
ಅಡಿಲೇಡ್(ಅ. 16): ಆಸ್ಟ್ರೇಲಿಯಾದ ಬ್ಯಾಟ್ಸ್'ಮ್ಯಾನ್'ವೊಬ್ಬರು ಹೊಸ ದಾಖಲೆ ಬರದಿದ್ದಾರೆ. 35 ಓವರ್'ಗಳ ಪಂದ್ಯದಲ್ಲಿ ಜೋಷ್ ಡುನ್ಸ್'ಟಾನ್ ಅವರು 307 ರನ್ ಭಾರಿಸಿ ಅಬ್ಬರಿಸಿದ್ದಾರೆ. ಅವರ ಇನ್ನಿಂಗ್ಸಲ್ಲಿ 40 ಸಿಕ್ಸರ್ ಸಿಡಿಸಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾದ ಬಿ ಗ್ರೇಡ್ ಟೂರ್ನಿಯ ವೆಸ್ಟ್ ಆಗಸ್ಟಾ ಮತ್ತು ಸೆಂಟ್ರಲ್ ಸ್ಟರ್ಲಿಂಗ್ ನಡುವಿನ ಪಂದ್ಯದಲ್ಲಿ ಜೋಶ್ ಡುನ್ಸ್'ಟನ್ ಅವರ ದಾಖಲೆ ಮೂಡಿ ಬಂದಿದೆ.
ಡುನ್ಸ್'ಟನ್ ಅವರ ಆಟದ ಸಹಾಯದಿಂದ ವೆಸ್ಟ್ ಆಗಸ್ಟಾ ತಂಡ 35 ಓವರ್'ಗಳಲ್ಲಿ 354 ರನ್ ಪೇರಿಸಿತು. ಇದರಲ್ಲಿ ಡುನ್ಸ್'ಟನ್ ಅವರೇ ಬರೋಬ್ಬರಿ 307 ರನ್ ಗಳಿಸಿದ್ದು ವಿಶೇಷ. ಬೆನ್ ರುಸೆಲ್ ಮತ್ತು ಡುನ್ಸ್'ಟನ್ ನಡುವೆ 7ನೇ ವಿಕೆಟ್'ಗೆ ಬಂದ 203 ರನ್ ಜೊತೆಯಾಟದಲ್ಲಿ ರುಸೆಲ್ ಕೊಡುಗೆ ಕೇವಲ 5 ರನ್ ಮಾತ್ರ. ಗಮನಾರ್ಹವೆಂದರೆ, ತಂಡದ ಸ್ಕೋರಲ್ಲಿ ಡನ್ಸ್'ಟನ್ ಕೊಡುಗೆಯೇ ಶೇ. 86.72.
ವೆಸ್ಟ್ ಇಂಡೀಸ್'ನ ಸ್ಫೋಟಕ ಬ್ಯಾಟ್ಸ್'ಮ್ಯಾನ್ ವಿವಿಯನ್ ರಿಚರ್ಡ್ಸ್ ಸಾಮಾನ್ಯವಾಗಿ ಇಂಥ ಆಟಕ್ಕೆ ಫೇಮಸ್. 1984ರಲ್ಲಿ ಓಲ್ಡ್ ಟ್ರಫೋರ್ಡ್'ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು 189 ರನ್ ಭಾರಿಸಿದ್ದರು. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗಳಿಸಿದ್ದು 272 ರನ್. ತಂಡದ ಸ್ಕೋರಲ್ಲಿ ರಿಚರ್ಡ್ಸ್ ಪಾಲು 69.48%. ಇದು ಪೂರ್ಣ ಇನ್ನಿಂಗ್ಸ್'ವೊಂದರಲ್ಲಿ ಆಟಗಾರನ ಅತೀಹೆಚ್ಚು ಶೇಕಡಾವಾರು ರನ್ ಗಳಿಕೆ ಎಂಬ ದಾಖಲೆಯಾಗಿತ್ತು. ಇದೀಗ ಆಸ್ಟ್ರೇಲಿಯಾದ ಜೋಶ್ ಡುನ್ಸ್'ಟನ್ ಅವರು ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಮುರಿದುಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.