ENG vs IND ಸೂರ್ಯಕುಮಾರ್ ಆಕರ್ಷಕ ಶತಕ, ಭಾರತಕ್ಕೆ 17 ರನ್ ಸೋಲು!

Published : Jul 10, 2022, 10:47 PM ISTUpdated : Jul 10, 2022, 10:54 PM IST
ENG vs IND  ಸೂರ್ಯಕುಮಾರ್ ಆಕರ್ಷಕ ಶತಕ,  ಭಾರತಕ್ಕೆ 17 ರನ್ ಸೋಲು!

ಸಾರಾಂಶ

ಭಾರತ - ಇಂಗ್ಲೆಂಡ್ ನಡುವಿನ 3ನೇ ಟಿ20 ಪಂದ್ಯ ಅಬ್ಬರಿಸಿದ ಸೂರ್ಯಕುಮಾರ್ ಯಾದವ್  2-1 ಅಂತರದಲ್ಲಿ ಸರಣಿ ಕೈವಶ ಮಾಡಿದ ಭಾರತ  

ಟ್ರೆಂಟ್ ಬ್ರಿಡ್ಜ್(ಜು.10):  ಇಂಗ್ಲೆಂಡ್ ವಿರುದ್ದದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಸ್ಫೋಟಕ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.  ಸೂರ್ಯಕುಮಾರ್ ಯಾದವ್ ಅಬ್ಬರಿಸಿದರೂ, ಇತರರಿಂದ ಉತ್ತಮ ಹೋರಾಟ ಮೂಡಿಬರಲಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 17 ರನ್ ಸೋಲು ಕಂಡಿದೆ. ಆದರೆ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

ಗೆಲುವಿಗೆ 216 ರನ್ ಬೃಹತ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರಿಷಬ್ ಪಂತ್ ಕೇವಲ 1 ರನ್ ಸಿಡಿಸಿ ಔಟಾದರು. ಸತತ ವೈಫಲ್ಯದಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಅನುಭವಿಸಿದರು. ಕೊಹ್ಲಿ 11 ರನ್ ಸಿಡಿಸಿ ಔಟಾದರು.  ಆದರೆ ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಟೀಂ ಇಂಡಿಯಾ vs ವಿಶ್ವ ಇಲೆವೆನ್, ವಿಶೇಷ ಪಂದ್ಯ ಆಯೋಜಿಸಲು ಮೋದಿ ಸರ್ಕಾರದ ಮನವಿ!

ಶ್ರೇಯಸ್ ಅಯ್ಯರ್ 28 ರನ್ ಸಿಡಿಸಿ ಔಟಾದರು. ಟೀಂ ಇಂಡಿಯಾ ವಿಕೆಟ್ ಪತನಗೊಳ್ಳುತ್ತಿದ್ದರೂ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಇಂಗ್ಲೆಂಡ್ ತಲೆನೋವು ಹೆಚ್ಚಿಸಿತು. ಅಬ್ಬರಿಸಿದ ಸೂರ್ಯಕುಮಾರ್ ಯಾದವ್ ಚೊಚ್ಚಲ ಟಿ20 ಶತಕ ಸಿಡಿಸಿ ಸಂಭ್ರಮಿಸಿದರು.  ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆರಂಭಿಸಿತು. 

ಸೂರ್ಯಕುಮಾರ್ ಯಾದವ್ ಸೆಂಚುರಿ ಮೂಲಕ ಟಿ20 ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕ ಹಾಗೂ ಅದಕ್ಕಿನ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಸೆಂಚುರಿ ಸಿಡಿಸಿದ 2ನೇ ಟೀಂ ಇಂಡಿಯಾ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. 

110*  ರನ್ , ಕೆಎಲ್ ರಾಹುಲ್ vs ವೆಸ್ಟ್ ಇಂಡೀಸ್, 2016
117 ರನ್, ಸೂರ್ಯಕುಮಾರ್ ಯಾದವ್ vs ಇಂಗ್ಲೆಂಡ್, 2022

Ind vs Eng: ಬೌಲಿಂಗ್‌ನಲ್ಲಿ ಅಪರೂಪದ ಮೈಲಿಗಲ್ಲು ನೆಟ್ಟ ವೇಗಿ ಭುವನೇಶ್ವರ್ ಕುಮಾರ್

ಟಿ20 ಕ್ರಿಕೆಟ್‌ನಲ್ಲಿ ವೈಯುಕ್ತಿಕ ಗರಿಷ್ಠ ಮೊತ್ತ ಸಿಡಿಸಿದ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ 2ನೇ ಸ್ಥಾನ ಅಲಂಕರಿಸಿದ್ದಾರೆ. ಮೊದಲ ಸ್ಥಾನದಲ್ಲಿ 118 ರನ್ ಸಿಡಿಸಿ ರೋಹಿತ್ ಶರ್ಮಾ ವಿರಾಜಮಾನರಾಗಿದ್ದಾರೆ. 

118 ರನ್, ರೋಹಿತ್ ಶರ್ಮಾ vs ಶ್ರೀಲಂಕಾ( 2017)
117 ರನ್, ಸೂರ್ಯಕುಮಾರ್ ಯಾದವ್,  vs ಇಂಗ್ಲೆಂಡ್( 2022)
111* ರನ್ ರೋಹಿತ್ ಶರ್ಮಾ vs ವೆಸ್ಟ್ ಇಂಡೀಸ್( 2018)
110* ರನ್, ಕೆಲಎಲ್ ರಾಹುಲ್ vs ವೆಸ್ಟ್ ಇಂಡೀಸ್

ಸೂರ್ಯಕುಮಾರ್ ಯಾದವ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ದಿನೇಶ್ ಕಾರ್ತಿಕ್ 6 ರನ್ ಸಿಡಿಸಿ ಔಟಾದರು. ಇತ್ತ ರವೀಂದ್ರ ಜಡೇಜಾ 7 ರನ್ ಸಿಡಿಸಿ ನಿರ್ಗಮಿಸಿದರು.  ಇತ್ತ ಸೂರ್ಯಕುಮಾರ್ ಯಾದವ್ 55 ಎಸೆತದಲ್ಲಿ 14  ಬೌಂಡರಿ ಹಾಗೂ 6 ಸಿಕ್ಸರ್ ಮೂಲಕ 117 ರನ್ ಸಿಡಿಸಿ ಔಟಾದರು. 

ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 21 ರನ್ ಅವಶ್ಯಕತೆ ಇತ್ತು. ಆದರೆ ಇಂಗ್ಲೆಂಡ್ ಆತಂಕ ಹೆಚ್ಚಿಸಿದ ಸೂರ್ಯಕುಮಾರ್ ಯಾದವ್ ವಿಕೆಟ್ ಪತನ ಟೀಂ ಇಂಡಿಯಾ ಗೆಲುವಿನ ದಾರಿಗೆ ಅಡ್ಡಿಯಾಯಿತು.  ಭಾರತ 9 ವಿಕೆಟ್ ನಷ್ಟಕ್ಕೆ 198 ರನ್ ಸಿಡಿಸಿ ಸೋಲಿಗೆ ಶರಣಾಯಿತು. ಅಂತಿಮ ಪಂದ್ಯದಲ್ಲಿ ಭಾರತ ಮುಗ್ಗರಿಸಿದರೂ ಸೂರ್ಯಕುಮಾರ್ ಹೋರಾಟ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!