ಇಂಡಿಯನ್‌ ಟೀಂಗೆ ಸೋಲು; ವಿದೇಶಿ ಪಿಚ್‌ಗಳಲ್ಲಿ ಬಯಲಾಯ್ತು IPL ಹೀರೋಗಳ ಅಸಲಿ ಆಟ! ಮಕಾಡೆ ಮಲಗಲು ಕಾರಣವೇನು?

Published : Jul 09, 2026, 06:00 PM IST
Why India lost to Ireland T20

ಸಾರಾಂಶ

Why India lost to Ireland T20: IPL ಮುಗಿದಿದೆ. ಈಗ ಭಾರತ ಟೀಂ ಬೇರೆ ದೇಶದ ಟೀಂ ವಿರುದ್ಧ ಆಟ ಆಡಿ ಗೆಲ್ಲಬೇಕಿತ್ತು. ಆದರೆ ಇಂಗ್ಲೆಂಡ್‌, ಐರ್ಲೆಂಡ್‌ ಸರಣಿ ಸೋಲಿನಲ್ಲಿ ಇಂಡಿಯನ್‌ ಟೀಂ ಸೋತಿದೆ. ಇದಕ್ಕೆ ಕಾರಣ ಏನು? ಯಾಕೆ ಹೀಗಾಯ್ತು? 

Why India lost to Ireland T20: ಐಪಿಎಲ್‌ ಮುಗಿದು ಈಗ ಭಾರತ ಟೀಂ ತನ್ನ ದೇಶಕ್ಕೋಸ್ಕರ ಆಡಬೇಕು. ಆದರೆ ನಾಲ್ಕು ತಿಂಗಳ ಹಿಂದೆ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿದ್ದ ಭಾರತ ತಂಡ, ಈಗ ಸತತ ಸೋಲುಗಳಿಂದ ಕಂಗಾಲಾಗಿದೆ. ಐರ್ಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 76 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ ದೊಡ್ಡ ಮುಖಭಂಗ ಅನುಭವಿಸಿದೆ. ತಂಡದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಅಸಲಿ ಸಮಸ್ಯೆ ಬೇರೆಯೇ ಇದೆ.

ಮುಖ್ಯ ಕಾರಣಗಳಿವು

ಅಸ್ಥಿರ ನಾಯಕತ್ವ

ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನ ಹಾಗೂ ಮೈದಾನದಲ್ಲಿ ಅವರ ತಪ್ಪು ನಿರ್ಧಾರಗಳು ಟೀಕೆಗೆ ಒಳಗಾಗಿವೆ.

ಐಪಿಎಲ್ ಹ್ಯಾಂಗೋವರ್

ಭಾರತದ ಬ್ಯಾಟರ್‌ಗಳು ಐಪಿಎಲ್‌ನ ಫ್ಲಾಟ್ ಪಿಚ್‌ಗಳಲ್ಲಾಡುವಂತೆ ವಿದೇಶದಲ್ಲೂ ಅತಿಯಾದ ಆಕ್ರಮಣಕಾರಿ ಆಟಕ್ಕೆ ಕೈಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಂಗ್ಲೆಂಡ್‌ನಂತಹ ಪಿಚ್‌ಗಳಿಗೆ ಬೇಕಾದ ತಾಳ್ಮೆ ನಮ್ಮ ಆಟಗಾರರಲ್ಲಿ ಕಾಣಿಸುತ್ತಿಲ್ಲ.

ಫಾರ್ಮ್‌ನಲ್ಲಿಲ್ಲದ ಸಂಜು ಸ್ಯಾಮ್ಸನ್ ಬದಲಿಗೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕಠಿಣ ವಿದೇಶಿ ಪ್ರವಾಸಕ್ಕೆ ಆಯ್ಕೆ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಆಟಗಾರರು ಸಾಕಷ್ಟು ತಪ್ಪುಗಳನ್ನು ಮಾಡುತ್ತಿದ್ದಾರೆ (ಉದಾಹರಣೆಗೆ: ರವಿ ಬಿಷ್ಣೋಯ್ ಅವರ ನೋ-ಬಾಲ್ ಮತ್ತು ದುಬಾರಿ ಬೌಲಿಂಗ್).

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್ ಬುಮ್ರಾ ಅವರಂತಹ ಹಿರಿಯ ಮತ್ತು ಅನುಭವಿ ಆಟಗಾರರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಯುವ ಆಟಗಾರರ ದಂಡು ವಿದೇಶಿ ಪಿಚ್‌ಗಳಲ್ಲಿ ಕಷ್ಟಪಡುತ್ತಿದೆ.

ಕೋಚ್ ಗೌತಮ್ ಗಂಭೀರ್ ತಂಡದಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನಿಸುತ್ತಿರುವುದು ನಿಜ. ಆದರೆ, ಸದ್ಯದ ಭಾರತ ತಂಡ ವಿಶ್ವಕಪ್ ಗೆದ್ದ ತಂಡದಂತೆ ಭಯವಿಲ್ಲದೆ ಆಡಲು ಬಯಸುತ್ತಿದೆ, ಆದರೆ ಆ ಆಟಕ್ಕೆ ಬೇಕಾದ ಅನುಭವ ಸದ್ಯದ ತಂಡದಲ್ಲಿಲ್ಲ. ತಂಡವು ಎರಡು ಗೊಂದಲಗಳ ನಡುವೆ ಸಿಲುಕಿಕೊಂಡಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India vs England 4th T20I: ಒಂದು ಪೈಸೆ ಖರ್ಚಿಲ್ಲದೇ ಫ್ರೀ ಆಗಿ ಲೈವ್ ಮ್ಯಾಚ್ ನೋಡೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
Cricket: ಸಚಿನ್, ದ್ರಾವಿಡ್ ನಂತರ, ಅಂಡರ್-19 ತಂಡಕ್ಕೆ ಮತ್ತೊಬ್ಬ ದಿಗ್ಗಜನ ಪುತ್ರ ಎಂಟ್ರಿ!