ವಿಂಬಲ್ಡನ್ ಕದನ: ಫೆಡರರ್-ಜೋಕೋವಿಚ್ ಜಯಭೇರಿ

By Suvarna Web DeskFirst Published Jul 4, 2017, 10:41 PM IST
Highlights

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜೋಕೋವಿಕ್, ಪಂದ್ಯ ಈ ರೀತಿ ಕೊನೆಗಾಣುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದೊಂದು ನೋವಿನ ವಿಚಾರ ಎಂದಿದ್ದಾರೆ.

ಲಂಡನ್(ಜು.04): ಮಾಜಿ ಚಾಂಪಿಯನ್ಸ್'ಗಳಾದ ರೋಜರ್ ಫೆಡರರ್ ಹಾಗೂ ನೋವಾಕ್ ಜೋಕೋವಿಚ್ ವಿಂಬಲ್ಡನ್ ಟೂರ್ನಿಯಲ್ಲಿ ಅನಾಯಾಸವಾಗಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಇವರಿಬ್ಬರ ಎದುರಾಳಿಗಳೂ ಗಾಯದ ಸಮಸ್ಯೆಯಿಂದಾಗಿ ಪಂದ್ಯವನ್ನು ಪೂರ್ಣಗೊಳಿಸದೇ ಹಿಂದೆ ಸರಿದರೂ, ಹೀಗಾಗಿ ಜೋಕೋ ಹಾಗೂ ಫೆಡರರ್ ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದರು.

ಟೂರ್ನಿಯ ಮೂರನೇ ಶ್ರೇಯಾಂಕಿತ ಫೆಡರರ್ ಉಕ್ರೇನ್ ಆಟಗಾರ ಅಲೆಕ್ಸಾಂಡರ್ ಡೊಲ್ಗೋಪೊಲವ್ ಎದುರು 6-3, 3-0 ಸೆಟ್ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. ಈ ವೇಳೆ ಉಕ್ರೇನ್ ಆಟಗಾರನಿಗೆ ಹಿಮ್ಮಡಿ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದರು. ಈ ಮೂಲಕ ವಿಂಬಲ್ಡನ್ ಟೂರ್ನಿಯಲ್ಲಿ ಫೆಡರರ್ 85 ಗೆಲುವಿನ ಸಾಧನೆ ಮಾಡಿದರು.

ಮತ್ತೊಂದು ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಎರಡನೇ ಶ್ರೇಯಾಕಿತ ನೋವಾಕ್ ಜೋಕೋವಿಚ್, ಮಾರ್ಟೀನ್ ಕ್ಲಿಜಾನ್ ಎದುರು 6-2, 2-0 ಮುನ್ನಡೆ ಕಾಯ್ದುಕೊಂಡಿದ್ದರು. ಎರಡನೇ ಸೆಟ್ ನಡೆಯುತ್ತಿದ್ದಾಗ ಮಾರ್ಟೀನ್ ಕ್ಲಿಜಾನ್ ಗಾಯದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಂದ್ಯದಿಂದ ಹಿಂದೆ ಸರಿದರು.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಜೋಕೋವಿಕ್, ಪಂದ್ಯ ಈ ರೀತಿ ಕೊನೆಗಾಣುತ್ತದೆ ಎಂದು ನಾನು ಊಹಿಸಿರಲಿಲ್ಲ. ಇದೊಂದು ನೋವಿನ ವಿಚಾರ ಎಂದಿದ್ದಾರೆ.

click me!