ವಿಶ್ ಮಾಡಿ ಎಡವಟ್ಟಿಗೆ ಸಿಲುಕಿದ ಯುವರಾಜ್ ಸಿಂಗ್..!

Published : Oct 16, 2017, 01:55 PM ISTUpdated : Apr 11, 2018, 01:02 PM IST
ವಿಶ್ ಮಾಡಿ ಎಡವಟ್ಟಿಗೆ ಸಿಲುಕಿದ ಯುವರಾಜ್ ಸಿಂಗ್..!

ಸಾರಾಂಶ

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೆರಡೇ ದಿನ ಬಾಕಿ. ಎಲ್ಲರೂ ವರ್ಷದ ಹಬ್ಬಕ್ಕೆ ತಮ್ಮದೇ ರೀತಿಯಲ್ಲಿ ಸಜ್ಜಾಗ್ತಿದ್ದಾರೆ. ಸಿಹಿ ತಿನಿಸುಗಳು ರೆಡಿಯಾಗ್ತಿವೆ. ಆದ್ರೆ ಯಾಕೋ ಏನೋ ಈ ವರ್ಷದ ದೀಪಾವಳಿಯಲ್ಲಿ ಯುವರಾಜ್​​ ಸಿಂಗ್ ಕಹಿ ತಿಂದುಬಿಟ್ಟಿದ್ದಾರೆ. ತಮ್ಮ ಅಭಿಮಾನಿಗಳಿಗೆ ವಿಷ್​​​ ಮಾಡಲು ಹೋಗಿ ಈಗ ಪೇಚಿಗೆ ಸಿಲುಕಿಬಿಟ್ಟಿದ್ದಾರೆ.

ಇನ್ನೆರಡೇ ಎರಡು ದಿನ ಕಳೆದುಬಿಟ್ಟರೆ ಬೆಳಕಿನ ಹಬ್ಬ ದೀಪಾವಳಿ ಆರಂಭವಾಗುತ್ತೆ. ಎಲ್ಲರ ಮನೆಯಲ್ಲಿ ದೀಪಾಲಂಕಾರಗಳು ಶುರುವಾಗಿದೆ. ಹೆಣ್ಣುಮಕ್ಕಳು ಸಿಹಿ ತಿನಿಸುಗಳನ್ನ ತಯಾರಿಸುವುದರಲ್ಲಿ ಬ್ಯೂಸಿಯಾದರೆ, ಗಂಡಸರು ಶಾಪಿಂಗ್​ ಮಾಲ್​'ಗಳಲ್ಲಿ ಬ್ಯೂಸಿಯಾಗ್ಬಿಟ್ಟಿದ್ದಾರೆ. ಪಟಾಕಿ ಬಾಕ್ಸ್​​'ಗಳು ಮನೆಗೆ ಬಂದಾಗಿದೆ. ಮಕ್ಕಳ ಕಣ್ಣು ಆ ಪಟಾಕಿ ಬಾಕ್ಸ್​​​ಗಳ ಮೇಲೇ ಇವೆ. ಯಾವಾಗ ಬಾಕ್ಸ್​​​ ಓಪನ್​ ಆಗುತ್ತೋ ಅನ್ನೋ ಕಾತುರದಲ್ಲಿದ್ದಾರೆ. ಒಟ್ಟಿನಲ್ಲಿ ವರ್ಷದ ಹಬ್ಬಕ್ಕೆ ಇಡೀ  ಭಾರತವೇ ಸಿದ್ಧವಾಗಿದೆ.

ಅಭಿಮಾನಿಗಳಿಗೆ ವಿಶ್ ​ಮಾಡಿದ ಕ್ರಿಕೆಟರ್ಸ್​​​​

ಬೆಳಕಿನ ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಂತೆಯೇ ಕೆಲವರು ತಮ್ಮತಮ್ಮವರಿಗೆ ವಿಶ್​ ಮಾಡಿಬಿಟ್ಟಿದ್ದಾರೆ. ಹಬ್ಬದಲ್ಲಿ ಮನೆಯಲ್ಲಿರದವರು, ದೂರದ ದೇಶದಲ್ಲಿರುವವರೆಲ್ಲಾ ತಮ್ಮ ತಮ್ಮವರಿಗೆ ಹಬ್ಬದ ಸಂದೇಶವನ್ನ ರವಾನಿಸಿದ್ದಾರೆ. ಅಂತೆಯೇ ಟೀಂ ಇಂಡಿಯಾದ ನಾಯಕ ವಿರಾಟ್​​​ ಕೊಹ್ಲಿ ಸೇರಿದಂತೆ ತಂಡದ ಸದಸ್ಯರೆಲ್ಲರೂ ತಮ್ಮ ಅಭಿಮಾನಿಗಳಿಗೆ ವಿಷ್​​ ಮಾಡಿದ್ದಾರೆ.

ವಿಶ್​​​ ಮಾಡಿ ಎಡವಟ್ಟಿಗೆ ಸಿಲುಕಿದ ಯುವಿ..!

ಅಲ್ಲಾರಿ ಯಾರಾದರೂ ದೀಪಾವಳಿಗೆ ವಿಷ್​​​ ಮಾಡಿದರೆ ತೊಂದರೆಗೆ ಸಿಕ್ಕಿಹಾಕಿಕೊಳ್ತಾರಾ ಅಂತ ನೀವು ಕೇಳಬಹುದು. ಅದು ನಂಬಲು ಸಾಧ್ಯವಿಲ್ಲ ಕೂಡ. ಆದ್ರೆ ಟೀಂ ಇಂಡಿಯಾದಿಂದ ಡ್ರಾಪ್ ಆಗಿರುವ ಯುವರಾಜ್​ ಸಿಂಗ್​ ಅದನ್ನ ಸಾಧ್ಯಗೊಳಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಷ್ ಮಾಡಲು ಹೋಗಿ ಈಗ ಇಂಗು ತಿಂದ ಮಂಗನಂತಾಗಿದ್ದಾರೆ. ಅಷ್ಟಕ್ಕೂ ಯುವಿ ವಿಷ್​​​ ಮಾಡಿದ್ದರಲ್ಲಿ ತಪ್ಪೇನಿತ್ತು ಎನ್ನುವುದರಲ್ಲಿ ನೀವೇ ನೋಡಿ.

ಅಲ್ಲಾರಿ ಪಟಾಕಿ ಹೊಡಿಬಾರ್ದು ಅನ್ನೋದ್ರಲ್ಲಿ ತಪ್ಪೇನಿದೆ. ಪರಿಸರ ಹಾಳಾಗುತ್ತದೆ ಎನ್ನುವ ಉದ್ದೇಶದಿಂದ ಯುವಿ ತಮ್ಮ ಅಭಿಮಾನಿಗಳಿಗೆ ಪಟಾಕಿಗಳನ್ನು ತೊರೆಯಿರಿ ಎಂದು ಕೇಳಿಕೊಂಡಿದ್ದಾರೆ ಅದರಲ್ಲೇನಿದೆ ತಪ್ಪು  ಅಂತ ನೀವು ಕೇಳಬಹುದು. ಆದರೆ ಯುವಿ ಕಥೆ ಹೇಳುವುದು ವೇದಾಂತ ತಿನ್ನುವುದು ಬದನೆಕಾಯಿ ಎನ್ನುವುದು ಹಾಗಿದೆ. ಪಟಾಕಿಯನ್ನು ತ್ಯಜಿಸಿ ಎಂದ ಯುವಿಯೇ ತಮ್ಮ ಮದುವೆಯ ದಿನ ಮೂಟೆಗಟ್ಟಲೆ ಪಟಾಕಿಗಳನ್ನ ಸಿಡಿಸಿದ್ರು. ಇದೇ ಕಾರಣಕ್ಕೆ ಈಗ ಅಭಿಮಾನಿಗಳು ಈಗ ರೊಚ್ಚಿಗೆದ್ದಿರುವುದು.

ನೋಡಿ ಇದು ಯುವಿಯ ಆರತಕ್ಷತೆಯ ದಿನದ ಫೋಟೋ. ಇಂದು ಯಾವ ಯುವಿ ಪಟಾಕಿ ಬೇಡ ಅಂತಿದ್ದಾರೋ ಅಂದು ಅವರ ಮನೆಯಲ್ಲಿ ಮೂಟೆ ಮೂಟೆ ಲೆಕ್ಕದಲ್ಲಿ ಪಟಾಕಿಗಳನ್ನ ಸಿಡಿಸಿದರು. ಇದೇ ಫೋಟೋವನ್ನ ಇಟ್ಕೊಂಡು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಗಳಲ್ಲಿ ಇನ್ನಿಲ್ಲದಂತೆ ಟ್ರೋಲ್​ ಮಾಡಿದ್ರು.

ಈ ಟ್ರೋಲ್​ಗಳನ್ನೆಲ್ಲಾ ನೋಡಿದ ಮೇಲೆ, ಯಾಕಾದ್ರೂ ನಾನು ವಿಷ್​​​ ಮಾಡಿದನೋ ಅಂತ ಯುವಿ ಕೈಕೈ ಹಿಸಿಕಿಕೊಳ್ತಿದ್ದಾರೆ. ಈ ಸ್ಟೋರಿ ನೋಡ್ತಿದ್ರೆ ಸಚಿನ್​ ಮತ್ತು ಕೊಹ್ಲಿಯ ನೆನಪಾಗುತ್ತೆ ಅಂದು ಅವರು ತಂಪು ಪಾನಿಯವನ್ನ ಸೇವನೆ ಮಾಡೋದಿಲ್ಲ ಅಂತ ಅದರ ಜಾಹೀರಾತು ಒಪ್ಪಂದವನ್ನೇ ತಿರಸ್ಕರಿಸಿದರು. ಕನಿಷ್ಟ ಪಕ್ಷ ಈಗಲಾದ್ರೂ ಇಂತವರಿಂದ ಯುವಿ ಬುದ್ಧಿ ಕಲಿಯುವ ಸಮಯ ಬಂದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?