Bidar Anganwadi Recruitment 2022: ಬೀದರ್‌ನಲ್ಲಿ 94 ಅಂಗನವಾಡಿ ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

By Suvarna News  |  First Published Jan 1, 2022, 7:47 PM IST

ಬೀದರ್ ಜಿಲ್ಲೆಯ  5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ  ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 


ಬೆಂಗಳೂರು(ಜ.1): ಬೀದರ್ ಜಿಲ್ಲೆಯ (Bidar District) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ (Women and Children Welfare Department) ಕಾರ್ಯ ನಿರ್ವಹಿಸುತ್ತಿರುವ 5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ  (Anganwadi Centers) ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  28 ಅಂಗನವಾಡಿ ಕಾರ್ಯಕರ್ತೆ (Anganwadi Workers) ಮತ್ತು 66 ಅಂಗನವಾಡಿ ಸಹಾಯಕಿ (Anganwadi Helpers) ಹುದ್ದೆಗಳು ಖಾಲಿ ಇದ್ದು, ಒಟ್ಟು 94 ಹುದ್ದೆಗಳು ಇದ್ದು, ಆಸಕ್ತರು ಜನವರಿ 31ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  10ನೇ ತರಗತಿ (ಅಂಗನವಾಡಿ ಕಾರ್ಯಕರ್ತೆ), ಕನಿಷ್ಟ 4ನೇ ತರಗತಿ (ಅಂಗನವಾಡಿ ಸಹಾಯಕಿ) ಉತ್ತೀರ್ಣರಾಗಿರಬೇಕು.  

Latest Videos

undefined

ಅರ್ಜಿ ಸಲ್ಲಿಸುವ ವಿಧಾನ: ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಅಥವಾ https://bidar.nic.in/ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನವರಾಗಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. 

BECIL RECRUITMENT 2022: ಪತ್ರಿಕೋದ್ಯಮ ಪದವಿಯಾದವರಿಗೆ ಸುವರ್ಣವಕಾಶ, ಇಂದೇ ಅರ್ಜಿ ಸಲ್ಲಿಸಿ

ಯಾದಗಿರಿಯಲ್ಲಿ ಖಾಲಿ ಇರುವ ಅಂಗನವಾಡಿ ಹುದ್ದೆಗಳ ಭರ್ತಿಗೆ ಜನವರಿ 3 ಕೊನೆಯ ದಿನ: ಯಾದಗಿರಿ ಜಿಲ್ಲೆಯ (Yadgir District) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ (Women and Children Welfare Department) ಕಾರ್ಯ ನಿರ್ವಹಿಸುತ್ತಿರುವ 4 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ  (Anganwadi Centers) ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 17 ಅಂಗನವಾಡಿ ಕಾರ್ಯಕರ್ತೆ (Anganwadi Workers) ಮತ್ತು ಅಂಗನವಾಡಿ ಸಹಾಯಕಿ (Anganwadi Helpers) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಜನವರಿ 3ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  10ನೇ ತರಗತಿ (ಅಂಗನವಾಡಿ ಕಾರ್ಯಕರ್ತೆ), 4ನೇ ತರಗತಿ (ಅಂಗನವಾಡಿ ಸಹಾಯಕಿ) ಉತ್ತೀರ್ಣರಾಗಿರಬೇಕು.  ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್​ಸೈಟ್ anganwadirecruit.kar.nic.in ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.  ಒಟ್ಟು 5  ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 12 ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇವೆ. 

ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷದೊಳಗಿನವರಾಗಿರಬೇಕು. ವಿಕಲಚೇತನ ಅಭ್ಯರ್ಥಿಗಳಿಗೆ ಮಾತ್ರ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. 

UG-PG STUDENTS MATERNITY LEAVE: ರಾಜ್ಯದ UG-PG ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಹೆರಿಗೆ ರಜೆ

click me!