ಇಂಗ್ಲೆಂಡ್'ಗೆ ತೆರಳುವ ಮುನ್ನ ಬ್ಲೂ ಗರ್ಲ್ಸ್ ಹೋಗಿದ್ದೆಲ್ಲಿಗೆ?: ತಂಡದ ಸೀಕ್ರೇಟ್ಸ್ ಬಿಚ್ಚಿಟ್ಟ ಟೀಂ ಇಂಡಿಯಾ ಗರ್ಲ್ಸ್

Published : Jul 05, 2017, 03:25 PM ISTUpdated : Apr 11, 2018, 12:54 PM IST
ಇಂಗ್ಲೆಂಡ್'ಗೆ ತೆರಳುವ ಮುನ್ನ ಬ್ಲೂ ಗರ್ಲ್ಸ್ ಹೋಗಿದ್ದೆಲ್ಲಿಗೆ?: ತಂಡದ ಸೀಕ್ರೇಟ್ಸ್ ಬಿಚ್ಚಿಟ್ಟ ಟೀಂ ಇಂಡಿಯಾ ಗರ್ಲ್ಸ್

ಸಾರಾಂಶ

ವಿಶ್ವಕಪ್'​​ನಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಭಾರತೀಯರು ಈ ಪರಿಯ ಪ್ರದರ್ಶನ ತೋರಲು ಕಾರಣವೇನು ಗೊತ್ತಾ? ಇಂಗ್ಲೆಂಡ್​​​ ಫ್ಲೈಟ್​​ ಹತ್ತಲೂ ಮುನ್ನ ಆಟಗಾರ್ತಿಯರು ಭೇಟಿಯಾಗಿದ್ದ ಆ ಜಾಗ. ಆ ಒಂದು ಸ್ಥಳಕ್ಕೆ ಭೇಟಿ ನೀಡಿದ ಪರಿಣಾಮವಾಗಿ ಇಂದು ನಮ್ಮ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಅಷ್ಟಕ್ಕೂ ವನಿತೆಯರು ಭೇಟಿ ನೀಡಿದ ಆ ಸ್ಥಳ ಯಾವುದು? ಇಲ್ಲಿದೆ ವಿವರ

ನವದೆಹಲಿ(ಜು.05): ವಿಶ್ವಕಪ್'​​ನಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಭಾರತೀಯರು ಈ ಪರಿಯ ಪ್ರದರ್ಶನ ತೋರಲು ಕಾರಣವೇನು ಗೊತ್ತಾ? ಇಂಗ್ಲೆಂಡ್​​​ ಫ್ಲೈಟ್​​ ಹತ್ತಲೂ ಮುನ್ನ ಆಟಗಾರ್ತಿಯರು ಭೇಟಿಯಾಗಿದ್ದ ಆ ಜಾಗ. ಆ ಒಂದು ಸ್ಥಳಕ್ಕೆ ಭೇಟಿ ನೀಡಿದ ಪರಿಣಾಮವಾಗಿ ಇಂದು ನಮ್ಮ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಅಷ್ಟಕ್ಕೂ ವನಿತೆಯರು ಭೇಟಿ ನೀಡಿದ ಆ ಸ್ಥಳ ಯಾವುದು? ಇಲ್ಲಿದೆ ವಿವರ

ಇಂಗ್ಲೆಂಡ್​'​​ನಲ್ಲಿ ಭಾರತದ ವನಿತೆಯರ ಯಶಸ್ವಿ ಪಯಣ

ಇಂಗ್ಲೆಂಡ್​'ನಲ್ಲಿ ನಡೆಯುತ್ತಿರುವ ಮಹಿಳಾ ಕ್ರಿಕೆಟ್​​​ ವಿಶ್ವಕಪ್'​​ನಲ್ಲಿ ಟೀಂ ಇಂಡಿಯಾದ ವನಿತೆಯರು ಭರ್ಜರಿ ಆಟವಾಡ್ತಿದ್ದಾರೆ. ಆಡಿರುವ 3 ಲೀಗ್​​ ಪಂದ್ಯಗಳಲ್ಲೂ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ​ಅಷ್ಟೇ ಅಲ್ಲ ​ಇವರ ಆಟದ ಪರಿ ನೋಡುತ್ತಿದ್ದರೆ ಈ ಬಾರಿ ಟ್ರೋಫಿ ಎತ್ತಿಹಿಡಿದು ವಿಶ್ವ ಚಾಂಪಿಯನ್ಸ್​​​ ಎನ್ನಿಸಿಕೊಳ್ಳೋದು ಗ್ಯಾರೆಂಟಿ ಅನಿಸುತ್ತಿದೆ.

ಇಂಗ್ಲೆಂಡ್​'​​ಗೆ ತೆರಳುವುದಕ್ಕೂ ಮುನ್ನ ಬ್ಲೂ ಗರ್ಲ್ಸ್​​​  ಹೋಗಿದ್ದೆಲ್ಲಿಗೆ.?

ಟೀಂ ಇಂಡಿಯಾದ ವನಿತೆಯರು ಇಷ್ಟು ಕಾನ್ಪಿಡೆಂಟ್​​​ ಆಗಿ ಆಡಲು, ಎದುರಾಳಿ ತಂಡಗಳನ್ನೂ ಚೆಂಡಾಡ್ತಿರೋದು, ಜಯಗಳ ಮೇಲೆ ಜಯ ಸಾಧಿಸಿತ್ತುರುವುದಕ್ಕೆ ಕಾರಣ ಅವರು ಇಂಗ್ಲೆಂಡ್​​​ಗೆ ತೆರಳೋದಕ್ಕೂ ಮುನ್ನ ಹೋಗಿದ್ದ ಆ ಸ್ಥಳ. ಆ ಸ್ಥಳದ ಮಹಿಮೆಯಿಂದಲೇ ಇಂದು ಟೀಂ ಇಂಡಿಯಾ ಗೆಲುವಿನ ನಾಗಲೋಟದಲ್ಲಿ ಮಿಂದೇಳ್ತಿರೋದು.

ಕಪಿಲ್​​ ಶರ್ಮಾ ಶೋನಲ್ಲಿ ಮಜಾ ಉಡಾಯಿಸಿದ ಮಿಥಾಲಿ ಟೀಂ

ಹೌದು, ಮಹತ್ವದ ಟೂರ್ನಿ ವಿಶ್ವಕಪ್​'ಗೆ ಹೋಗುವ ಮುನ್ನ ಮಿಥಾಲಿ ರಾಜ್​​ ಆಂಡ್​​ ಟೀಂ ದ ಕಪಿಲ್​​ ಶರ್ಮಾ ಶೋಗೆ ಭೇಟಿ ನೀಡಿತ್ತು. ಕಪಿಲ್​ ಶರ್ಮಾ ಮತ್ತು ತಂಡದವರು ಸಿಡಿಸಿದ ನಗೆಬಾಂಬ್​ಗಳಿಗೆ ಕುಣಿದು ಕುಪ್ಪಳಿಸಿದ್ರು. ಡ್ಯಾನ್ಸ್​​​ ಮಾಡಿ ಏಂಜಾಯ್​​ ಮಾಡಿದ್ರು. ಅವರ ಡ್ಯಾನ್ಸ್​​ ನೋಡಿ ಎಲ್ರೂ ಫಿದಾ ಆಗಿಬಿಟ್ಟರು.

ತಂಡದ ಸೀಕ್ರೇಟ್ಸ್​​​ ಬಿಚ್ಚಿಟ್ಟ ಟೀಂ ಇಂಡಿಯಾ ಗರ್ಲ್ಸ್​​: ಮಹಿಳಾ ಕ್ರಿಕೆಟ್​​'ನಲ್ಲೂ ಸ್ಲೆಡ್ಜಿಂಗ್​​ ನಡೆಯುತ್ತಾ..?

ಕಪಿಲ್​​ ಶರ್ಮಾ ಶೋನಲ್ಲಿ ಪಾಲ್ಗೊಂಡಿದ್ದ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್​​​, ಹರ್ಮನ್​​ಪ್ರೀತ್​​ ಕೌರ್​​​, ವೇದ ಕೃಷ್ಣಮೂರ್ತಿ ಮತ್ತು ಜುಲಾನ್​​ ಗೋಸ್ವಾಮಿ ಕೆಲವೊಂದು ಸೀಕ್ರೇಟ್ಸ್​​ಗಳನ್ನ ಬಿಚ್ಚಿಟ್ರು. ಅದರಲ್ಲೂ ಮಹಿಳಾ ಕ್ರಿಕೆಟ್​ನಲ್ಲಿ ಸ್ಲೆಡ್ಜಿಂಗ್​ ನಡೆಯುತ್ತಾ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಎಲ್ಲರನ್ನೂ ದಂಗು ಬಡಿಸಿತ್ತು.

ತಮ್ಮ ಮನದಾಳದ ಮಾತುಗಳನ್ನ ಆಡಿ, ಕಪಿಲ್​​ ಮತ್ತು ಟೀಂ ಮಾಡಿದ ತಮಾಷೆಗಳಿಗೆ ನಕ್ಕು ಎಂಜಾಯ್​​ ಮಾಡಿದ್ದ ಟೀಂ ಇಂಡಿಯಾ ರಿಲ್ಯಾಕ್ಸ್​​ ಆಗಿತ್ತು. ರಿಲ್ಯಾಕ್ಸ್​​ ಮೂಡ್​​ನಲ್ಲೇ ಇಂಗ್ಲೆಂಡ್'​ಗೆ ತೆರಳಿದ ಟೀಂ ಇಂಡಿಯಾದ ವನಿತೆಯರು ಭರ್ಜರಿ ಪ್ರದರ್ಶನ ತೋರ್ತಿದ್ದಾರೆ. ಇವರ ಯಶೋಗಾತೆ ಹೀಗೆ ಮುಂದುವರಿಯಲಿ ಈ ಬಾರಿಯ ವಿಶ್ವಕಪ್​​ ತಮ್ಮದಾಗಿಸಿಕೊಳ್ಳಲಿ ಎಂಬುದು ನಮ್ಮ ಆಶಯ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!