ಮಹಿಳಾ ದಿನಾಚರಣೆ ಅಂಗವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಾಯಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ತಾಯಿಗೆ ನೀಡಿದ ಉಡುಗೊರೆ ಏನು? ಇಲ್ಲಿದೆ ನೋಡಿ
ಮುಂಬೈ(ಮಾ.08): ಮಹಿಳಾ ದಿನಾಚರಣೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಸೆಲೆಬ್ರೆಟಿಗಳು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ಇದೀಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಹಿಳಾ ದಿನಾಚರಣೆ ಅಂಗವಾಗಿ ತಾಯಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ
ಮಹಿಳಾ ದಿನಾಚರಣೆ ದಿನ ಸಚಿನ್ ತೆಂಡೂಲ್ಕರ್ ತಾಯಿಗಾಗಿ ಅಡುಗೆ ಮಾಡಿದ್ದಾರೆ. ತೆಂಡೂಲ್ಕರ್ ಕೈಯಾರೆ ಬೈಂಗನ್ ಬರ್ತಾ ತಿನಿಸು ಮಾಡಿದ್ದಾರೆ. ತಾಯಿ ರಜನಿ ತೆಂಡೂಲ್ಕರ್ , ಪತ್ನಿ ಅಂಜಲಿ ತೆಂಡೂಲ್ಕರ್ ಹಾಗೂ ಪುತ್ರಿ ಸಾರಾ ತೆಂಡೂಲ್ಕರ್‌ಗಾಗಿ ಈ ತಿನಿಸು ಮಾಡುತ್ತಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.
ಇದನ್ನೂ ಓದಿ: BCCI ಕೇಂದ್ರ ಗುತ್ತಿಗೆ ಪಟ್ಟಿ ಬಿಡುಗಡೆ: 'A+' ಗ್ರೇಡ್ ಪಡೆದ ಮೂವರು
ಚಿಕ್ಕವನಿದ್ದಾಗ ನನಗೆ ತಾಯಿ ಇದೇ ತಿನಿಸನ್ನು ಮಾಡಿಕೊಡುತ್ತಿದ್ದರು. ಇದೀಗ ಮಹಿಳಾ ದಿನಾಚರಣೆ ದಿನ ನಾನು ಈ ತಿನಿಸನ್ನ ತಾಯಿಗೆ ನೀಡುತ್ತಿದ್ದೇನೆ ಎಂದು ಸಚಿನ್ ಹೇಳಿದ್ದಾರೆ. ಬಳಿಕ ತಿನಿಸನ್ನು ತಾಯಿ ನೀಡಿದ್ದಾರೆ. ರುಚಿ ನೋಡಿದ ಸಚಿನ್ ತಾಯಿ ಟೇಸ್ಟಿಯಾಗಿದೆ ಎಂದಿದ್ದಾರೆ.