ಕಾಫಿ ವಿತ್ ಕರಣ್ ಶೋಗೆ ಹೋಗ್ತೀರಾ? ಅಭಿಮಾನಿ ಪ್ರಶ್ನೆಗೆ ಅಶ್ವಿನ್ ಉತ್ತರ!

Published : Mar 09, 2019, 11:44 AM IST
ಕಾಫಿ ವಿತ್ ಕರಣ್ ಶೋಗೆ ಹೋಗ್ತೀರಾ? ಅಭಿಮಾನಿ ಪ್ರಶ್ನೆಗೆ ಅಶ್ವಿನ್ ಉತ್ತರ!

ಸಾರಾಂಶ

ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಸಂದರ್ಶನದಿಂದ ಕಾಫಿ ವಿತ್ ಕರಣ್ ಟಿವಿ ಶೋಗೆ  ಭಾರಿ ಪ್ರಚಾರ ಪಡೆಯಿತಲ್ಲದೆ, ಕೆಟ್ಟ ಹೆಸರು  ಗಳಿಸಿಕೊಂಡಿತು. ಇದೀಗ ಇದೇ ಶೋಗೆ ಆರ್ ಅಶ್ವಿನ್ ಹೋಗ್ತಿರಾ ಎಂದು ಅಭಿಮಾನಿಯೋರ್ವ ಪ್ರಶ್ನಿಸಿದ್ದಾರೆ. ಇದಕ್ಕೆ ಅಶ್ವಿನ್ ಹೇಳಿದ್ದೇನು? ಇಲ್ಲಿದೆ ವಿವರ.  

ಚೆನ್ನೈ(ಮಾ.09): ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಸಂದರ್ಶನದ ಬಳಿಕ ಕಾಫಿ ವಿತ್ ಕರಣ್ ಶೋ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರಿ ಸದ್ದು ಮಾಡಿದೆ. ವಿವಾದಾತ್ಮಕ ಹೇಳಿಕೆಯಿಂದ ಉಭಯ ಕ್ರಿಕೆಟಿಗರು ಅಮಾನತು ಶಿಕ್ಷೆ ಕೂಡ ಅನುಭವಿಸಿದ್ದಾರೆ. ಇದೀಗ ಆರ್ ಅಶ್ವಿನ್‌ಗೆ ಅಭಿಮಾನಿಯೋರ್ವ ಕಾಫಿ ವಿತ್ ಕರಣ್ ಶೋ ಕುರಿತು ಪ್ರಶ್ನೆ ಕೇಳಿದ್ದಾನೆ.

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಟಿವಿ ಕಾರ್ಯಕ್ರಮಕ್ಕೆ ಹೋಗುತ್ತೀರಾ ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೋರ್ವ ಆರ್ ಅಶ್ವಿನ್‌ಗೆ ಪ್ರಶ್ನೆ ಕೇಳಿದ್ದ. ಇದಕ್ಕೆ ಉತ್ತರಿಸಿರುವ ಅಶ್ವಿನ್ ಖಂಡಿತವಾಗಿಯೂ ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಅಂತಿಮ 2 ಏಕದಿನ ಪಂದ್ಯಕ್ಕೆ ಬದಲಾವಣೆ - ಧೋನಿಗೆ ವಿಶ್ರಾಂತಿ!

ಆರ್ ಅಶ್ವಿನ್ ಸದ್ಯ ಟೀಂ ಇಂಡಿಯಾದಿಂದ ಹೊರಗುಳಿದ್ದಾರೆ. ಇಂಜುರಿ ಸಮಸ್ಯೆಯಿಂದ ಹೊರಗುಳಿದ ಅಶ್ವಿನ್‌ಗೆ ಇದೀಗ ಸ್ಥಾನವೇ ಇಲ್ಲದಂತಾಗಿದೆ. ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಾಲ್ ಆಗಮನದಿಂದ ಆರ್ ಅಶ್ವಿನ್ ಟೆಸ್ಟ್‌ಗೆ ಸೀಮಿತವಾಗಿದ್ದಾರೆ. ಅದರಲ್ಲೂ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ ಅವಕಾಶ ಕೂಡ ಸಿಗುತ್ತಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Commitment Phobia: ನಿಮ್ಮ ಸಂಗಾತಿಗೂ ಇದ್ಯಾ ಚೆಕ್ ಮಾಡ್ಕೊಳ್ಳಿ! ಗುರುತಿಸುವುದು ಹೇಗೆ?
WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!