ವಿಂಬಲ್ಡನ್ 2026: ವಿಶ್ವ ನಂ.1 ಸಿನ್ನರ್ ವಿರುದ್ಧ ನೋವಾಕ್ ಜೋಕೋವಿಚ್‌ಗೆ ಅಗ್ನಿಪರೀಕ್ಷೆ

Kannadaprabha News   | Kannada Prabha
Published : Jul 10, 2026, 10:19 AM IST
Novak Djokovic

ಸಾರಾಂಶ

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ನೋವಾಕ್‌ ಜೋಕೋವಿಚ್‌ ಮತ್ತು ಹಾಲಿ ಚಾಂಪಿಯನ್‌ ಯಾನ್ನಿಕ್‌ ಸಿನ್ನರ್‌ ಮುಖಾಮುಖಿಯಾಗಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ, ಅಮೆರಿಕದ ಕೊಕೊ ಗಾಫ್‌ರನ್ನು ಸೋಲಿಸಿದ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಫೈನಲ್‌ ಪ್ರವೇಶಿಸಿದ್ದಾರೆ.

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಶುಕ್ರವಾರ ಸರ್ಬಿಯಾದ ನೋವಾಕ್‌ ಜೋಕೋವಿಚ್‌ ಹಾಗೂ ಇಟಲಿಯ ಯಾನ್ನಿಕ್‌ ಸಿನ್ನರ್‌ ಮುಖಾಮುಖಿಯಾಗಲಿದ್ದಾರೆ.

39 ವರ್ಷದ ಜೋಕೋವಿಚ್‌ ಗೆದ್ದಿರುವ 24 ಗ್ರ್ಯಾನ್‌ಸ್ಲಾಂ ಟ್ರೋಫಿಗಳ ಪೈಕಿ ಏಳನ್ನು ವಿಂಬಲ್ಡನ್‌ನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2022ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರು. 2023ರಿಂದ ಅವರು ಒಂದೂ ಗ್ರ್ಯಾನ್‌ಸ್ಲಾಂ ಗೆದ್ದಿಲ್ಲ. ಈ ಬಾರಿ ವಿಂಬಲ್ಡನ್‌ ಗೆಲ್ಲುವ ಮೂಲಕ 25 ಗ್ರ್ಯಾನ್‌ಸ್ಲಾಂಗಳ ಕನಸು ನನಸು ಮಾಡಿಕೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ. ಮತ್ತೊಂದೆಡೆ ವಿಶ್ವ ನಂ.1, ಹಾಲಿ ಚಾಂಪಿಯನ್‌ ಸಿನ್ನರ್‌ ಸತತ 2ನೇ ವಿಂಬಲ್ಡನ್‌ ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.

ಇವರಿಬ್ಬರ ನಡುವಿನ ಈವರೆಗಿನ 11 ಮುಖಾಮುಖಿಯಲ್ಲಿ ಸಿನ್ನರ್‌ 6ರಲ್ಲಿ ಗೆದ್ದಿದ್ದರೆ, ಜೋಕೋ 5 ಪಂದ್ಯ ಗೆದ್ದಿದ್ದಾರೆ. ಕಳೆದ ವರ್ಷ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಜೋಕೋ ವಿರುದ್ಧ ಸಿನ್ನರ್‌ ಜಯಭೇರಿ ಬಾರಿಸಿದ್ದರು.

ಕೊಕೊ ಗಾಫ್‌ ಓಟಕ್ಕೆ ಬ್ರೇಕ್‌ ಹಾಕಿ ಫೈನಲ್‌ ಪ್ರವೇಶಿಸಿದ ಮುಕೋವಾ

ಲಂಡನ್: ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಅವರು ಅಮೆರಿಕದ ಕೊಕೊ ಗಾಫ್‌ ವಿರುದ್ಧ ಮಹಿಳಾ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಜಯಭೇರಿ ಬಾರಿಸಿದರು. ಈ ಮೂಲಕ ಚೊಚ್ಚಲ ಗ್ರ್ಯಾನ್‌ಸ್ಲಾಂ ಟ್ರೋಫಿ ಗೆಲುವಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

2023ರ ಯುಎಸ್‌ ಓಪನ್‌ ಹಾಗೂ 2025ರ ಫ್ರೆಂಚ್‌ ಓಪನ್ ವಿಜೇತ ಗಾಫ್‌, ವಿಂಬಲ್ಡನ್‌ನಲ್ಲಿ ಮೊದಲ ಬಾರಿ ಸೆಮಿಫೈನಲ್‌ಗೇರಿದ್ದರು. ಆದರೆ 10ನೇ ಶ್ರೇಯಾಂಕಿತೆ ಮುಕೋವಾ ವಿರುದ್ಧ 2-6, 6-1, 6-7(10-12) ಸೆಟ್‌ಗಳಲ್ಲಿ ಪರಾಭವಗೊಂಡರು. ಈ ಹಿಂದೆ ಮುಕೋವಾ ವಿರುದ್ಧ ಗಾಫ್‌ ಆಡಿದ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದಿದ್ದರೂ ಈ ಬಾರಿ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ಶಾಕಿಂಗ್ ನಿರ್ಧಾರ.. ಟಿ20 ಲೀಗ್‌ನಿಂದ ದಿಢೀರ್ ಹಿಂದೆ ಸರಿದು ಅಚ್ಚರಿ..!
ಟೀಮ್ ಇಂಡಿಯಾದಲ್ಲಿ ನಡೀತಿದೆಯಾ ನೆಪೋಟಿಸಂ? ಇಬ್ಬರು ಪ್ಲೇಯರ್ಸ್, ಆ 3 ತಪ್ಪುಗಳೇನು?