ಸತತ 6ನೇ ಬಾರಿ ವಿಂಬಲ್ಡನ್ ಫೈನಲ್‌ಗೆ ನೋವಾಕ್ ಜೋಕೋವಿಚ್!

By Kannadaprabha News  |  First Published Jul 13, 2024, 10:02 AM IST

ಶುಕ್ರವಾರ ನಡೆದ ಪುರುಷರ ಸಿಂಗಲ್ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷದ ಆಲ್ಕರಜ್, 5ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡೈಡೆವ್ ವಿರುದ್ಧ 6-7(1/7), 6-3, 6-4, 6-4 ಸೆಟ್‌ಗಳಲ್ಲಿ ಜಯಿಸಿದರು. 2021ರ ಯುಎಸ್‌ ಓಪನ್ ವಿಜೇತ ಮೆಕ್ವೆಡೆವ್ 3ನೇ ಸೆಟ್‌ನಲ್ಲಿ ಆಲ್ಕರಜ್‌ಗೆ ಉತ್ತಮ ಪೈಪೋಟಿ ನೀಡಿದರಾದರೂ, ಪಂದ್ಯ ದ ಮೇಲೆ ಹಿಡಿತ ಸಾಧಿಸಲಾಗಲಿಲ್ಲ.


ಲಂಡನ್: 7 ಬಾರಿ ಚಾಂಪಿಯನ್ ನೋವಾಕ್ ಜೋಕೋವಿಚ್ ಹಾಗೂ ಟೆನಿಸ್ ಲೋಕದ ಹೊಸ ಸೂಪರ್‌ಸ್ಟಾರ್‌ ಕಾರ್ಲೊಸ್ ಆಲ್ಕರಜ್ ವಿಂಬಲ್ಡನ್ ಗ್ಯಾನ್‌ಸ್ಲಾಂ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಸತತ 6ನೇ ವರ್ಷ ಫೈನಲ್‌ಗೇರಿರುವ ಜೋಕೋ, ಒಟ್ಟಾರೆ 10ನೇ ಬಾರಿಗೆ ಫೈನಲ್‌ನಲ್ಲಿ ಆಡಲಿದ್ದು, ಆಲ್ಕರಜ್ ಸತತ 2ನೇ ವರ್ಷ ಫೈನಲ್ ಪ್ರವೇಶಿಸಿದ್ದಾರೆ. 

ಶುಕ್ರವಾರ ನಡೆದ ಪುರುಷರ ಸಿಂಗಲ್ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ 21 ವರ್ಷದ ಆಲ್ಕರಜ್, 5ನೇ ಶ್ರೇಯಾಂಕಿತ ರಷ್ಯಾದ ಡ್ಯಾನಿಲ್ ಮೆಡೈಡೆವ್ ವಿರುದ್ಧ 6-7(1/7), 6-3, 6-4, 6-4 ಸೆಟ್‌ಗಳಲ್ಲಿ ಜಯಿಸಿದರು. 2021ರ ಯುಎಸ್‌ ಓಪನ್ ವಿಜೇತ ಮೆಕ್ವೆಡೆವ್ 3ನೇ ಸೆಟ್‌ನಲ್ಲಿ ಆಲ್ಕರಜ್‌ಗೆ ಉತ್ತಮ ಪೈಪೋಟಿ ನೀಡಿದರಾದರೂ, ಪಂದ್ಯ ದ ಮೇಲೆ ಹಿಡಿತ ಸಾಧಿಸಲಾಗಲಿಲ್ಲ.

Tap to resize

Latest Videos

ಭಾರತ ತೊರೆದು ಈ ದೇಶದಲ್ಲಿ ಶಾಶ್ವತವಾಗಿ ನೆಲೆಯೂರಲು ತೀರ್ಮಾನಿಸಿದ್ರಾ ವಿರಾಟ್ ಕೊಹ್ಲಿ..? ಇಲ್ಲಿದೆ ಹೊಸ ಅಪ್‌ಡೇಟ್

ಇದರೊಂದಿಗೆ ವಿಂಬಲ್ಡನ್‌ನಲ್ಲಿ ಸತತ 2ನೇ ಬಾರಿಯೂ ಮೆಡೈಡೆವ್ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊ ಳಿಸಿದರು. ಕಳೆದ ವರ್ಷ ಕೂಡಾ ಮೆಡೈಡೆನ್‌ಗೆ ಆಲ್ಕರಜ್ ವಿರುದ್ಧ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಸೋಲು ಎದುರಾಗಿತ್ತು. ಇನ್ನು ಜೋಕೋವಿಚ್, ಇಟಲಿಯ ಲೊರೆನ್ನೊ ಮುಸೆಟ್ಟಿ ವಿರುದ್ಧ6-4, 7-6, 6-4 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಪುರುಷರ ಸಿಂಗಲ್ಸ್‌ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.

ಜೋಕೋವಿಚ್ ಹಾಗೂ ಆಲರಜ್ 2023ರ ಫೈನಲ್‌ನಲ್ಲೂ ಮುಖಾಮುಖಿಯಾಗಿದ್ದರು. ಜೋಕೋ ವಿರುದ್ಧ ಗೆದ್ದು ಆಲ್ಕರಜ್ ಚೊಚ್ಚಲ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟಿದ್ದರು. ಇದೀಗ ಈ ಇಬ್ಬರೂ ಮತ್ತೊಮ್ಮೆ ಫೈನಲ್‌ನಲ್ಲಿ ಮುಖಾಮುಖಿ ಯಾಗಲಿದ್ದು, ಜೋಕೋ 8ನೇ, ಆಲ್ಕರಜ್ 2ನೇ ವಿಂಬಲ್ಡನ್ ಗೆಲ್ಲಲು ಕಾತರಿಸುತ್ತಿದ್ದಾರೆ. ದಿಗ್ಗಜ ಆಟಗಾರನಿಗೆ ಪ್ರಬಲ ಪೈಪೋಟಿ ನೀಡಲು ಯುವ ತಾರೆ ಕಾಯುತ್ತಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

'ಗಂಭೀರ್ ಕೋಚ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿ...': ಅಚ್ಚರಿಯ ಹೇಳಿಕೆ ಕೊಟ್ಟ ಮಾಜಿ ವೇಗಿ ಡೇಲ್ ಸ್ಟೇಯ್ನ್

ಜೋಕೋ ಈಗಾಗಲೇ 24 ಗ್ರಾನ್ ಸ್ಲಾಂ ಟ್ರೋಫಿಗಳನ್ನು ಗೆದ್ದಿದ್ದು, ಅತಿ ಹೆಚ್ಚು ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. 25 ಗ್ರಾನ್‌ಸ್ಲಾಂ ಮೊದಲಿಗ ಎನಿಸಲು ಕಾತರಿಸುತ್ತಿದ್ದಾರೆ.

ಪೌಲಿನಿ-ಕ್ರೇಜಿಕೋವಾ ಫೈನಲ್ ಹಣಾಹಣಿ ಇಂದು!

ಲಂಡನ್: ವಿಂಬಲ್ಡನ್ ಮಹಿಳಾ ಸಿಂಗಲ್ಸ್‌ನ ಹೊಸ ಚಾಂಪಿಯನ್ ಯಾರು ಎನ್ನುವುದು ಶನಿವಾರ ನಿರ್ಧಾರವಾಗಲಿದೆ. ಫೈನಲ್‌ನಲ್ಲಿ ಇಟಲಿಯ ಜ್ಯಾಸ್ಮಿನ್ ಪೌಲಿನಿ ಹಾಗೂ ಚೆಕ್ ಗಣರಾಜ್ಯದ ಬಾರ್ಬೋರಾ ಕ್ರೇಜಿಕೋವಾ ಮುಖಾಮುಖಿಯಾಗಲಿದ್ದಾರೆ.

2016ರಲ್ಲಿ ಸೆರೆನಾ ವಿಲಿಯಮ್ಸ್‌ ಗೆದ್ದ ಬಳಿಕ ಕಳೆದ 7 ಆವೃತ್ತಿಗಳಲ್ಲಿ ವಿಂಬಲ್ಡನ್ ಹೊಸ ಚಾಂಪಿಯನ್ನರಿಗೆ ಸಾಕ್ಷಿಯಾಗಿದೆ. ಈ ಬಾರಿ ಫೈನಲ್‌ಗೇರಿರುವ ಇಬ್ಬರು ಆಟಗಾರ್ತಿಯರಿಗೂ ಇದು ಮೊದಲ ವಿಂಬಲ್ಡನ್ ಫೈನಲ್ ಆಗಿದೆ. 2021ರಲ್ಲಿ ಫ್ರೆಂಚ್ ಓಪನ್ ಗೆದ್ದಿದ ಕ್ರೇಜಿಕೋವಾ 2ನೇ ಗ್ಯಾನ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಈ ವರ್ಷ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ವಿರುದ್ಧ ಸೋತು ಪ್ರಶಸ್ತಿ ತಪ್ಪಿಸಿಕೊಂಡಿದ್ದ ಜ್ಯಾಸ್ಟಿನ್ ಪೌಲಿನಿ, ಚೊಚ್ಚಲ ಗ್ಯಾನ್‌ಸ್ಲಾಂ ಟ್ರೋಫಿ ಎತ್ತಿಹಿಡಿಯಲು ಕಾತರಿಸುತ್ತಿದ್ದಾರೆ.

ಪಂದ್ಯ ಆರಂಭ: ಸಂಜೆ 6.30ಕ್ಕೆ 
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾ‌ರ್
 

click me!