ನಿಕ್‌ ಕಿರಿಯೋಸ್‌ ಮಣಿಸಿ 7ನೇ ವಿಂಬಲ್ಡನ್ ಪ್ರಶಸ್ತಿ ಗೆದ್ದ ನೋವಾಕ್ ಜೋಕೋವಿಚ್!

By Suvarna News  |  First Published Jul 10, 2022, 10:25 PM IST
  • ನೋವಾಕ್‌ ಜೋಕೋವಿಚ್‌ಗೆ 21ನೇ ಗ್ರ್ಯಾಂಡ್ ಸ್ಲ್ಯಾಂ ಕೀರಿಟ
  • ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ  ನಿಕ್‌ ಕಿರಿಯೋಸ್‌ ವಿರುದ್ಧ ಗೆಲುವು
  • 4-6 6-3 6-4 7-6(3) ಅಂತರದಲ್ಲಿ ನೋವಾಕ್‌ಗೆ  ಗೆಲುವು
     

ಲಂಡನ್(ಜು.10):  ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಚ್ 21ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನೋವಾಕ್, ಆಸ್ಪ್ರೇಲಿಯಾದ ನಿಕ್‌ ಕಿರಿಯೋಸ್ ವಿರುದ್ಧ 4-6 6-3 6-4 7-6(3) ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಸಿಕೆ ಕಾರಣ ಅಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಆದ ಅವಮಾವನ್ನು ವಿಂಬಲ್ಡನ್ ಪ್ರಶಸ್ತಿಗೆಲ್ಲೋ ಮೂಲಕ ತೀರಿಸಿಕೊಂಡಿದ್ದಾರೆ.

ನಿಕ್‌ ಕಿರಿಯೋಸ್ ವಿರುದ್ಧ ಗೆಲುವು ಸಾಧಿಸಿದ ನೋವಾಕ್ ಜೋಕೋವಿಚ್ ಮತ್ತೊಂದು ದಾಖಲೆ ಬರೆದಿದ್ದಾರೆ. ಇದು ನೋವಾಕ್ ಗೆದ್ದ ಸತತ 4ನೇ ವಿಂಬಲ್ಡನ್ ಪ್ರಶಸ್ತಿಯಾಗಿದೆ. ಇಷ್ಟೇ ಅಲ್ಲ ವಿಂಬಲ್ಡನ್‌ನ 8 ಫೈನಲ್ ಪಂದ್ಯದಲ್ಲಿ 7 ಪಂದ್ಯ ಗೆದ್ದ ಮತ್ತೊಂದು ದಾಖಲೆ ಸರಿಗಟ್ಟಿದ್ದಾರೆ.  ಪೀಟ್‌ ಸ್ಯಾಂಪ್ರಸ್‌ರ (07 ವಿಂಬಲ್ಡನ್‌ ಜಯ) ದಾಖಲೆಯನ್ನು ಇದೀಗ ಜೋಕೋವಿಚ್ ಸರಿಗಟ್ಟಿದ್ದಾರೆ.

Latest Videos

undefined

ಇಷ್ಟೇ ಅಲ್ಲ ಪುರುಷರಲ್ಲಿ ಗರಿಷ್ಠ ಗ್ಲ್ಯಾಂಡ್ ಸ್ಲಾಂ ಗೆದ್ದ ರಾಫೆಲ್ ನಡಾಲ್‌ 22 ಕೀರೀಟ ಮುಡಿಗೇರಿಸಿಕೊಂಡಿದ್ದಾರೆ. ಇದೀಗ ನೋವಾಕ್ 21 ಗ್ರ್ಯಾಂಡ್ ಸ್ಲ್ಯಾಂ ಗೆಲ್ಲುವ ಮೂಲಕ ಭಾರಿ ಪೈಪೋಟಿ ನೀಡಿದ್ದಾರೆ.  ಕಿರಿಯೋಸ್‌ ಕ್ವಾರ್ಟರ್‌ನಲ್ಲಿ ಚಿಲಿಯ ಕ್ರಿಸ್ಟಿಯನ್‌ ಗರಿನ್‌ ವಿರುದ್ಧ 6-4,6-3,7-6(5)ರಲ್ಲಿ ಗೆದ್ದು ಮೊದಲ ಬಾರಿಗೆ ಗ್ರ್ಯಾನ್‌ ಸ್ಲಾಂ ಸೆಮೀಸ್‌ಗೇರಿದ್ದರು. ಸೆಮೀಸ್‌ನಲ್ಲಿ ಅವರು ದಾಖಲೆಯ 22 ಗ್ರ್ಯಾನ್‌ ಸ್ಲಾಂಗಳ ಒಡೆಯ ಸ್ಪೇನ್‌ನ ರಾಫೆಲ್‌ ನಡಾಲ್‌ ವಿರುದ್ಧ ಆಡಬೇಕಿತ್ತು. ಆದರೆ ಪಕ್ಕೆ ನೋವಿನಿಂದಾಗಿ ನಡಾಲ್‌ ಟೂರ್ನಿಯಿಂದ ಹೊರನಡೆದ ಕಾರಣ ಕಿರಿಯೋಸ್‌ ವಾಕ್‌ ಓವರ್‌ ಪಡೆದು ನೇರವಾಗಿ ಫೈನಲ್‌ಗೆ ಪ್ರವೇಶಿಸಿದ್ದರು.

ಜೋಕೋವಿಚ್‌ ವಿರುದ್ಧ ಈ ಹಿಂದೆ 2017ರಲ್ಲಿ 2 ಬಾರಿ ಮುಖಾಮುಖಿಯಾಗಿದ್ದು ಎರಡರಲ್ಲೂ ಕಿರಿಯೋಸ್‌ ಜಯಿಸಿದ್ದರು. ಆದರೆ ವಿಂಬಲ್ಡನ್ ಟೂರ್ನಿಯಲ್ಲಿ ಕಿರಿಯೋಸ್ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. 

click me!