ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಲಪಡಿಸಲು 6 ಸಾವಿರ ಪೊಲೀಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಗೃಹ ಇಲಾಖೆ ಮುಂದಾಗಿದೆ.
ಚಿತ್ರದುರ್ಗ, (ಡಿ.11): ಶೀಘ್ರದಲ್ಲಿ 6 ಸಾವಿರ ಪೊಲೀಸರ ನೇಮಕಾತಿ ಮಾಡಿಕೊಳ್ಳಲಾಗುವುದು. ಇದರಲ್ಲಿ 2 ಸಾವಿರ ಪಿಎಸ್ಐ ಹುದ್ದೆಗಳನ್ನು ಎರಡು ವರ್ಷದೊಳಗೆ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ಹಾವೇರಿ ಮಾರ್ಗ ನಗರ ಹೊರವಲಯ ಸೀಬಾರ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಂತ-ಹಂತವಾಗಿ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಕರ್ನಾಟಕ ಹಾಲು ಒಕ್ಕೂಟದಲ್ಲಿ ನೇಮಕಾತಿ: ಅರ್ಜಿ ಹಾಕಿ
Fsil ಲ್ಯಾಬ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಬಲಗೊಳಿಸಲಾಗುವುದು. ಮಹಿಳಾ ಸುರಕ್ಷತೆಗೆ ಒತ್ತು ನೀಡಲಾಗುವುದು. ರಾಜ್ಯ ದ ಪೊಲೀಸ್ ತರಬೇತಿ ಶಾಲೆಗಳಲ್ಲಿ Short term women's safety tiring ಕೊಡಲಾಗುವುದು ಎಂದು ಹೇಳಿದರು.
ಮೀಸಲು ಪೊಲೀಸರು ಸದ್ಬಳಕೆಗೆ ಚಿಂತನೆ ನಡೆದಿದೆ. ಸೈಬರ್ ಅಪರಾಧ ಪತ್ತೆ ಸಾಪ್ಟ್ ವೇರ್ ಇಂಜಿನಿಯರ್ ಗಳನ್ನು ಠಾಣೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು. ಕಾರಾಗೃಹಗಳ ಸುಧಾರಣೆ ಗೆ ಮಂಡಳಿ ರಚಿಸಿ, ವರದಿ ಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಪೊಲೀಸ್ ಇಲಾಖೆಯನ್ನು ಇನ್ನಷ್ಟು ಬಲಪಡಿಸಲು 6 ಸಾವಿರ ಪೊಲೀಸ್ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಗೃಹ ಇಲಾಖೆ ಮುಂದಾಗಿದೆ.
ಪ್ರಮುಖವಾಗಿ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಈ ಮೂಲಕ ಸೈಬರ್ ಕ್ರೈಂಗಳ ಪತ್ತೆ ಸಹಾಯಕವಾಗಲಿದೆ.