
ನವದೆಹಲಿ(ಮೇ.26): ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭ್ರಷ್ಟಾಚಾರ ತಡೆಯಲು ಸಕಲ ಪ್ರಯತ್ನ ನಡೆಸುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಶಂಕಿತ ಬುಕ್ಕಿಗಳ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ದುಬಾರಿ ಉಡುಗೊರೆ ಆಮಿಷವೊಡ್ಡಿದ ಆರೋಪದ ಮೇರೆಗೆ ಭಾರತದ ಇಬ್ಬರು, ಬಾಂಗ್ಲಾದೇಶದ ಮೂವರು ಪತ್ರಕರ್ತರಿಗೆ ನಿಷೇಧ ಹೇರಿದೆ.
ಇದನ್ನೂ ಓದಿ: ವಿಶ್ವಕಪ್ ಅಭ್ಯಾಸ ಪಂದ್ಯ: ನ್ಯೂಜಿಲೆಂಡ್‌ಗೆ ಶರಣಾದ ಕೊಹ್ಲಿ ಬಾಯ್ಸ್!
ವಿಶ್ವಕಪ್ ಪಂದ್ಯಗಳ ವರದಿ ಮಾಡದಂತೆ, ಕ್ರೀಡಾಂಗಣಗಳ ಪ್ರವೇಶ ನಿರ್ಬಂಧಿಸಿದೆ. ಇದೇ ವೇಳೆ ಉದ್ಯಮಿಗಳು, ನಟರು, ರಾಜ್ಯ ಮಟ್ಟದ ಕ್ರಿಕೆಟಿಗರ ಮೆಲೂ ಕಣ್ಣಿಟ್ಟಿರುವುದಾಗಿ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಎಲ್ಲಾ 10 ತಂಡಗಳಿಗೆ ಪ್ರತ್ಯೇಕ ಭದ್ರತಾ ಅಧಿಕಾರಿಯನ್ನು ಐಸಿಸಿ ನೇಮಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ವಿಶ್ವಕಪ್ 2019: ವಿಜಯ್ ಶಂಕರ್ ಸ್ಕ್ಯಾನ್ ರಿಪೋರ್ಟ್ ಬಹಿರಂಗ!
ಸದ್ಯ ಎಲ್ಲಾ ತಂಡಗಳು ಅಭ್ಯಾಸ ಪಂದ್ಯ ನಡೆಸುತ್ತಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ವಿರುದ್ದ ಮುಗ್ಗರಿಸಿದೆ. ಮೇ.30 ರಿಂದ 2019ರ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಜೂನ್ 5 ರಂದು ಭಾರತ ಮೊದಲ ಪಂದ್ಯ ಆಡಲಿದೆ. ಮೊದಲ ಹೋರಾಟದಲ್ಲಿ ಭಾರತ, ಸೌತ್ಆಫ್ರಿಕಾ ತಂಡವನ್ನು ಎದುರಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.