BCCI ಕೇಂದ್ರ ಗುತ್ತಿಗೆ ಪಟ್ಟಿ ಬಿಡುಗಡೆ: 'A+' ಗ್ರೇಡ್ ಪಡೆದ ಮೂವರು

By Web Desk  |  First Published Mar 8, 2019, 5:42 PM IST

ಬಿಸಿಸಿಐ ವಾರ್ಷಿಕ ಕಾಂಟ್ರಾಕ್ಟ್ ಬಿಡುಗಡೆಯಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಕೇವಲ ಮೂವರು ಆಟಗಾರರು ಮಾತ್ರ A+ ನಲ್ಲಿದ್ದಾರೆ. ನೂತನ ಪಟ್ಟಿಯಲ್ಲಿ ಯಾರಿಗೆ ಬಡ್ತಿ? ಯಾರಿಗೆ ಹಿನ್ನಡೆ? ಇಲ್ಲಿದೆ ವಿವಿರ.


ನವದೆಹಲಿ(ಮಾ.08): ಬಿಸಿಸಿಐ ಕ್ರಿಕೆಟ್‌ ಆಡಳಿತ ಸಮಿತಿ (ಸಿಒಎ) 2018-19ರ ಕೇಂದ್ರ ಗುತ್ತಿಗೆ ನವೀಕರಣ ಮಾಡಿದ್ದು, ರಿಷಭ್ ಪಂತ್ ’ಎ’ ದರ್ಜೆಗೇರಿದರೆ, ಶಿಖರ್ ಧವನ್ ಹಾಗೂ ಧವನ್ ಅವರನ್ನು ’ಎ+’ ದರ್ಜೆಯಿಂದ ’ಎ’ ಗ್ರೇಡ್’ಗೆ ಹಿಂಬಡ್ತಿ ಪಡೆದಿದ್ದಾರೆ. ಈ ಬಾರಿ ಒಟ್ಟು 25 ಆಟಗಾರರು ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದಾರೆ. 

Latest Videos

undefined

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ
ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಯುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ, ಬಿಸಿಸಿಐ ‘ಎ’ ದರ್ಜೆ ಗುತ್ತಿಗೆ ನೀಡಿದೆ. ಆದರೆ ಕನ್ನಡಿಗ ಮಯಾಂಕ್ ಅಗರ್’ವಾಲ್ ಯಾವುದೇ ದರ್ಜೆಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.

ಇದನ್ನೂ ಓದಿ: ಐಪಿಎಲ್ ಪಂದ್ಯದ ಸಮಯ ಬಹಿರಂಗ ಪಡಿಸಿದ ಬಿಸಿಸಿಐ!

ಇನ್ನು ’ಎ+’ ದರ್ಜೆ ಗುತ್ತಿಗೆಗೆ ಟೀಂ ಇಂಡಿಯಾ ಮೂವರು ಕ್ರಿಕೆಟಿಗರು ಪಾತ್ರರಾಗಿದ್ದು, ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ 7 ಕೋಟಿ ರುಪಾಯಿ ಜೇಬಿಗಿಳಿಸಿಕೊಳ್ಳಲಿದ್ದಾರೆ.  

ಇನ್ನು ’ಎ’ ದರ್ಜೆಗೇರಿದ ರಿಷಭ್‌ ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಗುರುವಾರ ನಡೆದ ಸಭೆಯಲ್ಲಿ ಬಿಸಿಸಿಐ ಕ್ರಿಕೆಟ್‌ ಆಡಳಿತ ಸಮಿತಿ (ಸಿಒಎ) 2018-19ರ ಕೇಂದ್ರ ಗುತ್ತಿಗೆ ನವೀಕರಣಕ್ಕೆ ಒಪ್ಪಿಗೆ ಸೂಚಿಸಿದೆ. 2017-18ರಲ್ಲಿ 26 ಆಟಗಾರರಿಗೆ ಕೇಂದ್ರ ಗುತ್ತಿಗೆ ನೀಡಲಾಗಿತ್ತು. ಆ ಪಟ್ಟಿಯಲ್ಲಿ ರಿಷಭ್‌ ಸ್ಥಾನ ಪಡೆದಿರಲಿಲ್ಲ. ಆಸ್ಪ್ರೇಲಿಯಾದಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಆಕರ್ಷಕ ಪ್ರದರ್ಶನ ತೋರುವ ಮೂಲಕ ಪಂತ್‌, ಭಾರತ ತಂಡದಲ್ಲಿ ಕಾಯಂ ಸ್ಥಾನ ಗಿಟ್ಟಿಸಿಕೊಂಡಿದ್ದು, ಸೀಮಿತ ಓವರ್‌ ಮಾದರಿಯಲ್ಲಿ ಧೋನಿ ನಿವೃತ್ತಿ ಬಳಿಕ ಅವರ ಜಾಗಕ್ಕೆ ಸೂಕ್ತ ಆಟಗಾರ ಎಂದು ಬಿಂಬಿತಗೊಂಡಿದ್ದಾರೆ.

ಇದನ್ನೂ ಓದಿ: ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸೌತ್ ಆಫ್ರಿಕಾ ಸ್ಟಾರ್ ಕ್ರಿಕೆಟಿಗ!

ಮೂರೂ ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಆಟಗಾರರಿಗೆ ಈ ದರ್ಜೆಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿ ಶಿಖರ್‌ ಧವನ್‌ ಹಾಗೂ ಭುವನೇಶ್ವರ್‌ ಕುಮಾರ್‌ರನ್ನು ‘ಎ+’ನಿಂದ ಕೈಬಿಡಲಾಗಿದೆ.  ’ಎ+’ ದರ್ಜೆ ಹೊಂದಿದವರು 7 ಕೋಟಿ ಪಡೆದರೆ, ’ಎ’ ದರ್ಜೆ ಹೊಂದಿದವರು 5 ಕೋಟಿ ಪಡೆದರೆ, ’ಬಿ’ ದರ್ಜೆ ಹೊಂದಿದವರು 3 ಕೋಟಿ ಹಾಗೂ ’ಸಿ’ ದರ್ಜೆ ಹೊಂದಿದವರು 1 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.

click me!