
ಬೆಂಗಳೂರು(ಫೆ.25): ಕೇರಳ ಸರ್ಕಾರ ಉದ್ಯೋಗಕ್ಕಾಗಿ ಮಲಯಾಳಂ ಭಾಷೆಯನ್ನು ಅಲ್ಪಸಂಖ್ಯಾತ ಕನ್ನಡಿಗರಿಗೂ ಕಡ್ಡಾಯ ಮಾಡಿರುವುದರ ಕುರಿತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಆತಂಕ ವ್ಯಕ್ತಪಡಿಸಿದ್ದಾರೆ.
ತಿರುವನಂತಪುರದಲ್ಲಿ ಮಲೆಯಾಳ ಮಿಷನ್ ಆಯೋಜಿಸಿದ್ದ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಲೆಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂಬ ಹೇಳಿಕೆ ಕೊಟ್ಟಿದ್ದಾರೆ. ಇದು ಕಾಸರಗೋಡು ಹಾಗೂ ಸುತ್ತಮುತ್ತ ಇರುವ ಅಲ್ಪಸಂಖ್ಯಾತ ಕನ್ನಡಿಗರಿಗೆ ಆತಂಕ ಉಂಟು ಮಾಡಿದೆ. ಈವರೆಗೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಸರಗೋಡು ಪ್ರದೇಶದಲ್ಲಿ ಮಲೆಯಾಳಂ ಭಾಷೆಯಿಂದ ವಿನಾಯಿತಿ ಇದ್ದು ಅದನ್ನು ಮುಂದುವರೆಸಬೇಕಾಗಿ ಒತ್ತಾಯಿಸಿದ್ದಾರೆ.
ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು
ಒಂದು ವೇಳೆ ಕಾಸರಗೋಡಿನ ಕನ್ನಡಿಗರಿಗೂ ಮಲೆಯಾಳಂ ಅನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಉಲ್ಲಂಘನೆ ಆಗುತ್ತದೆ. ಆದ್ದರಿಂದ ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವಂತೆ ಯಾವುದೇ ರೀತಿಯಲ್ಲಿಯೂ ಮಲೆಯಾಳಂ ಅನ್ನು ಕಡ್ಡಾಯಗೊಳಿಸಬಾರದು. ಈ ಬಗ್ಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮೂಲಕ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಕನ್ನಡಿಗರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆ ಆದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಗಡಿನಾಡ ಕನ್ನಡಿಗರ ಉದ್ಯೋಗಕ್ಕೆ ಕೇರಳ ಸರ್ಕಾರ ಗುದ್ದು?
ಮಂಗಳೂರು: ಆಡಳಿತದಲ್ಲಿ ಮಲಯಾಳಂ(Malayalam) ಭಾಷೆ ಹೇರಿಕೆ, ಕನ್ನಡ ಮಾಧ್ಯಮ ಶಾಲೆಗಳಿಗೆ(Kannada Medium Schools) ಮಲಯಾಳಂ ಶಿಕ್ಷಕರ ನೇಮಕ ಬಳಿಕ ಈಗ ಸರ್ಕಾರಿ ಉದ್ಯೋಗ ಸಿಗಬೇಕಾದರೆ ಮಲಯಾಳಂ ಭಾಷೆ ಕಡ್ಡಾಯವಾಗಿ ಕಲಿತಿರಲೇ ಬೇಕು ಎಂಬ ಕಟ್ಟುನಿಟ್ಟು ನಿಯಮ ಜಾರಿಗೆ ಕೇರಳ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಮೂಲಕ ಗಡಿನಾಡು ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರ ಮೇಲೆ ಕೇರಳ ಸರ್ಕಾರ ಉದ್ಯೋಗ ಪ್ರಹಾರ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ.
ಕೇರಳ(Kerala) ರಾಜಧಾನಿ ತಿರುವನಂತಪುರಂನಲ್ಲಿ ಸೋಮವಾರ ನಡೆದ ಮಲಯಾಳಂ ಮಿಷನ್‌ನ ಮಾತೃ ಭಾಷಾ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಅವರು ಮಲಯಾಳಂ ಭಾಷೆ ಗೊತ್ತಿದ್ದರೆ ಮಾತ್ರ ಇನ್ಮುಂದೆ ಸರ್ಕಾರಿ ಉದ್ಯೋಗ(Government Job) ಎಂದಿದ್ದಾರೆ. ಇದು ಗಡಿನಾಡು ಕಾಸರಗೋಡಿನಲ್ಲಿ ಕನ್ನಡಿಗರ(Kannadigas), ಕನ್ನಡ ಸಂಘಟನೆಗಳನ್ನು ಬೆಚ್ಚಿಬೀಳಿಸಿದ್ದು, ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಅಧಿಸೂಚನೆ, ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೂ ಮೀಸಲಾತಿ!
ಈಗಿನ ನಿಯಮ ಏನು?:
ಇದುವರೆಗೆ ಕೇರಳದಲ್ಲಿ 10ನೇ ತರಗತಿವರೆಗೆ ಕನ್ನಡ(Kannada) ಕಲಿಯದೇ ಇರುವವರು ಪ್ರೊಬೆಷನರಿ ಅವಧಿ ಪೂರ್ತಿಗೊಳಿಸುವ ಮೊದಲು ಭಾಷಾ ಸಾಮರ್ಥ್ಯ ಪರೀಕ್ಷೆ ಉತ್ತೀರ್ಣರಾಗಬೇಕು. ಅಂದರೆ ಉದ್ಯೋಗಕ್ಕೆ ಸೇರಿ 10 ವರ್ಷದ ಒಳಗೆ ಭಾಷಾ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಸ್ ಆಗಬೇಕು ಎಂದಿದೆ. ಈಗ ಇದನ್ನೇ ತಿದ್ದುಪಡಿ ಮಾಡುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದುವೇ ಗಡಿನಾಡು ಕನ್ನಡಿಗರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಹಾಲಿ ನಿಯಮಕ್ಕೆ ತಿದ್ದುಪಡಿಸಿ ಮಾಡಿದರೆ, ಉದ್ಯೋಗಕ್ಕೆ ಸೇರ್ಪಡೆಯಾದ ಬಳಿಕ ಪ್ರೊಬೆಷನರಿ ಅವಧಿಯಲ್ಲೇ ಮಲಯಾಳಂ ಭಾಷೆಯನ್ನು ಕಡ್ಡಾಯ ಕಲಿಯಬೇಕಾಗುತ್ತದೆ. ಈಗಿರುವ 10 ವರ್ಷದ ಒಳಗೆ ಎಂಬ ನಿಯಮವನ್ನು ತೆಗೆದು ಹಾಕಲಾಗುತ್ತದೆ. ಇದರಿಂದಾಗಿ ಕನ್ನಡ ಭಾಷೆಯಲ್ಲೇ ಕಲಿಯುತ್ತಿರುವ, ಕಲಿತಿರುವವರಿಗೆ ಬಹಳ ತೊಂದರೆಯಾಗಲಿದೆ ಎನ್ನುತ್ತವೆ ಕನ್ನಡ ಸಂಘಟನೆಗಳು.
ಕಾಸರಗೋಡು(Kasaragod) ಜಿಲ್ಲೆಯಲ್ಲಿ ಸುಮಾರು 175 ಕನ್ನಡ ಮಾಧ್ಯಮ ಶಾಲೆಗಳಿದ್ದು, 44 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಆರು ಲಕ್ಷಕ್ಕೂ ಅಧಿಕ ಕನ್ನಡಿಗರು ಇದ್ದಾರೆ. ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಕನ್ನಡಿಗರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇದೆ.