BCP Recruitment 2022: ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ನೇಮಕಾತಿ

By Suvarna News  |  First Published Dec 20, 2021, 5:51 PM IST
  • ಬಿಇ, ಬಿ.ಟೆಕ್, ಬಿಸಿಎ, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಅವಕಾಶ
  • ಒಟ್ಟು 16 ಹುದ್ದೆಗಳ ಭರ್ತಿಗೆ ಕರೆ ನೀಡಿದ ಬೆಂಗಳೂರು ಸಿಟಿ ಪೊಲೀಸ್​ 
  • ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಲು ಜನವರಿ 21 ಕೊನೆ ದಿನ
     

ಬೆಂಗಳೂರು (ಡಿ.20): ಬೆಂಗಳೂರು ನಗರ ಪೊಲೀಸ್​ ಆಯುಕ್ತರ ಘಟಕ (Bengaluru City Police -BCP)ದಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು  ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಸೈಬರ್ ಸೆಕ್ಯುರಿಟಿ ಅನಾಲಿಸ್ಟ್(Cyber Security Analyst)​​ ಮತ್ತು ಡಿಜಿಟಲ್​ ಫಾರೆನ್ಸಿಕ್​ ಅನಾಲಿಸ್ಟ್ (Digital Forensic Analyst) ಒಟ್ಟು 16 ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಈ ಮೇಲ್​ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 ಹೊಸದಾಗಿ ನಿರ್ಮಾಣವಾಗಿರುವ 8 ಸಿಇಎನ್‌ ಬೆಂಗಳೂರು ಸಿಟಿ ಪೊಲೀಸ್ ಕಚೇರಿಯಲ್ಲಿ ಠಾಣೆಗಳನ್ನು ಬಲಪಡಿಸಲು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 20ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು  ಈ ಮೇಲ್  ಮೂಲಕ ಅರ್ಜಿ ಸಲ್ಲಿಸಲು. ಜನವರಿ 21, 2022 ಕೊನೆಯ ದಿನಾಂಕವಾಗಿದೆ. 

Latest Videos

undefined

ಅರ್ಜಿ ಸಲ್ಲಿಸಬೇಕಾದ ಈ ಮೇಲ್ ಐಡಿ - dcpadminbcp@ksp.gov.in ಅಥವಾ ಈ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಪೋಸ್ಟ್ ಕೂಡ ಮಾಡಬಹುದು. No.1, Infantry Road, Office of the Commissioner of Police, Bengaluru – 560001 ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ ತಾಣ https://bcp.gov.in/ ಗೆ ಭೇಟಿ ನೀಡಲು ಕೋರಲಾಗಿದೆ.

ಬೆಂಗಳೂರು ನಗರ ಪೊಲೀಸ್​ ಆಯುಕ್ತರ ಘಟಕದಲ್ಲಿ ಖಾಲಿ ಇರುವ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್​​ ಮತ್ತು ಡಿಜಿಟಲ್​ ಫಾರೆನ್ಸಿಕ್​ ಅನಾಲಿಸ್ಟ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​​ನಿಂದ ಬಿಇ, ಬಿ.ಟೆಕ್, ಬಿಸಿಎ, ಎಂಎಸ್ಸಿ, ಎಂಸಿಎ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಪ್ರಕಟಣೆಗೊಂಡ ಅಧಿಸೂಚನೆಯಲ್ಲಿ  ಉಲ್ಲೇಖಿಸಲಾಗಿದೆ.

ABHYUDAYA BANK RECRUITMENT 2022: CA, MBA, PGDBM ಆದವರಿಗೆ ಅಭ್ಯುದಯ ಬ್ಯಾಂಕ್ ನಲ್ಲಿ ಕೆಲಸ ಇದೆ

ವಯೋಮಿತಿ ಮತ್ತು ವೇತನ ವಿವರ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 25-35 ವರ್ಷದೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿರುತ್ತದೆ. ಹುದ್ದೆಗಳಿಗನುಸಾರವಾಗಿ ಆಯ್ಕೆಯಾದವರಿಗೆ ಮಾಸಿಕ ವೇತನವನ್ನು ನಿಗದಿ ಮಾಡಲಾಗಿದೆ. ಸೈಬರ್ ಸೆಕ್ಯುರಿಟಿ ಅನಾಲಿಸ್ಟ್- ಮಾಸಿಕ 75,000 ರೂ ಮತ್ತು ಡಿಜಿಟಲ್​ ಫಾರೆನ್ಸಿಕ್​ ಅನಾಲಿಸ್ಟ್- ಮಾಸಿಕ  50,000 ರೂ ವೇತನ ನಿಗದಿಪಡಿಸಲಾಗಿದೆ.

EPFO Recruitment 2022: ಇಪಿಎಫ್ಓ ನಲ್ಲಿ ಖಾಲಿ ಇರುವ 98 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಆಯ್ಕೆ ಪ್ರಕ್ರಿಯೆ ಮತ್ತಿ ಉದ್ಯೋಗದ ಸ್ಥಳ: ಬೆಂಗಳೂರು ನಗರ ಪೊಲೀಸ್​ ಆಯುಕ್ತರ ಘಟಕದಲ್ಲಿ ಖಾಲಿ ಇರುವ ಸೈಬರ್ ಸೆಕ್ಯುರಿಟಿ ಅನಾಲಿಸ್ಟ್​​ ಮತ್ತು ಡಿಜಿಟಲ್​ ಫಾರೆನ್ಸಿಕ್​ ಅನಾಲಿಸ್ಟ್​ ಹುದ್ದೆಗಳಿಗೆ  ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.  ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ. 

ರಾಜ್ಯ ಪೊಲೀಸ್ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ  ಅಹ್ವಾನ:
ಕರ್ನಾಟಕ ಪೊಲೀಸ್ ಇಲಾಖೆಯ ( Karnataka State Police  ) ಅಧೀನದಲ್ಲಿ ಬರುವಂತ ನ್ಯಾಯ ವಿಜ್ಞಾನ ಪ್ರಯೋಗಾಲಯ ಮತ್ತು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಾಲಿ ಇರುವಂತ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ( Scene of Crime Officer - SOCO ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

206 ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (ಸೀನ್ ಆಫ್ ಕ್ರೈಂ ಆಫೀಸರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು  ಜನವರಿ  15 ಕೊನೆಯ ದಿನವಾಗಿರುತ್ತದೆ.  ಹೆಚ್ಚಿನ ಮಾಹಿತಿಗೆ https://recruitment.ksp.gov.in/ ಗೆ ಭೇಟಿ ನೀಡಲು ಕೋರಲಾಗಿದೆ.

ವಿಜ್ಞಾನ ಪ್ರಯೋಗಾಲಯದಲ್ಲಿನ ಹುದ್ದೆಗೆ ಸೇರ ಬಯಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ವಿಧಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪದವಿ ಪಾಸ್‌ ಆಗಿರಬೇಕು ಅಥವಾ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪದವಿ ಪಾಸ್‌ ಹಾಗೂ ಜತೆಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ವಿಧಿ ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ 55 ರಷ್ಟು ಅಂಕಗಳೊಂದಿಗೆ 01 ವರ್ಷ ಡಿಪ್ಲೊಮ ಪಾಸ್ ಆಗಿರಬೇಕು. ಇಲ್ಲವೇ  ವಿಜ್ಞಾನ ವಿಷಯದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಪದವಿ ಪಾಸ್‌ ಹಾಗೂ ಜತೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಧಿ ವಿಜ್ಞಾನ ವಿಷಯದಲ್ಲಿ ಶೇಕಡ.55 ರಷ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

click me!