KMF Recruitment 2022: ವಿಜಯಪುರ & ಬಾಗಲಕೋಟೆ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಕೆಲಸ ಖಾಲಿ ಇದೆ

By Suvarna News  |  First Published Dec 20, 2021, 11:45 AM IST
  • 39 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ
  • ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು  ಸೂಚನೆ
  • 21,400 ರೂ ನಿಂದ 97,100 ರೂ ವರೆಗೆ ವೇತನ ನಿಗದಿ
     

ಬೆಂಗಳೂರು(ಡಿ.20): ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ (Karnataka Milk Federation)ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (Vijayapura & Bagalkot District Co-operative Milk Producers Societies Union Ltd)ದಲ್ಲಿನ ವಿವಿಧ ವಿಭಾಗದಲ್ಲಿ ಖಾಲಿ ಇರುವ ಒಟ್ಟು 39 ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 20,2022 ಕೊನೆಯ ದಿನಾಂಕವಾಗಿದ್ದು, ಒಕ್ಕೂಟದ ಅಧಿಕೃತ ವೆಬ್‌ಸೈಟ್ www.bimul.coop ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಖುದ್ದಾಗಿ/ ಅಂಚೆ/ ಕೋರಿಯರ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದರೆ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಜಗಿ ತಿಳಿಸಲಾಗಿದೆ.ಸಹಾಯಕ ವ್ಯವಸ್ಥಾಪಕರು, ಸಿಸ್ಟ್ಂ ಅಧಿಕಾರಿ, ತಾಂತ್ರಿಕ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ, ಮಾರುಕಟ್ಟೆ ಸಹಾಯಕರು,  ಸೇರಿದಂತೆ ಒಟ್ಟು 39 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ https://bamulnandini.coop/ ಗೆ ಭೇಟಿ ನೀಡಬಹುದು.

Tap to resize

Latest Videos

undefined

NHM Recruitment 2022: ಬರೋಬ್ಬರಿ 2980 ಲ್ಯಾಬ್ ಟೆಕ್ನಿಷಿಯನ್ ಹುದ್ದೆ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ 39 ಹುದ್ದೆಗಳ ವಿವರ ಇಂತಿದೆ
ಸಹಾಯಕ ವ್ಯವಸ್ಥಾಪಕರು - 5 ಹುದ್ದೆಗಳು
ಸಿಸ್ಟ್ಂ ಅಧಿಕಾರಿ - 1 ಹುದ್ದೆ
ತಾಂತ್ರಿಕ ಅಧಿಕಾರಿ - 2 ಹುದ್ದೆಗಳು
ಮಾರುಕಟ್ಟೆ ಅಧೀಕ್ಷಕರು - 1 ಹುದ್ದೆ
ವಿಸ್ತರಣಧಿಕಾರಿ - 8 ಹುದ್ದೆಗಳು
ಮಾರುಕಟ್ಟೆ ಸಹಾಯಕರು - 2 ಹುದ್ದೆಗಳು
ಕೆಮಿಸ್ಟ್ ದರ್ಜೆ - 2 ಹುದ್ದೆಗಳು
ಆಡಳಿತ ಸಹಾಯಕ - 1 ಹುದ್ದೆ
ಲೆಕ್ಕ ಸಹಾಯಕರು - 4 ಹುದ್ದೆಗಳು
ಕಿರಿಯ ಸಿಸ್ಟ್ಂ ಆಪರೇಟರ್ - 2 ಹುದ್ದೆಗಳು
ಕಿರಿಯ ತಾಂತ್ರಿಕ - 2 ಹುದ್ದೆಗಳು
ಹಾಲು ರವಾನೆಗಾರರು - 4 ಹುದ್ದೆಗಳು

KUIDFC Recruitment 2022: ರಾಜ್ಯದ ಕೆಯುಐಡಿಎಫ್‌ಸಿಯಲ್ಲಿ ಖಾಲಿ ಇರುವ 30 ವಿವಿಧ ಹುದ್ದೆ

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಲ್ಲಿಸುವ ಆಸಕ್ತರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಯಾವುದೇ ಪದವಿ ಮುಗಿಸಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ, ಎಸ್​ಎಸ್​ಎಲ್​​ಸಿ, ಐಟಿಐ ವಿದ್ಯಾರ್ಹತೆಯನ್ನು ಹೊಂದಿರಬೇಕು. 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-35 ವರ್ಷದೊಳಗಿರಬೇಕು. 2ಎ, 2ಬಿ, 3ಎ ಮತ್ತು 3ಬಿ ಯ ಗರಿಷ್ಟ 38 ವರ್ಷ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1ರ ಗರಿಷ್ಟ 40 ವರ್ಷ ವಯೋಮಿತಿಯೊಳಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿರುತ್ತದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ: ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 1000/-ರೂ ಮತ್ತು ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡ/ಪ್ರವರ್ಗ-1ರ ಅಭ್ಯರ್ಥಿಗಳು 500/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮೀಸಲಾದ ವೇತನ ವಿವರ ಇಂತಿದೆ
ಸಹಾಯಕ ವ್ಯವಸ್ಥಾಪಕರು - ಮಾಸಿಕ ರೂ. 52,650- 97,100
ಸಿಸ್ಟ್ಂ ಅಧಿಕಾರಿ -ಮಾಸಿಕ ರೂ. 43,100- 83,900
ತಾಂತ್ರಿಕ ಅಧಿಕಾರಿ - ಮಾಸಿಕ ರೂ.  43,100 - 83,900
ಮಾರುಕಟ್ಟೆ ಅಧೀಕ್ಷಕರು - ಮಾಸಿಕ ರೂ.  40,900- 78,200
ವಿಸ್ತರಣಧಿಕಾರಿ - ಮಾಸಿಕ ರೂ.  33,450- 62,600
ಮಾರುಕಟ್ಟೆ ಸಹಾಯಕರು - ಮಾಸಿಕ ರೂ. 27,650- 52,650
ಕೆಮಿಸ್ಟ್ ದರ್ಜೆ - ಮಾಸಿಕ ರೂ. 27,650- 52,650
ಆಡಳಿತ ಸಹಾಯಕ -ಮಾಸಿಕ ರೂ. 27,650- 52,650
ಲೆಕ್ಕ ಸಹಾಯಕರು -ಮಾಸಿಕ ರೂ. 27,650- 52,650
ಕಿರಿಯ ಸಿಸ್ಟ್ಂ ಆಪರೇಟರ್ - ಮಾಸಿಕ ರೂ. 27,650- 52,650
ಕಿರಿಯ ತಾಂತ್ರಿಕ - ಮಾಸಿಕ ರೂ. 21,400- 42,000
ಹಾಲು ರವಾನೆಗಾರರು - ಮಾಸಿಕ ರೂ. 21,400- 42,000

click me!