ವಿಲಿಯಮ್ಸನ್ ಆರ್ಭಟಕ್ಕೆ ತಲೆ ಬಾಗಿದ ಬಾಂಗ್ಲಾದೇಶ

Published : Jan 16, 2017, 01:14 PM ISTUpdated : Apr 11, 2018, 12:58 PM IST
ವಿಲಿಯಮ್ಸನ್ ಆರ್ಭಟಕ್ಕೆ ತಲೆ ಬಾಗಿದ ಬಾಂಗ್ಲಾದೇಶ

ಸಾರಾಂಶ

ವೇಗದ ಬ್ಯಾಟಿಂಗ್‌'ನಿಂದ ಗಮನಸೆಳೆದ ವಿಲಿಯಮ್ಸನ್ ಟೆಸ್ಟ್‌ನಲ್ಲಿ 16ನೇ ಶತಕ ಸಿಡಿಸಿದರು.

ವೆಲ್ಲಿಂಗ್ಟನ್(ಜ.16): ಮಧ್ಯಮ ಕ್ರಮಾಂಕದಲ್ಲಿ ನಾಯಕ ಕೇನ್ ವಿಲಿಯಮ್ಸನ್ (104) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗೆಲುವು ದಾಖಲಿಸಿದೆ. ಇದರೊಂದಿಗೆ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಪಡೆದಿದೆ.

ಇಲ್ಲಿನ ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಅಂತಿಮ ದಿನವಾದ ಇಂದು 3 ವಿಕೆಟ್‌'ಗೆ 66ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ 160ರನ್‌'ಗಳಿಗೆ ಆಲೌಟ್ ಆಯಿತು. ಉಳಿದ 7 ವಿಕೆಟ್‌ಗಳಿಂದ ಬಾಂಗ್ಲಾ ತಂಡ 100ರನ್‌'ಗಳಿಸಲಷ್ಟೇ ಶಕ್ತವಾಯಿತು.

217ರನ್‌'ಗಳ ಗುರಿಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 3 ವಿಕೆಟ್‌'ಗೆ 217ರನ್‌'ಗಳಿಸಿ ಜಯದ ನಗೆ ಬೀರಿತು.

ಆತಿಥೇಯ ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ ಆರಂಭದಲ್ಲಿ ಆರಂಭಿಕರನ್ನು ಬೇಗನೇ ಕಳೆದುಕೊಂಡಿತು. ಟಾಮ್ ಲಥಾಮ್ (16) ಮತ್ತು ಜೀಟ್ ರಾವಲ್ (13)ರನ್‌'ಗಳಿಸಿ ನಿರಾಸೆ ಮೂಡಿಸಿದರು. ನಂತರ ಜತೆಯಾದ ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್, ಬಾಂಗ್ಲಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಈ ಇಬ್ಬರು ಆಟಗಾರರು 3ನೇ ವಿಕೆಟ್‌'ಗೆ 163ರನ್‌'ಗಳನ್ನು ಸೇರಿಸಿ ತಂಡದ ಗೆಲುವನ್ನು ಸನಿಹಗೊಳಿಸಿದರು. ಈ ವೇಳೆ 77 ಎಸೆತಗಳಲ್ಲಿ 6 ಬೌಂಡರಿ ಸಹಿತ 60ರನ್‌'ಗಳಿಸಿದ್ದ ರಾಸ್ ಟೇಲರ್, ಸುಭಾಶಿಸ್ ರಾಯ್ ಬೌಲಿಂಗ್‌'ನಲ್ಲಿ ವಿಕೆಟ್ ಒಪ್ಪಿಸಿದರು. ವೇಗದ ಬ್ಯಾಟಿಂಗ್‌'ನಿಂದ ಗಮನಸೆಳೆದ ವಿಲಿಯಮ್ಸನ್ ಟೆಸ್ಟ್‌ನಲ್ಲಿ 16ನೇ ಶತಕ ಸಿಡಿಸಿದರು. ವಿಲಿಯಮ್ಸನ್ 104 ಮತ್ತು ನಿಕೋಲಸ್ 4 ರನ್‌ಗಳಿಸಿ ಅಜೇಯರಾಗುಳಿದರು. ಬಾಂಗ್ಲಾ ಪರ ಮೆಹದಿ ಹಸನ್ 2, ಸುಭಾಶಿಸ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ 122ರನ್‌'ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ ಮಧ್ಯಮ ಕ್ರಮಾಂಕದಲ್ಲಿ ಹಠಾತ್ತನೇ ಕುಸಿತ ಕಂಡಿತು. ಶಬ್ಬೀರ್ ರೆಹಮಾನ್ (50)ಕೊಂಚ ಪ್ರತಿರೋಧ ತೋರಿದರಾದರೂ ಕಿವೀಸ್ ಬೌಲರ್‌ಗಳ ದಾಳಿಗೆ ಕಂಗಾಲಾದರು. ನಾಯಕ ಮುಷ್ಫೀಕರ್ ರಹೀಂ 13ರನ್‌'ಗಳಿಸಿದ್ದಾಗ ಗಾಯಗೊಂಡು ನಿವೃತ್ತಿ ಹೊಂದಿದರು. ಇನ್ನುಳಿದ ಬ್ಯಾಟ್ಸ್‌ಮನ್‌'ಗಳು ಎರಡಂಕಿ ಮೊತ್ತ ದಾಟಲಿಲ್ಲ. 4ನೇ ದಿನದಾಟದಲ್ಲಿ ಗಾಯಗೊಂಡು ನಿವೃತ್ತಿ ಪಡೆದಿದ್ದ ಆರಂಭಿಕ ಇಮ್ರುಲ್ ಖಯ್ಯಸ್ 36ರನ್‌'ಗಳಿಸಿ ಅಜೇಯರಾಗುಳಿದರು. ಮಾರಕ ಬೌಲಿಂಗ್ ದಾಳಿ ಸಂಘಟಿಸಿದ ನ್ಯೂಜಿಲೆಂಡ್ ಪರ ಬೋಲ್ಟ್ 3, ಸ್ಯಾಂಟ್ನರ್, ವ್ಯಾಗ್ನರ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ ಮೊದಲ ಇನಿಂಗ್ಸ್: 595

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 539

ಬಾಂಗ್ಲಾದೇಶ ದ್ವಿತೀಯ ಇನಿಂಗ್ಸ್: 160

ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್ 217/3

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡಿಗ ಕೆ.ಗೌತಮ್‌!
ಭಾರತ ಎದುರು ಅಂಡರ್-19 ಏಷ್ಯಾಕಪ್ ಗೆದ್ದ ಪಾಕ್ ಆಟಗಾರರಿಗೆ ಪ್ರಧಾನಿ ಭಾರೀ ಬಹುಮಾನ ಘೋಷಣೆ!