ನಿಮ್ಹಾನ್ಸ್‌ನಲ್ಲಿ 161 ನರ್ಸಿಂಗ್ ಆಫೀಸರ್ ಹುದ್ದೆಗೆ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

By Gowthami K  |  First Published Nov 12, 2023, 12:59 PM IST

ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 161 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.


ಬೆಂಗಳೂರು (ನ.12): ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ರೋಗಿಗಳ ಆರೈಕೆ ಮತ್ತು ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ಶೈಕ್ಷಣಿಕ ಅನ್ವೇಷಣೆಗಾಗಿ ಬಹುಶಿಸ್ತೀಯ ಸಂಸ್ಥೆಯಾಗಿದ್ದು, ಗಡಿನಾಡು ಪ್ರದೇಶಗಳಲ್ಲಿ ವೈದ್ಯಕೀಯ ಆರೈಕೆ, ಗುಣಮಟ್ಟದ ತರಬೇತಿ ಮತ್ತು ಅತ್ಯಾಧುನಿಕ ಸಂಶೋಧನೆಯ ಉನ್ನತ ಗುಣಮಟ್ಟವನ್ನು ಒದಗಿಸುತ್ತಿದೆ.

ಇಲ್ಲಿ ಜೀನೋಮಿಕ್ಸ್, ಕಂಪ್ಯೂಟೇಶನಲ್ ನ್ಯೂರೋಸೈನ್ಸ್, ಗಣಿತದ ಮಾಡೆಲಿಂಗ್, ನ್ಯೂರೋ ಇಮೇಜಿಂಗ್, ಆಣ್ವಿಕ ಜೀವಶಾಸ್ತ್ರ ಮತ್ತು ಸಾರ್ವಜನಿಕ ಆರೋಗ್ಯ ಸೇರಿದಂತೆ ಹಲವಾರು ಹೊಸ ವಿಭಾಗಗಳಲ್ಲಿನ ಪ್ರಗತಿಗಳನ್ನು ಮಾನವೀಯತೆಯ ಅಗತ್ಯವಿರುವವರಿಗೆ ಸಹಾಯ ಮಾಡಲು ಮತ್ತು ಜ್ಞಾನದ ಬೆಳವಣಿಗೆಯನ್ನು ಉತ್ತೇಜಿಸುತ್ತಿದ್ದು, ಪ್ರಸ್ತುತ ಇಲ್ಲಿ ಖಾಲಿ ಇರುವ 161 ನರ್ಸಿಂಗ್ ಆಫೀಸರ್ ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಲಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ವಿವರವಾಗಿ ಓದಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

Latest Videos

undefined

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ

ಹುದ್ದೆಯ ವಿವರ : ನರ್ಸಿಂಗ್ ಅಧಿಕಾರಿ 161 ಹುದ್ದೆಗಳು

ಅರ್ಜಿ ಶುಲ್ಕ
ಎಲ್ಲಾ ಇತರ ಅಭ್ಯರ್ಥಿಗಳಿಗೆ : ರೂ. 1,180
ಎಸ್‌ ಸಿ/ ಎಸ್‌ ಟಿ ಅಭ್ಯರ್ಥಿಗಳಿಗೆ : ರೂ. 885
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇಲ್ಲ

ಪ್ರಮುಖ ದಿನಾಂಕಗಳು
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 18-10-2023
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-11-2023

ವಯಸ್ಸಿನ ಮಿತಿ : ಗರಿಷ್ಠ ವಯಸ್ಸು 35 ವರ್ಷಗಳು

ನಿಗಮ ಮಂಡಳಿ ನೇಮಕಾತಿ 2ನೇ ಪರೀಕ್ಷೆಗೆ ವಸ್ತ್ರ ಸಂಹಿತೆ ಬಿಡುಗಡೆ, ಹಿಜಾಬ್‌ ಧರಿಸಬಹುದೇ?

ಶೈಕ್ಷಣಿಕ ವಿದ್ಯಾರ್ಹತೆ
1. ಅಭ್ಯರ್ಥಿಗಳು ಭಾರತೀಯ ನರ್ಸಿಂಗ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ (ಗೌರವ) ನರ್ಸಿಂಗ್ ಪದವಿಯನ್ನು ಪಡೆದಿರಬೇಕು. ಅಥವಾ

ಐಎನ್‌ಸಿಯಿಂದ ಮಾನ್ಯತೆ ಪಡೆದಿರುವ ನರ್ಸಿಂಗ್ ಸಂಸ್ಥೆ/ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ಪೋಸ್ಟ್ ಸರ್ಟಿಫಿಕೇಟ್)/ ಪೋಸ್ಟ್ ಬೇಸಿಕ್ ಪದವಿ ಪಡೆದಿರಬೇಕು.

2. ರಾಜ್ಯ/ಭಾರತೀಯ ನರ್ಸಿಂಗ್ ಕೌನ್ಸಿಲ್‌ನಲ್ಲಿ ದಾದಿಯರು ಮತ್ತು ಸೂಲಗಿತ್ತಿಯಾಗಿ ನೋಂದಾಯಿಸಲ್ಪಟ್ಟಿರಬೇಕು.

3. ಅನುಭವ: ಈ ಮೇಲೆ ತಿಳಿಸಿದ ಶೈಕ್ಷಣಿಕ ವಿದ್ಯರ್ಹತೆಯೊಂದಿಗೆ ಕನಿಷ್ಠ 50 ಹಾಸಿಗೆಗಳ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ
ಅರ್ಹ ಅಭ್ಯರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಂತರ ಸಂದರ್ಶನವನ್ನು ನಡೆಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಹಾನ್ಸ್‌ ವೆಬ್‌ಸೈಟ್‌ ನೋಡಬಹುದು.

click me!