ಬ್ರಿಜ್‌ಭೂಷಣ್ ಆಪ್ತ ಸಂಜಯ್‌ಗೆ ಅಧ್ಯಕ್ಷ ಹುದ್ದೆ ತಪ್ಪಿಸಲು ಕುಸ್ತಿಪಟುಗಳ ಕಸರತ್ತು..!

By Kannadaprabha News  |  First Published Aug 11, 2023, 11:17 AM IST

ಆಗಸ್ಟ್ 12ರಂದು ಭಾರತೀಯ ಕುಸ್ತಿ ಫೆಡರೇಶನ್‌ ಚುನಾವಣೆ
ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರ ಆಪ್ತ ಸಂಜಯ್‌ ಸಿಂಗ್‌ ಅಧ್ಯಕ್ಷ ಹುದ್ದೆ 
ಸಂಜಯ್‌ ಆಯ್ಕೆಯಾದರೆ ಬ್ರಿಜ್‌ಭೂಷಣ್‌ಗೇ ಅಧಿಕಾರ ಸಿಕ್ಕಂತೆ ಎನ್ನುವ ಆತಂಕ


ನವದೆಹಲಿ(ಆ.11): ಭಾರತೀಯ ಕುಸ್ತಿ ಫೆಡರೇಶನ್‌ ಚುನಾವಣೆ ಶನಿವಾರ(ಆ.12) ನಡೆಯಲಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ರ ಆಪ್ತ ಸಂಜಯ್‌ ಸಿಂಗ್‌, ನೂತನ ಅಧ್ಯಕ್ಷರಾಗಿ ಆಯ್ಕೆಯಾಗದಂತೆ ತಡೆಯಲು ವಿನೇಶ್‌ ಫೋಗಟ್‌, ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್‌ ಕಸರತ್ತು ನಡೆಸುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. 

ಅಧ್ಯಕ್ಷ ಸ್ಥಾನಕ್ಕಾಗಿ ಸಂಜಯ್‌ ಸಿಂಗ್‌ ಹಾಗೂ ಬ್ರಿಜ್‌ ವಿರುದ್ಧ ಪ್ರಕರಣದಲ್ಲಿ ಸಾಕ್ಷಿಯಾಗಿರುವ, ಮಾಜಿ ಕುಸ್ತಿಪಟು ಅನಿತಾ ಶೆರೋನ್‌ ನಡುವೆ ಸ್ಪರ್ಧೆ ಇದೆ. ಗುರುವಾರ ಬೆಳಗ್ಗೆ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ರನ್ನು ಭೇಟಿ ಮಾಡಿ ಚರ್ಚಿಸಿದ ವಿನೇಶ್‌ ಹಾಗೂ ತಂಡ, ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭೇಟಿಗೆ ಮನವಿ ಸಲ್ಲಿಸಿತ್ತು ಎಂದು ತಿಳಿದುಬಂದಿದೆ. ಠಾಕೂರ್‌ ಜೊತೆಗಿನ ಮಾತುಕತೆ ವೇಳೆ ಕುಸ್ತಿಪಟುಗಳು, ‘ಚುನಾವಣೆಯಲ್ಲಿ ಬ್ರಿಜ್‌ ಕುಟುಂಬಸ್ಥರು ಸ್ಪರ್ಧಿಸಬಾರದು ಎಂದು ಕೇಳಿಕೊಂಡಿದ್ದೆವು. ಸಂಜಯ್, ಬ್ರಿಜ್‌ರ ಆಪ್ತ. ಅವರೊಂದಿಗೆ ಹಣಕಾಸಿನ ವ್ಯವಹಾರದಲ್ಲೂ ತೊಡಗಿದ್ದಾರೆ. ಸಂಜಯ್‌ ಆಯ್ಕೆಯಾದರೆ ಬ್ರಿಜ್‌ಭೂಷಣ್‌ಗೇ ಅಧಿಕಾರ ಸಿಕ್ಕಂತೆ’ ಎಂದು ಅಲವತ್ತುಕೊಂಡರು ಎನ್ನಲಾಗಿದೆ.

Latest Videos

undefined

Asian Champions trophy 2023: ಇಂದು ಭಾರತ vs ಜಪಾನ್‌ ಸೆಮೀಸ್‌ ಕದನ

ಏಷ್ಯಾಡ್‌ಗೂ ಮುನ್ನ ಡೋಪ್‌ ಟೆಸ್ಟ್‌ ಹೆಚ್ಚಿಸಿದ ನಾಡಾ!

ನವದೆಹಲಿ: ಏಷ್ಯನ್‌ ಗೇಮ್ಸ್‌ಗೂ ಮುನ್ನ ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆ ನಿಗ್ರಹ ಘಟಕ(ನಾಡಾ) ಭಾರತೀಯ ಕ್ರೀಡಾಪಟುಗಳ ಡೋಪ್‌ ಟೆಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಜೂ.1ರಿಂದ ಜು.31ರ ವರೆಗೂ ಒಟ್ಟು 914 ಮಾದರಿಗಳನ್ನು ಸಂಗ್ರಹಿಸಿರುವುದಾಗಿ ನಾಡಾ ಗುರುವಾರ ಮಾಹಿತಿ ನೀಡಿದೆ. ಅಥ್ಲೀಟ್‌ಗಳಿಂದ ಅತಿಹೆಚ್ಚು ಅಂದರೆ 199 ಮಾದರಿಗಳನ್ನು ಸಂಗ್ರಹಿಸಿದ್ದು, ಬಾಕ್ಸಿಂಗ್‌(71), ಈಜು(65), ವೇಟ್‌ಲಿಫ್ಟಿಂಗ್‌(56), ಸೈಕ್ಲಿಂಗ್‌(55), ಕಬಡ್ಡಿ(52), ಕುಸ್ತಿ(46), ಶೂಟಿಂಗ್‌(43) ಸೇರಿ ಬಹುತೇಕ ಎಲ್ಲಾ ಕ್ರೀಡೆಗಳ ಆಟಗಾರರ ಮೂತ್ರ ಅಥವಾ ರಕ್ತದ ಮಾದರಿ ಸಂಗ್ರಹ ಮಾಡಿರುವುದಾಗಿ ತಿಳಿಸಿದೆ.

ವಿಶ್ವ ಬ್ಯಾಡ್ಮಿಂಟನ್‌: ಸಿಂಧು, ಸಾತ್ವಿಕ್‌-ಚಿರಾಗ್‌ ಶೆಟ್ಟಿಗೆ ಮೊದಲ ಸುತ್ತಿನಲ್ಲಿ ಬೈ

ಕೌಲಾಲಂಪುರ: 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ, ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು, ಪುರುಷರ ಡಬಲ್ಸ್‌ ವಿಶ್ವ ನಂ.2 ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿಗೆ 2023ರ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದೆ. ಆ.21ರಿಂದ 27ರ ವರೆಗೂ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧುಗೆ ಕಠಿಣ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. 

ಬಾಲಿಯಲ್ಲಿ ಪತ್ನಿ-ಮಕ್ಕಳ ಜತೆ ಡೇವಿಡ್ ವಾರ್ನರ್ ಮೋಜು-ಮಸ್ತಿ..! ಫೋಟೋಗಳು ಇಲ್ಲಿವೆ ನೋಡಿ.

ಸಿಂಧುಗೆ 2ನೇ ಸುತ್ತಿನಿಂದ ಮುಂದಕ್ಕೆ ಥಾಯ್ಲೆಂಡ್‌ನ ರಚನಾಕ್‌ ಇಂಟನಾನ್‌ ಹಾಗೂ ಅಗ್ರ ಶ್ರೇಯಾಂಕಿತೆ ಕೊರಿಯಾದ ಆ್ಯನ್ ಸೆ ಯಂಗ್‌ ಎದುರಾಗಬಹುದು. ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್‌, ಶ್ರೀಕಾಂತ್‌, ಲಕ್ಷ್ಯ ಸೇನ್‌ ಕಣಕ್ಕಿಳಿಯಲಿದ್ದಾರೆ. ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್‌-ತ್ರೀಸಾ ಜಾಲಿಗೆ ಮೊದಲ ಸುತ್ತಿನಲ್ಲಿ ಬೈ ಸಿಕ್ಕಿದ್ದು, ಅಶ್ವಿನಿ ಭಟ್‌ ಹಾಗೂ ಶಿಖಾ ಗೌತಮ್‌ಗೆ ಮೊದಲ ಸುತ್ತಿನಲ್ಲಿ ನೆದರ್‌ಲೆಂಡ್ಸ್‌ ಜೋಡಿ ಎದುರಾಗಲಿದೆ. ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ನಾಲ್ವರು, ಡಬಲ್ಸ್‌ನಲ್ಲಿ 6 ಜೋಡಿ ಸ್ಪರ್ಧಿಸಲಿದೆ.

click me!