ಆರ್ಚರಿ ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದ ಅಭಿಷೇಕ್‌ ವರ್ಮಾ-ಜ್ಯೋತಿ ಸುರೇಖಾ

By Kannadaprabha NewsFirst Published Jul 11, 2022, 9:57 AM IST
Highlights

* ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಅಭಿಷೇಕ್‌ ವರ್ಮಾ ಮತ್ತು ಜ್ಯೋತಿ ಸುರೇಖಾ
* 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ
* ಮಾಜಿ ವಿಶ್ವಕಪ್‌ ಚಿನ್ನ ವಿಜೇತ ಅಭಿಷೇಕ್‌ಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 50ನೇ ಪದಕ

ಬರ್ಮಿಂಗ್‌ಹ್ಯಾಮ್‌(ಅಮೆರಿಕ): ಭಾರತದ ಅಭಿಷೇಕ್‌ ವರ್ಮಾ ಮತ್ತು ಜ್ಯೋತಿ ಸುರೇಖಾ ಅಮೆರಿಕದ ಅಲಬಾಮಾದಲ್ಲಿರುವ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಆರ್ಚರಿ ವಿಶ್ವ ಗೇಮ್ಸ್‌ನ ಕಾಂಪೌಂಡ್‌ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದಾರೆ. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ 1 ಅಂಕದ (157-156) ರೋಚಕ ಗೆಲುವು ಸಾಧಿಸಿತು.

ಭಾರತೀಯ ಆರ್ಚರಿ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ವಿಶ್ವ ಗೇಮ್ಸ್‌ನಲ್ಲಿ ಭಾರತಕ್ಕಿದು ಮೊದಲ ಪದಕ. ಅಲ್ಲದೇ ಮಾಜಿ ವಿಶ್ವಕಪ್‌ ಚಿನ್ನ ವಿಜೇತ ಅಭಿಷೇಕ್‌ಗೆ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ 50ನೇ ಪದಕ ಎನ್ನುವುದು ವಿಶೇಷ. ವಿಶ್ವ ಗೇಮ್ಸ್‌, ವಿಶ್ವ ಚಾಂಪಿಯನ್‌ಶಿಪ್‌, ವಿಶ್ವಕಪ್‌ ಫೈನಲ್‌, ವಿಶ್ವಕಪ್‌, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಶಿಪ್‌ನ ಕಾಂಪೌಂಡ್‌ ವಿಭಾಗದಲ್ಲಿ ಪದಕ ಗೆದ್ದ ಭಾರತದ ಏಕೈಕ ಆರ್ಚರ್‌ ಎನ್ನುವ ದಾಖಲೆಯನ್ನೂ ಹೊಂದಿದ್ದಾರೆ.

2023ರಲ್ಲಿ ಭಾರತದಲ್ಲಿ ಫಾಮುಲಾ-ಇ ರೇಸ್‌

ನವದೆಹಲಿ: 10 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಜಾಗತಿಕ ಮಟ್ಟದ ಮೋಟಾರ್‌ ರೇಸ್‌ ನಡೆಯಲಿದೆ. 2023ರಲ್ಲಿ ಭಾರತಕ್ಕೆ ಫಾಮುಲಾ-ಇ ಕಾರ್‌ ರೇಸ್‌ ಪ್ರವೇಶಿಸಲಿದ್ದು ನೋಯ್ಡಾದಲ್ಲಿರುವ ಬುದ್ಧ ಅಂತಾರಾಷ್ಟ್ರೀಯ ಸಕ್ರ್ಯೂಟ್‌ ಆತಿಥ್ಯ ನೀಡಲಿದೆ. 2011ರಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಫಾರ್ಮುಲಾ-1 ರೇಸ್‌, 2013ರ ವರೆಗೂ ನಡೆದಿತ್ತು. ಭಾರತದಲ್ಲಿ ತೆರಿಗೆ ವಿನಾಯಿತಿ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಇಂಡಿಯನ್‌ ಗ್ರ್ಯಾನ್‌ ಪ್ರಿ ರೇಸ್‌ ಅನ್ನು ರದ್ದುಗೊಳಿಸಲಾಗಿತ್ತು.

ಶೂಟಿಂಗ್‌ ವಿಶ್ವಕಪ್‌: ಪಾ‍ರ್ಥ್‌, ಅರ್ಜುನ್‌ ಫೈನಲ್‌ಗೆ ಪ್ರವೇಶ

ಚಾಂಗ್‌ವೊನ್‌: ಭಾರತದ ಅರ್ಜುನ್‌ ಬಾಬುತಾ ಮತ್ತು ಪಾಥ್‌ರ್‍ ಮಖಿಜಾ ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನ ಪುರುಷರ 10 ಮೀ. ಏರ್‌ ರೈಫಲ್‌ ಸ್ಪರ್ಧೆಯ ಫೈನಲ್‌ ಪ್ರವೇಶಿಸಿದ್ದಾರೆ. 60 ಶಾಟ್‌ಗಳ ಅರ್ಹತಾ ಸುತ್ತಿನಲ್ಲಿ 630.5 ಅಂಕಗಳೊಂದಿಗೆ ಅರ್ಜುನ್‌ 2ನೇ ಸ್ಥಾನ ಪಡೆದರೆ, 628.4 ಅಂಕಗಳೊಂದಿಗೆ ಪಾಥ್‌ರ್‍ 5ನೇ ಸ್ಥಾನ ಪಡೆದು ಫೈನಲ್‌ಗೇರಿದರು. ಅರ್ಹತಾ ಸುತ್ತಿನಲ್ಲಿ ಒಟ್ಟು 53 ಶೂಟರ್‌ಗಳು ಸ್ಪರ್ಧಿಸಿದ್ದರು. ಈ ಪೈಕಿ ಅಗ್ರ 8 ಮಂದಿ ಫೈನಲ್‌ಗೇರಿದ್ದು, ಸೋಮವಾರ ಪದಕಕ್ಕಾಗಿ ಸೆಣಸಲಿದ್ದಾರೆ.

ಟೀಂ ಇಂಡಿಯಾ vs ವಿಶ್ವ ಇಲೆವೆನ್, ವಿಶೇಷ ಪಂದ್ಯ ಆಯೋಜಿಸಲು ಮೋದಿ ಸರ್ಕಾರದ ಮನವಿ!

22ನೇ ಗ್ರ್ಯಾನ್‌ ಸ್ಲಾಂ ಗೆದ್ದ ಜೋಕೋವಿಚ್‌

ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟ್ರೋಫಿಯನ್ನು ಸತತ 4ನೇ ಮತ್ತು ಒಟ್ಟಾರೆ 7ನೇ ಬಾರಿಗೆ ಗೆದ್ದ ಜೋಕೋವಿಚ್‌, ಈ ವರ್ಷದ ಆರಂಭದಲ್ಲಿ ಎದುರಾದ ಅವಮಾನ, ಕೆಲ ತಿಂಗಳುಗಳ ಹಿಂದೆ ಎದುರಾದ ಸೋಲಿನಿಂದ ಹೊರಬಂದು ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಆಸ್ಪ್ರೇಲಿಯಾದ ವಿವಾದಿತ ಟೆನಿಸಿಗ ನಿಕ್‌ ಕಿರಿಯೋಸ್‌ ವಿರುದ್ಧ 4-6, 6-3, 6-4, 7-6(7/3) ಸೆಟ್‌ಗಳಲ್ಲಿ ಗೆದ್ದ ಜೋಕೋವಿಚ್‌, 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡರು. 

ವರ್ಷದಾರಂಭದಲ್ಲಿ ಕಹಿ, ಜೋಕೋಗೆ ಕೊನೆಗೂ ಸಿಹಿ!

ಕೊರೋನಾ ಲಸಿಕೆ ಪಡೆಯದ ಕಾರಣ ಜೋಕೋವಿಚ್‌ರನ್ನು ಆಸ್ಪ್ರೇಲಿಯಾ ಸರ್ಕಾರ ಏರ್‌ಪೋರ್ಚ್‌ನಲ್ಲೇ ತಡೆದು ಗಡಿಪಾರು ಮಾಡಿತ್ತು. ಆಸ್ಪ್ರೇಲಿಯನ್‌ ಓಪನ್‌ನಲ್ಲ ಪ್ರಶಸ್ತಿ ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಭಾರೀ ಅವಮಾನ ಅನುಭವಿಸಿದ್ದ ಜೋಕೋ ಈ ವರ್ಷ ಉಳಿದ ಗ್ರ್ಯಾನ್‌ ಸ್ಲಾಂಗಳಲ್ಲಿ ಆಡುವುದೇ ಅನುಮಾನವೆನಿಸಿತ್ತು. ಆದರೆ ಕೋವಿಡ್‌ ಪರಿಸ್ಥಿತಿ ಸುಧಾರಿಸಿದ ಕಾರಣ ಫ್ರೆಂಚ್‌ ಓಪನ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ ವಿರುದ್ಧ ಸೋತು ನಿರಾಸೆ ಕಂಡಿದ್ದರು.

ಅತಿಹೆಚ್ಚು ಗ್ರ್ಯಾನ್‌ ಸ್ಲಾಂ: 2ನೇ ಸ್ಥಾನಕ್ಕೆ ಜೋಕೋ

22 ಗ್ರ್ಯಾನ್‌ ಸ್ಲಾಂಗಳೊಂದಿಗೆ ರಾಫೆಲ್‌ ನಡಾಲ್‌ ಮೊದಲ ಸ್ಥಾನದಲ್ಲಿದ್ದು, 21ನೇ ಗ್ರ್ಯಾನ್‌ಸ್ಲಾಂ ಗೆಲ್ಲುವ ಮೂಲಕ ಜೋಕೋವಿಚ್‌, ರೋಜರ್‌ ಫೆಡರರ್‌(20)ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಈ ವರ್ಷ ಇನ್ನು ಯುಎಸ್‌ ಓಪನ್‌ ಬಾಕಿ ಇದ್ದು, ನಡಾಲ್‌ರ ದಾಖಲೆ ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ.

click me!