
ನವದೆಹಲಿ(ಅ. 16): ಕಿರಿಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತದ ಅಂಡರ್-19 ತಂಡವನ್ನು ಪ್ರಕಟಿಸಲಾಗಿದೆ. ಹರಿಯಾಣದ ಆಲ್'ರೌಂಡರ್ ಹಿಮಾಂಶು ರಾಣಾ ನಾಯಕತ್ವದ 14 ಸದಸ್ಯರ ತಂಡದ ಘೋಷಣೆಯಾಗಿದೆ. ಈ ತಂಡದಲ್ಲಿ ಬಹುತೇಕ ಹೊಸಮುಖಗಳೇ ಚಾನ್ಸ್ ಪಡೆದಿದದಾರೆ. ಅಭಿಷೇಕ್ ಶರ್ಮಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದ ಒಬ್ಬನೂ ಜೂನಿಯರ್ ಆಟಗಾರ ಸ್ಥಾನ ಗಳಿಸಿಲ್ಲ.
ತಂಡ:
ಹಿಮಾಂಶು ರಾಣಾ(ನಾಯಕ), ಅಭಿಷೇಕ್ ಶರ್ಮಾ(ಉಪ-ನಾಯಕ), ಅಥರ್ವ ಟಾಯ್ಡೆ, ಮಂಜೋತ್ ಕಾಲ್ರಾ, ಸಲ್ಮಾನ್ ಖಾನ್, ಅನುಜ್ ರಾವತ್, ಹಾರ್ವಿಕ್ ದೇಸಾಯಿ, ರಿಯಾನ್ ಪರಾಗ್, ಅನುಕುಲ್ ರಾಯ್, ಶಿವ ಸಿಂಗ್, ತನುಶ್ ಕೋಟಿಯಾನ್, ದರ್ಶನ್ ನಾಲ್ಕಂಡೆ, ವಿವೇಕಾನಂದ್ ತಿವಾರಿ, ಆದಿತ್ಯ ತಾಕರೆ, ಮಂದೀಪ್ ಸಿಂಗ್.
ಪೃಥ್ವಿ ಶಾಗೆ ಯಾಕಿಲ್ಲ?:
ಭಾರತದ ಹಾಟ್ ಕ್ರಿಕೆಟ್ ಸೆನ್ಸೇಶನ್ ಎನಿರುವ ಪೃಥ್ವಿ ಶಾ ಅವರೂ ತಂಡದಲ್ಲಿಲ್ಲದಿರುವುದು ಗಮನಾರ್ಹ. 17 ವರ್ಷದ ಪೃಥ್ವಿ ಶಾ ಇತ್ತೀಚೆಗಷ್ಟೇ ಸಚಿನ್ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದರು. ಚೊಚ್ಚಲ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲೇ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಬರೆದಿದ್ದರು. ಇಂಡಿಯಾ ರೆಡ್ ಮತ್ತು ಇಂಡಿಯಾ ಬ್ಲೂ ಪಂದ್ಯದಲ್ಲಿ ಅವರು 154 ರನ್ ಗಳಿಸಿದ್ದರು. ಅಷ್ಟೇ ಅಲ್ಲ, ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲೂ ಅವರು ಶತಕ ಭಾರಿಸಿದ್ದರು.
ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಎಂದೇ ಪರಿಗಣಿತವಾಗಿರುವ ಪೃಥ್ವಿ ಶಾ ಅವರು ಜೂನಿಯರ್ ಕ್ರಿಕೆಟ್'ನಲ್ಲಿ ಆಡುವುದಕ್ಕಿಂತ ರಣಜಿ ಟ್ರೋಫಿಯಲ್ಲಿ ಆಡುವುದು ಒಳ್ಳೆಯದು ಎಂಬ ದೃಷ್ಟಿಯಿಂದ ಅಂಡರ್-19 ತಂಡದಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ.
ಸತತ 4ನೇ ಪ್ರಶಸ್ತಿಗೆ ಕಣ್ಣು:
ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಂಡರ್-19 ತಂಡವು ಏಷ್ಯಾಕಪ್'ನಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಆಗಿದೆ. 2012ರಲ್ಲಿ ಶುರುವಾದ ಜೂನಿಯರ್ ಏಷ್ಯಾಕಪ್'ನಲ್ಲಿ ಭಾರತ ಪ್ರತೀ ಬಾರಿಯೂ ಗೆದ್ದಿದೆ. ಈ ಬಾರಿ ಗೆದ್ದರೆ ಅದು ಸತತ ನಾಲ್ಕನೆಯದ್ದಾಗಲಿದೆ.
ನಾಲ್ಕನೇ ಆವೃತ್ತಿಯ ಏಷ್ಯಾಕಪ್ ಮಲೇಷ್ಯಾದಲ್ಲಿ ನವೆಂಬರ್ 9-20ರವರೆಗೆ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.