ಈ ಪದಕ ಇಡೀ ದೇಶಕ್ಕೆ ಅರ್ಪಣೆ, ನಾವು ಕಷ್ಟ ಪಟ್ಟರೇ ಏನುಬೇಕಾದರೂ ಮಾಡುತ್ತೇವೆ: ನೀರಜ್ ಚೋಪ್ರಾ 'ಚಿನ್ನ'ದಂತ ಮಾತು

By Naveen KodaseFirst Published Aug 28, 2023, 11:52 AM IST
Highlights

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಐತಿಹಾಸಿಕ ಚಿನ್ನದ ಪದಕವನ್ನು ಭಾರತಕ್ಕೆ ಅರ್ಪಿಸಿದ್ದಾರೆ. ಭಾನುವಾರ ತಡರಾತ್ರಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು. 

ಬುಡಾಪೆಸ್ಟ್‌(ಹಂಗೇರಿ): ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಜಾವೆಲಿನ್‌ ಎಸೆತದಲ್ಲಿ ಚಾಂಪಿಯನ್‌ ಆಟಗಾರ ನೀರಜ್‌ ಐತಿಹಾಸಿಕ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ. ಅರ್ಹತಾ ಸುತ್ತಿನಲ್ಲಿ ಒಂದೇ ಎಸೆತಕ್ಕೆ ಫೈನಲ್‌ ಹಾಗೂ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಪಡೆದುಕೊಂಡಿದ್ದ 25ರ ನೀರಜ್‌, ಭಾನುವಾರ ಮಧ್ಯರಾತ್ರಿ ನಡೆದ ಫೈನಲ್‌ನಲ್ಲಿ 88.17 ಮೀ. ದೂರಕ್ಕೆ ಎಸೆದು ಇತಿಹಾಸ ಸೃಷ್ಟಿಸಿದರು. ಒಲಿಂಪಿಕ್ಸ್‌ ಬಳಿಕ ವಿಶ್ವ ಕೂಟದಲ್ಲೂ ಭಾರತದ ಚಿನ್ನದ ಕೊರತೆಯನ್ನು ನೀಗಿಸಿದರು.

ಇನ್ನ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಐತಿಹಾಸಿಕ ಚಿನ್ನದ ಪದಕವನ್ನು ಭಾರತಕ್ಕೆ ಅರ್ಪಿಸಿದ್ದಾರೆ. ಭಾನುವಾರ ತಡರಾತ್ರಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು. 

ಚಿನ್ನ ಗೆದ್ದ ನೀರಜ್‌ನ ಬಂಗಾರ ನಡೆ, ಧ್ವಜರಹಿತ ಪಾಕ್‌ನ ಅರ್ಶದ್ ಕರೆದು ತಿರಂಗ ಪಕ್ಕಕ್ಕೆ ನಿಲ್ಲಿಸಿದ ಚೋಪ್ರಾ!

ಪದಕ ಗೆದ್ದ ಖುಷಿಯಲ್ಲಿ ಮಾತನಾಡಿದ ನೀರಜ್ ಚೋಪ್ರಾ, "ಇಷ್ಟು ತಡರಾತ್ರಿಯವರೆಗೂ ಕಾದು ಕುಳಿತು ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬ ಭಾರತೀಯನಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಪದಕವನ್ನು ಅವರಿಗೆ ಅರ್ಪಿಸುತ್ತೇನೆ. ನಾನು ಈ ಮೊದಲು ಒಲಿಂಪಿಕ್ಸ್ ಪದಕ ಜಯಿಸಿದ್ದೆ, ಇದೀಗ ವಿಶ್ವ ಚಾಂಪಿಯನ್‌ ಕೂಡಾ ಆಗಿದ್ದೇನೆ. ಭಾರತೀಯರಾದ ನಾವು ಏನು ಬೇಕಾದರೂ ಮಾಡಬಲ್ಲೆವು. ಇದಕ್ಕಾಗಿ ನಿರಂತರವಾಗಿ ಕಠಿಣ ಪರಿಶ್ರಮ ಪಡಬೇಕಷ್ಟೇ" ಎಂದು ನೀರಜ್ ಚೋಪ್ರಾ ಹೇಳಿದ್ದಾರೆ.

Neeraj Chopra- I want to thank the people of India for staying up late. This medal is for all of India. I'm Olympic champion now I'm world champion. Keep working hard in different fields. We have to make a name in the world. pic.twitter.com/JsymGj3Kwd

— jonathan selvaraj (@jon_selvaraj)

25 ವರ್ಷದ ನೀರಜ್ ಚೋಪ್ರಾ, ಕಳೆದ ವರ್ಷ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಇದೀಗ ತಮ್ಮ ಎರಡನೇ ಪ್ರಯತ್ನದಲ್ಲೇ ಬೆಳ್ಳಿ ಪದಕವನ್ನು ಚಿನ್ನದ ಪದಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ ನೀರಜ್ ಚೋಪ್ರಾ ಯಶಸ್ವಿಯಾಗಿದ್ದಾರೆ.

Neeraj Chopra: ಚಿನ್ನದ ಹುಡುಗ ನೀರಜ್‌ ಚೋಪ್ರಾ ಈಗ ‘ವಿಶ್ವ’ ವಿಜೇತ!

ಇನ್ನುಳಿದಂತೆ ನೀರಜ್ ಚೋಪ್ರಾಗೆ ಕಠಿಣ ಪೈಪೋಟಿ ನೀಡಿದ ಪಾಕಿಸ್ತಾನದ ಅರ್ಶದ್‌ ನದೀಂ ತಮ್ಮ 3ನೇ ಪ್ರಯತ್ನದಲ್ಲಿ 87.82 ಮೀ. ದೂರಕ್ಕೆ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೆಕ್‌ ಗಣರಾಜ್ಯದ ಜಾಕುಬ್‌ ವೆಡ್ಲೆಜ್‌ 86.67 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಗಮನ ಸೆಳೆದ ಕಿಶೋರ್‌, ಮನು

ಫೈನಲ್‌ನಲ್ಲಿ ಕಿಶೋರ್‌ ಹಾಗೂ ಮನು ಪದಕ ಗೆಲ್ಲಲು ವಿಫಲರಾದರೂ, ತಮ್ಮ ಪ್ರದರ್ಶನದ ಮೂಲಕ ಗಮನ ಸೆಳೆದರು. 5ನೇ ಪ್ರಯತ್ನದಲ್ಲಿ 84.77 ಮೀ. ದೂರ ಎಸೆದು ತಮ್ಮ ವೈಯಕ್ತಿಕ ಶ್ರೇಷ್ಠ ದೂರ ದಾಖಲಿಸಿದ ಕಿಶೋರ್‌ 5ನೇ ಸ್ಥಾನ ಪಡೆದುಕೊಂಡರೆ, ಮನು 6ನೇ ಪ್ರಯತ್ನದಲ್ಲಿ 84.14 ಮೀ. ದೂರ ಎಸೆದು 6ನೇ ಸ್ಥಾನ ಪಡೆದರು.

ಎಲ್ಲದರಲ್ಲೂ ಚಾಂಪಿಯನ್‌!

ನೀರಜ್‌ ವಿಶ್ವದ ಎಲ್ಲಾ ಪ್ರಮುಖ ಕೂಟಗಳಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. 2018ರಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಅವರು, ಅದೇ ವರ್ಷ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಾಂಪಿಯನ್‌ ಎನಿಸಿಕೊಂಡರು. 2021ರಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ ಕಳೆದ ವರ್ಷ ಡೈಮಂಡ್‌ ಲೀಗ್‌ ಪ್ರಶಸ್ತಿ ತನ್ನದಾಗಿಸಿಕೊಂಡರು. ವಿಶ್ವ ಕೂಟದಲ್ಲಿ ಬಾಕಿ ಇದ್ದ ಸ್ವರ್ಣವನ್ನು ಈ ಬಾರಿ ಕೊರಳಿಗೇರಿಸಿಕೊಂಡರು.

click me!