆಇಎ ಪರೀಕ್ಷಾ ಅಕ್ರಮ: ಕಲಬುರಗಿಯಲ್ಲಿ ಸಿಐಡಿ ಉನ್ನತ ಮಟ್ಟದ ತಂಡದಿಂದ ತನಿಖೆ ಶುರು

ಯಾವುದೇ ರೀತಿಯ ಪರೀಕ್ಷಾ ಅಕ್ರಮಕ್ಕೆ ಅವಕಾಶವಾಗಬಾರದೆಂದು ಅಭ್ಯರ್ಥಿಗಳನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.

click me!