ಭಾರತದ ಗೆಲುವಿಗೆ 314 ರನ್ ಟಾರ್ಗೆಟ್ ನೀಡಿದ ಆಸ್ಟ್ರೇಲಿಯಾ

By Web DeskFirst Published Mar 8, 2019, 5:10 PM IST
Highlights

ಎಂ.ಎಸ್.ಧೋನಿ ತವರಿನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಹೀಗಾಗಿ ಭಾರತದ ಗೆಲುವಿಗೆ 314 ರನ್ ಟಾರ್ಗೆಟ್ ನೀಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
 

ರಾಂಚಿ(ಮಾ.08): ಭಾರತ ವಿರುದ್ದದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 313 ರನ್ ಸಿಡಿಸಿದೆ. ಉಸ್ಮಾನ್ ಖವಾಜ ಭರ್ಜರಿ ಶತಕ ಹಾಗೂ ನಾಯಕ ಆರೋನ್ ಫಿಂಚ್ 92 ರನ್ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿದೆ. ಈ ಮೂಲಕ ಭಾರತ ಗೆಲುವಿಗೆ ರನ್ ಟಾರ್ಗೆಟ್ ನೀಡಿದೆ. 

ಇದನ್ನೂ ಓದಿ: ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಟಾಸ್ ಸೋತು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಪಡೆಯಿತು. ಆ್ಯರೋನ್ ಫಿಂಚ್ ಹಾಗೂ ಉಸ್ಮಾನ್ ಖವಾಜ ಮೊದಲ ವಿಕೆಟ್‌ಗೆ 193 ರನ್ ಜೊತೆಯಾಟ ನೀಡಿದರು. ಅಬ್ಬರಿಸಿದ ಫಿಂಚ್ 92 ರನ್ ಸಿಡಿಸಿ ಔಟಾದರು ಈ ಮೂಲಕ 8 ರನ್‌ಗಳಿಂದ ಶತಕ ವಂಚಿತರಾದರು.

ಇದನ್ನೂ ಓದಿ: INDvsAUS:ಹುತಾತ್ಮ ಯೋಧರಿಗೆ ವೀಕ್ಷಕ ವಿವರಣೆಗಾರರ ಸಲಾಂ!

ಸೆಂಚುರಿ ಸಿಡಿಸಿದ ಉಸ್ಮಾನ್ ಖವಾಜ 104 ರನ್‌ಗಳಿಸಿ ಔಟಾದರು. ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರಿಸಿದರು. ಆದರೆ ಮ್ಯಾಕ್ಸ್‌ವೆಲ್ 47 ರನ್ ಸಿಡಿಸಿ ರನೌಟ್ ಆದರು. ಶಾನ್ ಮಾರ್ಶ್ ಹಾಗೂ ಪೀಟರ್‌ಹ್ಯಾಂಡ್ಸ್‌ಕಾಂಬ್ ಬಹುಬೇಗನೆ ವಿಕೆಟ್ ಕಳೆದುಕೊಂಡರು.

ಇದನ್ನೂ ಓದಿ: ಸ್ಮಿತ್, ವಾರ್ನರ್ ಐಪಿಎಲ್ ಭವಿಷ್ಯ - ನಿರ್ಧಾರ ಪ್ರಕಟಿಸಿದ ಆಸಿಸ್ ಮಂಡಳಿ!

ಮಾರ್ಕಸ್ ಸ್ಟೊಯ್ನಿಸ್ ಅಜೇಯ 31 ಹಾಗೂ ಅಲೆಕ್ಸ್ ಕ್ಯಾರಿ ಅಜೇಯ 21 ರನ್ ಸಿಡಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 313 ರನ್ ಸಿಡಿಸಿತು. ಭಾರತದ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.

click me!